ಪಡಂಗಡಿ: ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ. 8ರಿಂದ 17 ರವರೆಗೆ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರಾಮಹೋತ್ಸವ ಜರಗಲಿದ್ದು ಮಾ.22ರಂದು ಪ್ರಧಾನ ಅರ್ಚಕರಾದ ರಘುರಾಮ್ ಭಟ್ ಮಠ ನೇತೃತ್ವದಲ್ಲಿ ಚಪ್ಪರ ಮೂಹೂರ್ತ ನೆರವೇರಿಸಿದರು.

ಕಾರ್ಯಾಲಯ ಉದ್ಘಾಟನೆಯನ್ನು ಧಾರ್ಮಿಕ ಪರಿಷತ್ ಸದಸ್ಯ ಕೆಎಸ್ ಯೋಗೀಶ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸೀತಾ ಶೆಟ್ಟಿ ಹಲ್ಲಂದೋಡಿ, ದೇವಸ್ಥಾನದ ಸಹಾಯಕ ಅರ್ಚಕರು ವಿಷ್ಣು ಪ್ರಸಾದ್ ಭಟ್, ಬ್ರಹ್ಮ ಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸಂತೋಷ್ ಕುಮಾರ್ ಜೈನ್ ಪಡಂಗಡಿ, ಉಪಾಧ್ಯಕ್ಷ ದಾಮೋದರ ಕುಂದರ್, ಪ್ರಧಾನ ಕಾರ್ಯದರ್ಶಿ ಚಿದಾನಂದ ಇಡ್ಯ, ಕೋಶಾಧಿಕಾರಿ ವಸಂತ ಗೌಡ, ಆರ್ಥಿಕ ಸಮಿತಿಯ ಸಂಚಾಲಕರಾದ ಗಂಗಾಧರ ಭಟ್ ಕೆವುಡೇಲು, ಸೇವಾ ಸಮಿತಿ ಸದಸ್ಯ ಮತ್ತು ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಪ್ರವೀಣ್ ಕುಮಾರ್ ಜೈನ್ ಪಾಡ್ಯರ ಬಿಡು, ಕಾರ್ಯಾಲಯ ಸಮಿತಿಯ ಸಂಚಾಲಕ ಸುದೀಪ್ ಶೆಟ್ಟಿ, ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಆನಂದ್ ಶೆಟ್ಟಿ, ಚಪ್ಪರ ಸಮಿತಿಯ ಸಂಚಾಲಕರಾದ ಉಮೇಶ್, ಹಿರಿಯರಾದ ನೇಮೋತ್ಸವ ಸಮಿತಿ ಸಂಚಾಲಕರಾದ ನಾರಾಯಣ ಮೂಲ್ಯ ಓಡೀಲು, ಉಗ್ರಾಣ ಸಮಿತಿ ಸಂಚಾಲಕ ಅಶ್ವಿತ್ ಓಡೀಲು, ಸೇವಾ ಸಮಿತಿ ಸದಸ್ಯರಾದ ಶಾಂತ ಜೆ.ಬಂಗೇರ, ಅಶ್ವಿನಿ ನಾಯಕ್, ರಾಜ್ ಪ್ರಕಾಶ್ ಶೆಟ್ಟಿ, ವಿಜಯ ಸಾಲ್ಯಾನ್ ಪನ ಕಜೆ, ಆಮಂತ್ರಣ ಸಮಿತಿ ಸಂಚಾಲಕರದ ಸತೀಶ್ ಬಂಗೇರ, ಸಭಾ ವೇದಿಕೆ ಸಂಚಾಲಕರಾದ ಸುಕೇಶ್ ಪೂಜಾರಿ, ಅಲಂಕಾರ ಸಹ ಸಂಚಾಲಕ ಯೋಗೀಶ್ ಶೆಟ್ಟಿ, ತೋರಣ ಸಮಿತಿಯ ಸಂಚಾಲಕರದ ಮನಮೋಹನ್ ನಾಯಕ್, ಮಾಧ್ಯಮ ಸಮಿತಿ ಸಂಚಾಲಕರದ ಉಮೇಶ್, ಹಿರಿಯರಾದ ಗೋವಿಂದ್ ಭಟ್, ಮತ್ತಿತರರು ಉಪಸ್ಥಿತರಿದ್ದರು.