ಅರಸಿನಮಕ್ಕಿ: ವೀಸಾ ಕೊಡಿಸುವುದಾಗಿ ನಂಬಿಸಿ ರೂ. 2.50 ಲಕ್ಷ ವಂಚನೆ-ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ವಿದೇಶಕ್ಕೆ ಹೋಗುವ ಕನಸು ಹೊತ್ತಿದ್ದ ವ್ಯಕ್ತಿಯೋರ್ವರಿಗೆ ಪರಿಚಿತನೋರ್ವ ವೀಸಾ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿರುವ ಪ್ರಕರಣವೊಂದು ಹತ್ಯಡ್ಕ ಗ್ರಾಮದಿಂದ ಬೆಳಕಿಗೆ ಬಂದಿದೆ.
ಬೆಳ್ತಂಗಡಿ ತಾಲೂಕು ಹತ್ಯಡ್ಕ ಗ್ರಾಮದ ಅರಸಿನಮಕ್ಕಿ ನಿವಾಸಿ ಅಲ್ಬಿನ್ ಕೆ.ಆರ್ ಎಂಬವರೇ ಪರಿಚಿತ ಮನೋಜ್ ಎಂಬಾತನಿಂದ ವೀಸಾ ವಂಚನೆಗೊಳಗಾದ ವ್ಯಕ್ತಿಯಾಗಿದ್ದಾರೆ.

ಹತ್ಯಡ್ಕ ಗ್ರಾಮದ ಅರಸಿನಮಕ್ಕಿ ನಿವಾಸಿ ರೆಜಿ ಕೆ.ಎ.(47) ಎಂಬವರ ಪುತ್ರ ಅಲ್ಬಿನ್ ಕೆ.ಆರ್ ಎಂಬವರಿಗೆ ಪೋಲ್ಯಾಂಡ್‌ ದೇಶದಲ್ಲಿ ಉದ್ಯೋಗಕ್ಕೆ ಹೋಗಲು ಆಪಾದಿತ ಮನೋಜ್ ಎಂಬಾತನು ವೀಸಾ ಕೊಡಿಸುವುದಾಗಿ ನಂಬಿಸಿ ವಂಚಿಸಿರುವುದಾಗಿದೆ.

ಮನೋಜ್ ಎಂಬಾತನು 2023ರ ಮೇ 22 ರಿಂದ 2024ರ ಮಾ19ರ ಅವಧಿಯಲ್ಲಿ ವಿವಿಧ ಕಾರಣಗಳನ್ನು ನೀಡಿ ಮನೋಜ್ ಅವರಿಂದ ಹಂತ ಹಂತವಾಗಿ ಒಟ್ಟು 2,50,000 ರೂಗಳನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದನು. ಆದರೆ ಈತ ಇದುವರೆಗೆ ಕೊಟ್ಟ ಮಾತಿನಂತೆ ಅಲ್ಬಿನ್ ಕೆ.ಆರ್ ಅವರಿಗೆ ವೀಸಾವನ್ನು ಕೊಡಿಸದೇ ಪಡೆದ ಹಣವನ್ನು ಹಿಂತಿರುಗಿಸದೇ ವಂಚಿಸಿರುವ ಘಟನೆ ನಡೆದಿದೆ.

ಇದೀಗ ವಂಚನೆಗೊಳಗಾದ ಅಲ್ಬಿನ್ ಕೆ.ಆರ್ ಎಂಬವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Comment

error: Content is protected !!