23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವ

ಮಿತ್ತಬಾಗಿಲು: ಇಲ್ಲಿಯ ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ/ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಮಾ.20 ರಿಂದ ಪ್ರಾರಂಭಗೊಂಡು 28 ರವರೆಗೆ ವೇದಮೂರ್ತಿ ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವಿವಿಧ ತಾಂತ್ರಿಕ, ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಇಂದು ಸಂಜೆ ಬೆದ್ರಬೆಟ್ಟು ಮಹಮ್ಮಾಯಿ ನಗರದಿಂದ ಮೆರವಣಿಗೆ ಯ ಮೂಲಕ ಹೊರಕಾಣಿಕೆ ಸಮರ್ಪಣೆ ನಡೆಯಿತು. ನಂತರ ಭಜನಾ ಕಾರ್ಯಕ್ರಮಗಳು , ಉಗ್ರಾಣದ ಉದ್ಘಾಟನೆ ಕಾರ್ಯಕ್ರಮವು ನಡೆಯಿತು.

ನಂತರ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧರ್ಮಸ್ಥಳ ನಿತ್ಯಾನಂದ ನಗರ ಶ್ರೀ ರಾಮಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ಆಶೀರ್ವಚನ ನೀಡಿ, ಧಮ೯ದ ಅಂತರಾಳದಲ್ಲಿ ಸುಖವಿದೆ. ಧಮ೯ವನ್ನು ಪಾಲಿಸುವವನಿಗೆ ಧಮ೯ಬೆಂಗಲಾವಗಿ ನಿಲ್ಲುತ್ತದೆ ಎಂದು ನುಡಿದರು.

ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ. ಕೆ. ಧನಂಜಯ ರಾವ್ ವಹಿಸಿದರು. ಧಾರ್ಮಿಕ ಉಪನ್ಯಾಸವನ್ನು ನಾವೂರು ಆರೋಗ್ಯ ಕ್ಲಿನಿಕ್ ಡಾ| ಪ್ರದೀಪ್ ಎ. ನೀಡಿದರು.

ಮುಖ್ಯ ಅತಿಥಿಗಳಾಗಿ , ಬಂಗಾಡಿ ಅರಮನೆ ಯಶೋಧರ ಬಲ್ಲಾಳ್‌, ಭುಜಬಲಿ ಧಮ೯ಸ್ಥಳ, ಬ್ರಹ್ಮಕಲಶೋತ್ಸವ ಸಮಿತಿ ಸಂಘಟನಾ ಕಾರ್ಯದರ್ಶಿ ವಿನಯಚಂದ್ರ, ಸೇನೆರೆಬೆಟ್ಟು, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿ ಎಸ್.ಸಿ ಘಟಕ ಅಧ್ಯಕ್ಷ ಕೆ. ನೇಮಿರಾಜ್ ಕಿಲ್ಲೂರು, ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ಆಡಳಿತಾಧಿಕಾರಿ ಮೋಹನ್ ಬಂಗೇರ ಕಾರಿಂಜ, ಮಿತ್ತಬಾಗಿಲು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಅಧ್ಯಕ್ಷ ಶೇಖರ ಪೂಜಾರಿ ಕಂಬಳದಡ್ಡು, ಭದ್ರಕಾಳಿ ಬೈಲುವಾರು ಸಮಿತಿ ಪ್ರಮುಖರು ಸತೀಶ್ ಆಚಾರ್ಯ ಚಿಲುಮೆ, ಅನ್ನಪೂರ್ಣೇಶ್ವರಿ ಬೈಲುವಾರು ಸಮಿತಿ ಪ್ರಮುಖರು ಸುಂದರ ಗೌಡ ಪಂಜೊಟ್ಟು, ಆದಿಶಕ್ತಿ ಬೈಲುವಾರು ಸಮಿತಿ ಪ್ರಮುಖರು ವಿಠಲ ಪುರುಷ ಕಿಲ್ಲೂರು, ದುರ್ಗಾವಾಹಿನಿ ಬೈಲುವಾರು ಸಮಿತಿ ಪ್ರಮುಖರು ಪ್ರಭಾಕರ ಪೂಜಾರಿ ಬೊಳ್ಳಾಜೆ, ಬ್ರಹ್ಮಚಾರಿಣಿ ಬೈಲುವಾರು ಸಮಿತಿ ಪ್ರಮುಖರು ರಾಮಣ್ಣ ಗೌಡ ಕೊಂಬಿನಡ್ಕ, ರಾಜರಾಜೇಶ್ವರಿ ಬೈಲುವಾರು ಸಮಿತಿ ಪ್ರಮುಖರು ಸುಧಾಕರ ಪೂಜಾರಿ ವಳಚ್ಚಿಲಬೆಟ್ಟು ಬೆದ್ರಡ್ಕ , ರಮೇಶ್ ಕಾರಂತರು, ವಾಸ್ತುಶಿಲ್ಪಿಗಳು, ಕಾಸರಗೋಡು, ಪ್ರಸಾದ್ ಕಾರ್ಕಳ, ನಿರ್ಮಾಣ ಶಿಲ್ಪಿಗಳು, ರಾಮಕುಂಜ ಅಭಿಯಂತರರು ಡಾ|| ಸುಬ್ರಹ್ಮಣ್ಯ ರಾವ್ ಆರ್. ಎಮ್. , ಲಕ್ಷ್ಮೀ ಇಂಜಿನಿಯರಿಂಗ್ ವರ್ಕ್ಸ್, ಮಂಜೇಶ್ವರ, (ಮೇಲ್ಬಾವಣಿ ನಿರ್ಮಾಣಗಾರರು) ಬಾಲಮುರಳಿ , ಮೇಸ್ತ್ರಿ ನಾರಾಯಣ ಪೂಜಾರಿ, ಕೆಳಗಿನ ಮನೆ ಕಿಲ್ಲೂರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಲೋಕೇಶ್ ರಾವ್, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ವಾಸುದೇವ ರಾವ್, ದಾಸಪ್ಪ ಗೌಡ ಪ್ರಧಾನ ಕಾರ್ಯದರ್ಶಿ ಬ್ರಹ್ಮಕಲಶೋತ್ಸವ ಸಮಿತಿ , ಕಾಯಾ೯ಧ್ಯಕ್ಷ ಬಿ.ಕೆ ರಾಜಶೇಖರ ರಾವ್, ಚಪ್ಪರ ಸಮಿತಿಯ ಸಂಚಾಲಕರಾದ ಕೇಶವ ಎಮ್.ಕೆ, ಗೌರವ ಸಲಹೆಗಾರರಾದ ರಾಜು ದಿಡುಪೆ, ಆನಂದ ಆಚಾರ್ಯ, ಹಾಗೂ ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಲೋಕೇಶ್ ರಾವ್, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ವಾಸುದೇವ ರಾವ್, ಆಡಳಿತಾಧಿಕಾರಿ ಮೋಹನ್ ಬಂಗೇರ, ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಊರ ಪರವೂರ ಭಕ್ತರು ಉಪಸ್ಥಿತರಿದ್ದರು.

