29.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಮುಂಡಾಜೆ ಶಿಕ್ಷಣ ಸಂಸ್ಥೆಯ ವೆಬ್ ಸೈಟ್ ಉದ್ಘಾಟನೆ ಮತ್ತು ದೀಪ ಪ್ರದಾನ ಕಾರ್ಯಕ್ರಮ

ಮುಂಡಾಜೆ: ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಇದರ ಆಡಳಿತಕ್ಕೊಳಪಟ್ಟ ವಿವೇಕಾನಂದ ಶಿಕ್ಷಣ ಸಂಸ್ಥೆಗಳು ಮುಂಡಾಜೆಯಲ್ಲಿ ಶಿಕ್ಷಣ ಸಂಸ್ಥೆಯ ವೆಬ್ ಸೈಟ್ ಉದ್ಘಾಟನೆ ಕಾರ್ಯಕ್ರಮ ಹಾಗೂ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯ ದೀಪ ಪ್ರಧಾನ ಕಾರ್ಯಕ್ರಮವು ಎ.ಪಿ.ಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅಭ್ಯಾಗತರಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಇದರ ಖಜಾಂಚಿಯವರಾದ ಅಚ್ಯುತ ನಾಯಕ್ ಉದ್ಘಾಟಿಸಿ, ‘ಸಂಸ್ಕಾರವು ನಿತ್ಯ ಜೀವನದ ಅಂಗವಾಗಬೇಕು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಸಂಸ್ಕಾರವನ್ನು ಚಿಕ್ಕಂದಿನಿಂದಲೇ ಮೈಗೂಡಿಸಿಕೊಳ್ಳಬೇಕು’ ಎಂದರು.


ಮುಂಡಾಜೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ವಿನಯಚಂದ್ರ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಚಂದ್ರಮತಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.


ಈ ಸಂದರ್ಭದಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳು 9ನೇ ತರಗತಿಯ ವಿದ್ಯಾರ್ಥಿಗಳಿಗೆ ದೀಪವನ್ನು ಹಸ್ತಾಂತರಿಸಿದರು.
ವಿದ್ಯಾರ್ಥಿಗಳಾದ ಶ್ರೀನಂದ ಸ್ವಾಗತಿಸಿ, ಸಾತ್ವಿ ಕಾರ್ಯಕ್ರಮವನ್ನು ನಿರೂಪಿಸಿ, ಸ್ಪಂದನ ಹೆಚ್ ಧನ್ಯವಾದಗೈದರು.

Related posts

ಉಜಿರೆ ಮಹಿಳಾ ಜ್ಞಾನವಿಕಾಸ ಕೇಂದ್ರದಲ್ಲಿ ಬೀದಿ ನಾಟಕ

Suddi Udaya

ಅಮೇರಿಕಾದ ಪ್ರತಿಷ್ಠಿತ ಹಾರ್ವರ್ಡ್ ಯೂನಿವರ್ಸಿಟಿ ಯ ಸ್ಟ್ರಾಟೆಜಿಕ್ ಲೀಡರ್ ಶಿಪ್ ಪ್ರೋಗ್ರಾಮ್ ಗೆ ಸುಳ್ಯದ ಪ್ರದೀಪ್ ಜೈನ್ ಬಲ್ನಾಡು ಪೇಟೆ ಆಯ್ಕೆ

Suddi Udaya

ಉಜಿರೆ ಕೇರಿಮಾರ್ ನಿವಾಸಿ ಶ್ರೀಮತಿ ಚೆಲುವಮ್ಮ ನಿಧನ

Suddi Udaya

ಅರಸಿನಮಕ್ಕಿ: ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ಸದಸ್ಯರಿಗೆ ಸಮವಸ್ತ್ರ ವಿತರಣೆ

Suddi Udaya

ಸುನ್ನೀ ಸಮೂಹ ಸಂಘಟನೆಗಳ ವತಿಯಿಂದ ರಂಝಾನ್ ಕಿಟ್, ಸಾಮೂಹಿಕ ಇಫ್ತಾರ್ ಮೀಟ್

Suddi Udaya

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಕೆ. ರಾಧಾಕೃಷ್ಣ ಆಯ್ಕೆ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