ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಭಜನಾ ಪರಿಷತ್ ಲಾಯಿಲ ವಲಯದ ಅಧ್ಯಕ್ಷರಾಗಿ ಪಿ. ಚಂದ್ರಶೇಖರ ಸಾಲ್ಯಾನ್, ಕಾರ್ಯದರ್ಶಿಯಾಗಿ ಅಖಿಲೇಶ್ ಚಂದ್ಕೂರು, ಕೋಶಾಧಿಕಾರಿಯಾಗಿ ದಿನೇಶ್ ಜಾನ್ಲಪು

ಲಾಯಿಲ ವಲಯಕ್ಕೆ ಸಂಬಂಧಪಟ್ಟ ಭಜನಾ ಮಂಡಳಿಗಳ ಅಧ್ಯಕ್ಷರು ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳ ಸಭೆಯು ಇತ್ತೀಚೆಗೆ ಲಾಯಿಲ ಸಿಆರ್‌ಇ ತರಬೇತಿ ಕೇಂದ್ರದಲ್ಲಿ ತಾಲೂಕು ಭಜನಾ ಪರಿಷತ್ತಿನ ಕಾರ್ಯದರ್ಶಿ ಪಿ. ಚಂದ್ರಶೇಖರ ಸಾಲ್ಯಾನ್ ಕೊಯ್ಯೂರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಭಜನಾ ಪರಿಷತ್ತಿನ ಸಮನ್ವಯ ಅಧಿಕಾರಿಯದ ಸಂತೋಷ್ ಭಾಗವಹಿಸಿ ವಲಯ ಪರಿಷತ್ತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಬಗ್ಗೆ ಮಾಹಿತಿ ನೀಡಿದರು ನಂತರ ವಲಯ ಸಮಿತಿಯನ್ನು ರಚಿಸಲಾಯಿತು.

ಲಾಯಿಲ ವಲಯದ ನೂತನ ಅಧ್ಯಕ್ಷರಾಗಿ ತಾಲೂಕು ಭಜನಾ ಪರಿಷತ್ತಿನ ಕಾರ್ಯದರ್ಶಿಯಾದ ಪಿ ಚಂದ್ರಶೇಖರ ಸಾಲ್ಯಾನ್, ಕೃಷ್ಣ ಭಜನಾ ಮಂಡಳಿ ಆದೂರುಪೆರಾಲ್ ಕೊಯ್ಯೂರು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಕುಶಲಪ್ಪ ಗೌಡ ನಡ ಲಕ್ಷ್ಮೀನರಸಿಂಹ ಭಜನಾ ಮಂಡಳಿ, ಕಾರ್ಯದರ್ಶಿಯಾಗಿ ಅಖಿಲೇಶ್ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಚಂದ್ಕೂರು, ಜೊತೆ ಕಾರ್ಯದರ್ಶಿಗಳಾಗಿ ರವಿ ಎಂ.ಕೆ. ಶಾರದ ಭಜನಾ ಮಂಡಳಿ ಪುದ್ದೋಟ್ಟು, ಶ್ರೀಮತಿ ಸೌಮ್ಯ ಶಾರದಾ ಮಹಿಳಾ ಭಜನಾ ಮಂಡಳಿ ಪುದ್ದೋಟ್ಟು, ಶ್ರೀಮತಿ ಪೂರ್ಣಿಮಾ ಶ್ರೀ ಕೃಷ್ಣ ಮಹಿಳಾ ಭಜನಾ ಮಂಡಳಿ ಆದೂರುಪೆರಾಲ್, ಕೋಶಾಧಿಕಾರಿಯಾಗಿ ದಿನೇಶ್ ಜಾಲ್ನಪು ಶ್ರೀ ಪಂಚದುರ್ಗಾ ಭಜನಾ ಮಂಡಳಿ ಕೊಯ್ಯೂರು ಇವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮ ಶ್ರೀಮತಿ ಪೂರ್ಣಿಮಾ ಹೇಮಂತ್ ಗೌಡ ಜಂಕಿನಡ್ಕ ಆದೂರು ಪೆರಾಲ್ ಪ್ರಾರ್ಥಿಸಿದರು. ವಲಯ ಮೇಲ್ವಿಚಾರಕ ಸುಶಾಂತ್ ಸ್ವಾಗತಿಸಿ ವಂದಿಸಿದರು.

Related posts

ಬೆಳ್ತಂಗಡಿ ಪಟ್ಟಣ ಪಂಚಾಯಿತ್ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಶರತ್ ಕುಮಾರ್ ಶೆಟ್ಟಿ ಆಯ್ಕೆ

Suddi Udaya

ಲಾಯಿಲಬೈಲು ಹರಿಯುತ್ತಿರುವ ತೋಡಿಗೆ ಸಗಣಿ ನೀರು: ಜಲಚರಗಳಿಗೆ ಅಪಾಯ

Suddi Udaya

ಅ.2: ಗಾಂಧಿಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶ

Suddi Udaya

ಮರೋಡಿ: ಸಾರ್ವಜನಿಕ ಸೇವೆಗಾಗಿ ದಾನಿಗಳಿಂದ ₹ 8 ಲಕ್ಷ ವೆಚ್ಚದಲ್ಲಿ ಆಂಬುಲೆನ್ಸ್‌ ವಾಹನ ಲೋಕಾರ್ಪಣೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೀರೆ ವಿತರಣೆ

Suddi Udaya

ಯನಪೋಯ ಆರ್ಟ್ಸ್ ಸೈನ್ಸ್ ಕಾಮರ್ಸ್ ಪದವಿ ವಿದ್ಯಾರ್ಥಿಗಳಿಂದ ಸ. ಹಿ. ಪ್ರಾ. ಶಾಲೆ ಸರಳಿಕಟ್ಟೆಯಲ್ಲಿ ಎನ್ ಎಸ್ ಎಸ್ ಶಿಬಿರ

Suddi Udaya
error: Content is protected !!