ಶಿಶಿಲ: ಇಲ್ಲಿಯ ಶ್ರೀ ಗಡಿ ಚಾಮುಮಡಿ ದೇವಸ್ಥಾನದಲ್ಲಿ ಶ್ರೀ ಗಡಿ ಚಾಮುಂಡಿ ಅಮ್ಮನವರ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮಾ.21ರಿಂದ ಮಾ.24 ರವರೆಗೆ ಮುದ್ಯ ಶ್ರೀ ಪಾರ್ವತಿ ಪಂಚಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಕೃಷ್ಣಪ್ರಸಾದ ಉಡುಪರ ನೇತೃತ್ವದಲ್ಲಿ ನಡೆಯಲಿದೆ.
ಮಾ. 21ರಂದು ಸಾಯಂಕಾಲ 4ಕ್ಕೆ ತಂತ್ರಿಗಳ ಹಾಗೂ ಋತ್ವಿಜರ ಆಗಮನ, 6.00ಕ್ಕೆ ದೇವತಾ ಪ್ರಾರ್ಥನೆ ಸಂಜೆ 6 ರಿಂದ ಸ್ವಸ್ತಿ ಪುಣ್ಯಾಹವಾಚನ, ಪ್ರಾಸಾದ ಶುದ್ಧಿ, ರಾಕ್ಷೆಘ್ನ ಹೋಮ, ರಾತ್ರಿ ಗಂಟೆ 10ಕ್ಕೆ ವಾಸ್ತು ಬಲಿ ಹೋಮ, ದುರ್ಗಾನಮಸ್ಕಾರ ಪೂಜೆ, ಮಹಾಪೂಜೆ,
ಮಾ.22 ಬೆಳಿಗ್ಗೆ 6.00 ರಿಂದ ಸ್ವಸ್ತಿ ಪುಣ್ಯಾಹವಾಚನ, ಬೆಳಿಗ್ಗೆ 6.30 ರಿಂದ 7.00 ಗಣಪತಿ ಹೋಮ, ಬೆಳಿಗ್ಗೆ 7.30 ಐಕ್ಯಮತ್ಯ ಹೋಮ, ತತ್ತ್ವಹೋಮ ಕಲಶ, ಪೂರ್ವಾಹ್ನ 9.30ಕ್ಕೆ ಹೊರೆಕಾಣಿಕೆ ಸಮರ್ಪಣೆ, ಬೆಳಿಗ್ಗೆ 11.30 ಕ್ಕೆ ಮಹಾಪೂಜೆ, ತೀರ್ಥಪ್ರಸಾದ ವಿತರಣೆ, ಮ.12.30 ಅನ್ನಸಂತರ್ಪಣೆ ರಾತ್ರಿ 6.00 ರಿಂದ 8.೦೦ ದುರ್ಗಾಪೂಜೆ ಮತ್ತು ಮಹಾಪೂಜೆ, ಸಂಜೆ 7.00 ಭಜನಾ ಕಾರ್ಯಕ್ರಮ ಶ್ರೀ ರಾಮಾಂಜನೇಯ ಭಜನಾ ಮಂಡಳಿ ಅಡ್ಡಹಳ್ಳ,
ಮಾ.23 ಪ್ರಾತ:ಕಾಲ 6.00 ಸ್ವಸ್ತಿ ಪುಣ್ಯಾಹವಾಚನ 6.30ಕ್ಕೆ ಗಣಹೋಮ, 7.30 ಕ್ಕೆ ಚಂಡಿಕಾಹೋಮ, ಪೂರ್ವಾಹ್ನ 11.30 ಮಹಾಪೂಜೆ, 11.45 ತೀರ್ಥಪ್ರಸಾದ ವಿತರಣೆ, ಮ.12.30 ಕ್ಕೆ ಅನ್ನಸಂತರ್ಪಣೆ, ಸಂಜೆ 6 ಗಂಟೆಗೆ ಮಂಟಪ ಸಂಸ್ಕಾರ, ದುರ್ಗಾನಮಸ್ಕಾರ ಪೂಜೆ, ಮಹಾಪೂಜೆ, ಸಂಜೆ 7.00ರಿಂದ ಭಜನಾ ಕಾರ್ಯಕ್ರಮ, ಮತ್ಸ್ಯ ಶಿವದುರ್ಗಾ ಭಜನಾ ಮಂಡಳಿ ಶಿಶಿಲ
ಮಾ.24 ಪ್ರಾತ: ಕಾಲ 6.00 ಸ್ವಸ್ತಿ ಪುಣ್ಯಾಹವಾಚನ, ಬೆಳಗ್ಗೆ 6.30 ಕ್ಕೆ ಗಣಹೋಮ, ಅಷ್ಟೋತ್ತರ ಶತಕಲಶ ಪೂಜೆ ಬೆಳಗ್ಗೆ8.00ಕ್ಕೆ ಭಜನಾ ಕಾರ್ಯಕ್ರಮ ಊರ ವಿವಿಧ ಭಜನಾ ಮಂಡಳಿಗಳಿಂದ ಹಾಗೂ 9.58 ರ ವೃಷಭ ಲಗ್ನ ಸುಮುಹೂರ್ತದಲ್ಲಿ, ಚಾಮುಂಡೇಶ್ವರಿಗೆ “ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ತೀರ್ಥಪ್ರಸಾದ ವಿತರಣೆ
ಪ್ರತಿದಿನ ಅನ್ನಸಂತರ್ಪಣೆ ನಡೆಯಲಿದೆ.
ಮಾ.29 ನೇ ಶುಕ್ರವಾರ ಕುರಿ ತಂಬಿಲ ಸೇವೆ ನಡೆಯಲಿರುವುದು.