ರಾತ್ರಿ ಕೊಲ್ಲೂರು ಶ್ರೀ ಕ್ಷೇತ್ರ ಮಹಾತ್ಮೆ ಯಕ್ಷಗಾನ ಕಾರ್ಯಕ್ರಮ ಹಾಗೂ ಪ್ರೀತಿ ವಿಜೆ ಕಿಲ್ಲೂರು ಇವರಿಂದ ಪುಪ್ಪಾಂಜಲಿ ಗಣಪತಿ ನೃತ್ಯ ಸ್ಥಳೀಯ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Related posts

ಸೌಜನ್ಯ ಕೊಲೆ ಪ್ರಕರಣ: ಕೊಕ್ಕಡ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಗ್ರಾಮ ಸಮಿತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ

Suddi Udaya

ಬೆಳಾಲು ಗ್ರಾಮ ಪಂಚಾಯತ್ ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

Suddi Udaya

ಗುರುವಾಯನಕರೆ ವ್ಯಾಪ್ತಿಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ತಾಲೂಕು ಮಟ್ಟದ ಪದಾಧಿಕಾರಿಗಳ ಸಮಾವೇಶ

Suddi Udaya

2023-24ನೇ ಸಾಲಿನಲ್ಲಿ ಶೇ.60ಕ್ಕಿಂತ ಹೆಚ್ಚು ಅಂಕ ಗಳಿಸಿದ ಪ.ಜಾತಿ/ಪ.ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

Suddi Udaya

ಮಾಲಾಡಿ ಸರ್ಕಾರಿ ಐಟಿಐ ಯಲ್ಲಿ ಕ್ಯಾಂಪಸ್ ಸಂದರ್ಶನ

Suddi Udaya

ಲೋಕಸಭಾ ಚುನಾವಣಾ ನೀತಿ ಸಂಹಿತೆ: ಗ್ರಾ.ಪಂ. ನೌಕರರ ಶಾಂತಿಯುತ ಪ್ರತಿಭಟನೆ ಮುಕ್ತಾಯ: ಆ.20 ರಿಂದ ಬೆಂಗಳೂರು ವಿಧಾನಸೌಧ ಮುಂಭಾಗ ಬೃಹತ್ ಪ್ರತಿಭಟನೆ

Suddi Udaya
error: Content is protected !!