ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಇಂದು (ಜು.17) ಬಳಂಜ ಶಿವಾಜಿ ಪ್ರೆಂಡ್ಸ್ ಕ್ಲಬ್ ನೇತಾಜಿನಗರ ಇವರ ವತಿಯಿಂದ ತಾಳ ಮದ್ದಳೆ ಮತ್ತು ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ

ಬಳಂಜ: ಶಿವಾಜಿ ಪ್ರೆಂಡ್ಸ್ ಕ್ಲಬ್ ನೇತಾಜಿನಗರ ಬಳಂಜ ಇವರ ವತಿಯಿಂದ ಅನಾರೋಗ್ಯದಿಂದ ಬಳಲುತ್ತಿರುವವರ ಸಹಾಯಾರ್ಥವಾಗಿ ಜಿಲ್ಲೆಯ ಹೆಸರಾಂತ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ವಿದುರಾತಿಥ್ಯ ರಣವೀಳ್ಯ ಎಂಬ ತಾಳಮದ್ದಳೆ ಕಾರ್ಯಕ್ರಮ ಇಂದು (ಜು.17) ಮಧ್ಯಾಹ್ನ ನಡೆಯಲಿದೆ.

ಬಳಂಜದಲ್ಲಿ ಹಲವಾರು ವರ್ಷಗಳಿಂದ ಸಮಾಜಮುಖಿ ಸೇವೆಯನ್ನು ನಡೆಸುತ್ತಾ ಬಂದಿರುವ ಶಿವಾಜಿ ಫ್ರೆಂಡ್ಸ್ ಕ್ಲಬ್ ಸದಸ್ಯರು ಈ ವರ್ಷವೂ ಅನಾರೋಗ್ಯದಲ್ಲಿರುವ ಬಡ ಕುಟುಂಬಗಳನ್ನು ಗುರುತಿಸಿ ಸಹಾಯಹಸ್ತ ನೀಡುವುದು ಮತ್ತು ಬಳಂಜ ಶಾಲೆಯಲ್ಲಿ ಈ ವರ್ಷ ಹತ್ತನೇ ತರಗತಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಇಬ್ಬರು ವಿದ್ಯಾರ್ಥಿಗಳಾದ ಶರಣ್ಯ ಮತ್ತು ಮನ್ವಿತಾರಿಗೆ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಎಲ್ಲರೂ ಈ ಸಮಾರಂಭದಲ್ಲಿ ಭಾಗಿಯಾಗಬೇಕಾಗಿ ಕ್ಲಬ್ ನ ಅಧ್ಯಕ್ಷ ಹರೀಶ್ ದೇವಾಡಿಗ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್ ಕುಮಾರ್ ಕೆ.ತಿಳಿಸಿದ್ದಾರೆ.

Related posts

ಶಿಶಿಲ ಜಯರಾಮ ನೆಲ್ಲಿತ್ತಾಯರಿಗೆ ” ಭಜನಾ ಭಾಸ್ಕರ ” ಪ್ರಶಸ್ತಿ :

Suddi Udaya

ಕಳೆಂಜ ಗ್ರಾ.ಪಂ. ವ್ಯಾಪ್ತಿಯಲ್ಲಿ ಪಂಚಾಯತ್ ಅನುದಾನದಿಂದ ಅಳವಡಿಸಿದ ಸೋಲಾರ್ ಲೈಟ್ ಕಳವು: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 19ನೇ ಬೆಳ್ತಂಗಡಿ ಮಹಿಳಾ ಶಾಖೆಯ ಉದ್ಘಾಟನಾ ಸಮಾರಂಭ

Suddi Udaya

ಪದ್ಮುಂಜ: ರವಿಚಂದ್ರ ಶೆಟ್ಟಿರವರ ಗೃಹಪ್ರವೇಶದ ಕಾರ್ಯಕ್ರಮದಲ್ಲಿ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ

Suddi Udaya

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನ ಆಡಳಿತ ಸಮಿತಿ ರಚನೆ

Suddi Udaya

ಉಜಿರೆ ಸಂಧ್ಯಾ ಪ್ರೆಶ್ ಉತ್ಪಾದನಾ ಮತ್ತು ಪ್ಯಾಕೇಜಿಂಗ್ ಘಟಕಕ್ಕೆ ಅತ್ಯುತ್ತಮ ‘ಟೈಮ್ಸ್ ಬ್ಯುಸಿನೆಸ್ ಅವಾರ್ಡ್ಸ್-2024’ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಅರ್ಚನಾ ರಾಜೇಶ್ ಪೈಯವರಿಗೆ ಪ್ರಶಸ್ತಿ ಹಸ್ತಾಂತರ

Suddi Udaya
error: Content is protected !!