25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರಿ‌ ದೇವಸ್ಥಾನದ ವಾರ್ಷಿಕ ‌ಜಾತ್ರೆ: ದೀಕ್ಷಿತ್ ಅರಂತೊಟ್ಟು ಇವರ ‘ಡಿಲೈಟ್ ಡೆಕೋರೇಷನ್ಸ್’ ಉದ್ಘಾಟನೆ

ಕೊಯ್ಯೂರು : ಶ್ರೀ ಪಂಚದುರ್ಗಾಪರಮೇಶ್ವರಿ‌ ದೇವಸ್ಥಾನ ಕೊಯ್ಯೂರು ಇದರ ವಾರ್ಷಿಕ ‌ಜಾತ್ರಾ ಮಹೋತ್ಸವದಂದು ಅರಂತೊಟ್ಟು ಕಟ್ಟೆಪೂಜೆಯನ್ನು ನೆರವೇರಿಸಲಾಯಿತು.

ಮೂಲಗುಂಡದಿಂದ‌ ಭಂಡಾರದ ಆಗಮನದ ಸಂದರ್ಭ ಸಂದೇಶ್ ಮದ್ದಡ್ಕ ಇವರ ನೇತೃತ್ವದಲ್ಲಿ ಸುಮಾರು 10 ಭಜನಾ ತಂಡಗಳಿಂದ ಭಜನಾ ‌ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ದೀಕ್ಷಿತ್ ಅರಂತೊಟ್ಟು ಇವರ ಡಿಲೈಟ್ ಡೆಕೋರೇಷನ್ಸ್ (Delight Decorations) ನ್ನು ದ್ವಾರಕಾ ಡ್ರೈವಿಂಗ್ ಸ್ಕೂಲ್ ‌ಮಾಲಕರಾದ ಯಶವಂತ ಆರ್ ಬಾಳಿಗಾ ಉದ್ಘಾಟಿಸಿದರು.

ಈ ವೇಳೆ ಅರಂತೊಟ್ಟು ‌ಕುಟುಂಬಸ್ಥರ ವತಿಯಿಂದ ‌ಬೆಳ್ತಂಗಡಿ‌ ತಾಲೂಕಿನ ‌ಹೆಸರಾಂತ ಸ್ನೇಕ್‌‌ಮಾಸ್ಟರ್ ಅಶೋಕ್‌‌ಕುಮಾರ್ ಲಾಯಿಲ ಹಾಗೂ ಚಂದ್ರಶೇಖರ ‌ಗೌಡ ಮಾವಿನಕಟ್ಟೆ ಇವರಿಗೆ ಸನ್ಮಾನವನ್ನು ಯಶವಂತ ಬಾಳಿಗಾ ಹಾಗೂ ಪ್ರವೀಣ್ ಗೌಡ ನೆರವೇರಿಸಿದರು.

ಈ‌‌ ಸಂದರ್ಭದಲ್ಲಿ ಹಿತೇಶ್ ಬಳ್ಳಾಲ್ ಕೊಯ್ಯೂರು ಗುತ್ತು, ತೃಪ್ತ ಜೈನ್‌ ಉಣಿಲೆ ಗುತ್ತು, ಯಶವಂತ ಬಾಳಿಗಾ ಬೆಳ್ತಂಗಡಿ, ಪ್ರವೀಣ್ ಗೌಡ ಮಾವಿನಕಟ್ಟೆ ಹಾಗೂ ಅರಂತೊಟ್ಟು ‌ಕುಟುಂಬಸ್ಥರು ಮತ್ತು ಭಕ್ತಾದಿಗಳು ಊರ ಪರವೂರ‌ ಗಣ್ಯರು ಉಪಸ್ಥಿತರಿದ್ದರು.

Related posts

ಅಳದಂಗಡಿ ಅರಮನೆಗೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಭೇಟಿ

Suddi Udaya

ಮಂಜೊಟ್ಟಿ ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಸರಕಾರಿ ನೌಕರರ ಜಿಲ್ಲಾ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆ: ಹೇಮಚಂದ್ರರಿಗೆ ಪ್ರಥಮ ಸ್ಥಾನ

Suddi Udaya

ಡಿ.5: ವಿದ್ಯುತ್ ನಿಲುಗಡೆ

Suddi Udaya

ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ನೇತೃತ್ವದಲ್ಲಿ ಸಮಾಜ ಸೇವಕ ಕೇಶವ ಫಡಕೆಯವರಿಗೆ ಗೌರವಾರ್ಪಣೆ

Suddi Udaya

ಮಚ್ಚಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ: ರೂ. 65ಲಕ್ಷ ಲಾಭ, ಶೇ.15 ಡಿವಿಡೆಂಟ್

Suddi Udaya
error: Content is protected !!