24.2 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಬೆಳ್ತಂಗಡಿ: ಅಪಘಾತ ಪ್ರಕರಣ: ಬಸ್ ಚಾಲಕನಿಗೆ ಶಿಕ್ಷೆ

ಬೆಳ್ತಂಗಡಿ: ಗರ್ಡಾಡಿ ಗ್ರಾಮದ ನಂದಿಬೆಟ್ಟ ಗುಂಡದ ಬಸ್ತಿ ಎಂಬಲ್ಲಿ 2 ವರ್ಷಗಳ ಹಿಂದೆ ಕೆಎಸ್‌ಆರ್ ಟಿಸಿ-ದ್ವಿ ಚಕ್ರ ವಾಹನದ ನಡುವೆ ಅಪಘಾತವಾಗಿ ದ್ವಿಚಕ್ರ ವಾಹನ ಸವಾರ ಮತ್ತು ಸಹಸವಾರ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಬಸ್ ಚಾಲಕನಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಯ ವಿರುದ್ದ ಅಂದಿನ ಸಿಪಿಐ (ಪ್ರಸ್ತುತ ಬಂಟ್ವಾಳ ಗ್ರಾ.ಠಾಣೆ)ಯಲ್ಲಿದ್ದ ಶಿವಕುಮಾರ್ ಬಿ. ಪ್ರಕರಣದ ತನಿಖೆಯನ್ನು ಮಾಡಿ, ಆರೋಪಿ ಕೆಎಸ್‌ಆರ್‌ಟಿಸಿ ಚಾಲಕ ವಿಶ್ವನಾಥ ಬಾಲ್ಕಿ ಅವರ ವಿರುದ್ದ ದೋಷರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಮಾನ್ಯ ಪ್ರಧಾನ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆಯಾಗಿ ಆರೋಪಿಗೆ ಕಲಂ 279 ಐಪಿಸಿಗೆ 3 ತಿಂಗಳು ಸೆರೆವಾಸ ಮತ್ತು 1,000 ರೂ. ದಂಡ, ದಂಡ ಕಟ್ಟಲು ತಪ್ಪಿದಲ್ಲಿ ಜೈಲು ಶಿಕ್ಷೆ ಮತ್ತು ಕಲಂ 304(ಎ) ಐಪಿಸಿಗೆ 2 ವರ್ಷ ಸೆರೆವಾಸ ಮತ್ತು 1,000 ರೂ. ದಂಡ, ದಂಡ ಕಟ್ಟಲು ತಪ್ಪಿದಲ್ಲಿ 1 ತಿಂಗಳ ಸೆರೆವಾಸದ ಶಿಕ್ಷೆ ವಿಧಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ;
ವೇಣೂರಿನ ಅಂಗರಕರಿಯ ಎಂಬಲ್ಲಿ ಸ್ವಂತ ಸಹೋದರಿಯ ಪತಿಯ ತಮ್ಮ (ಬಾವ) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ ಹಿನ್ನೆಲೆ ಉಪ್ಪಿನಂಗಡಿ ಸಮೀಪದ ಹಿರೆಬಂಡಾಡಿ ನಿವಾಸಿ, ನಿವೃತ ಶಿಕ್ಷಕ ದಿ| ಮರ್ಹೂಮ್ ಅಬ್ದುರ್ರಝಾಕ್ ಅವರ ಪುತ್ರರಾದ ಹಬ್ಬ ಸಿರಾಜ್ (30) ಮತ್ತು ಕುತುಬುದ್ದೀನ್ ಸಾದಿಕ್ (33) ಅವರು ಮರಣದ ಮನೆಗೆ ಹೋಗಿ ವಾಪಸಾಗುತ್ತಿದ್ದರು. ಈ ವೇಳೆ ಗುರುವಾಯನಕೆರೆ ಕಡೆಯಿಂದ ವೇಣೂರು ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಸ್ಕೂಟರ್‌ನಲ್ಲಿದ್ದ ಸವಾರರ ಮೇಲೆ ಎರಗಿತ್ತು. ಘಟನೆಯಲ್ಲಿ ಸವಾರರಿಬ್ಬರು ಬಸ್‌ನಡಿ ಸಿಲುಕಿದ್ದು, ಕುತುಬುದ್ದೀನ್ ಸಾಧೀಕ್ ಗಂಭೀರ ಗಾಯದಿಂದ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಹಮ್ಮಬ್ಬ ಸಿರಾಜುದ್ದೀನ್ ಸ್ಥಳದಲ್ಲೇ ಮೃತಪಟ್ಟಿದರು.

Related posts

ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾನ ದರ್ಶನಕ್ಕಾಗಿ ಬಿಜೆಪಿ ಕಾರ್ಯಕರ್ತರಿಗೆ ಆಯಾ ರಾಜ್ಯದ ನೇತೃತ್ವದಲ್ಲಿ ವಿಶೇಷ ಅವಕಾಶ: ಬೆಳಾಲಿನ ಬಿಜೆಪಿ ಮುಖಂಡ ಸೀತಾರಾಮ ಬಿ.ಎಸ್. ರವರಿಂದ ಭಕ್ತರಿಗೆ ಮಾರ್ಗದರ್ಶನ ನೀಡುವ ಸೇವೆ

Suddi Udaya

ಉಜಿರೆ: “ಯಕ್ಷಸಿರಿ” ಪ್ರಶಸ್ತಿಗೆ ಆಯ್ಕೆಯಾದ ದಿವಾಕರ್ ದಾಸ್ ಕಾವಳಕಟ್ಟೆ ರವರಿಗೆ ಗೌರವಾರ್ಪಣೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ಮಧ್ಯಂತರ ಸಮ್ಮೇಳನದ ಪ್ರಯುಕ್ತ ಅಭಿನಂದನಾ ಕಾರ್ಯಕ್ರಮ

Suddi Udaya

ರೆಖ್ಯ : ಪರಕಳದಲ್ಲಿ ಮನೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಹಾನಿ

Suddi Udaya

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಾಹಣಾಧಿಕಾರಿ ಎಂ.ವೈ. ಹರೀಶ್ ಕುಮಾರ್ ಹೃದಯಾಘಾತದಿಂದ ನಿಧನ

Suddi Udaya

ವಿಧಾನಪರಿಷತ್ತು ಉಪಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ಕಿಶೋರ್ ಕುಮಾರ್ ಪುತ್ತೂರು

Suddi Udaya
error: Content is protected !!