24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳಾಲಿನಲ್ಲಿ ಅಕ್ರಮ ಮದ್ಯ ದಾಸ್ತಾನು ಘಟಕಕ್ಕೆ ಅಬಕಾರಿ ದಾಳಿ: ಆರೋಪಿ ದಯಾನಂದ ಸಹಿತ ರೂ.45 ಸಾವಿರ ಮೌಲ್ಯದ ಮದ್ಯ ವಶಕ್ಕೆ

ಬೆಳ್ತಂಗಡಿ : ಅಕ್ರಮವಾಗಿ ಗೋಡೌನ್ ನಲ್ಲಿ ಮದ್ಯವನ್ನು ದಾಸ್ತಾನು ಮಾಡಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಂಗಳೂರು ಅಬಕಾರಿ ಡಿಸಿ ವಿಶೇಷ ಪತ್ತೆ ದಳ ಸಿಬ್ಬಂದಿಗಳು ದಾಳಿ ಮಾಡಿ ಮದ್ಯ ಹಾಗೂ ಆರೋಪಿಯನ್ನು ವಶಕ್ಕೆ ಪಡೆದುಕೊಂಡ ಘಟನೆ ಮಾ.21ರಂದು ನಡೆದಿದೆ.

ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಮಿನಂದೆಲ್ ಬಾನಿ ಮೆನ್ಸ್ ಪಾರ್ಲರ್ ನ ಹಿಂಭಾಗದ ಗೋಡೌನ್ ನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಬಾರ್ ಅಥವಾ ವೈನ್ ಶಾಪ್‌ ನಿಂದ ಖರೀದಿಸಿ ಅಕ್ರಮವಾಗಿ ಮದ್ಯ ಶೇಖರಿಸಿಟ್ಟದ್ದ ಬಗ್ಗೆ ಮಂಗಳೂರು ಅಬಕಾರಿ ಡಿಸಿ ವಿಶೇಷ ಪತ್ತೆ ದಳಕ್ಕೆ ಬಂದ ಖಚಿತ ಮಾಹಿತಿ ಮೇರೆಗೆ ಮಾ. 21 ರಂದು ಸಂಜೆ 6 ಗಂಟೆಗೆ ದಾಳಿ ಮಾಡಿದ್ದಾರೆ.

ವಶಪಡಿಸಿಕೊಂಡ ಅಕ್ರಮ ಮದ್ಯ 67.950 ಲೀಟರ್ ಮತ್ತು ಬಿಯರ್ 68.680 ಲೀಟರ್ ವಶಕ್ಕೆ ಪಡೆದುಕೊಂಡಿದ್ದು ಇದರ ಮೌಲ್ಯ ಸುಮಾರು 45,000 ರೂಪಾಯಿ ಅಗಿದೆ. ಆರೋಪಿ ಬೆಳ್ತಂಗಡಿ ತಾಲೂಕು ಬೆಳಾಲು ಗ್ರಾಮದ ಮಿನಂದೆಲ್ ನಿವಾಸಿ ಶೀನಾ ಗೌಡರ ಮಗ ದಯಾನಂದ ಗೌಡ (47) ಎಂಬಾತನನ್ನು ಬಂಧಿಸಲಾಗಿದೆ‌.ಬೆಳ್ತಂಗಡಿ ಅಬಕಾರಿ ದಳ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆಯಲ್ಲಿ ಮಂಗಳೂರು ಅಬಕಾರಿ ಡಿಸಿ ವಿಶೇಷ ಪತ್ತೆ ದಳದ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿಗಳು ಭಾಗವಹಿಸಿದರು‌

Related posts

ತೆಂಕಕಾರಂದೂರು: ಸ.ಕಿ.ಪ್ರಾ. ಶಾಲೆಯಲ್ಲಿ ಮೆಟ್ರಿಕ್ ಮೇಳ

Suddi Udaya

ಧರ್ಮಸ್ಥಳ: ಮಾನ್ವಿ ಶ್ರೀ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ಉಜಿರೆ ಪ್ರಾಥಮಿಕ ಸಹಕಾರಿ ಸಂಘದ ಚುನಾವಣೆ: ಬಿಜೆಪಿ 7 – ಕಾಂಗ್ರೆಸ್ 5, ನ್ಯಾಯಾಲಯದ ಆದೇಶದಂತೆ ಫಲಿತಾಂಶ ಘೋಷಣೆಗೆ ತಡೆ

Suddi Udaya

ಬೆಳ್ತಂಗಡಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರಿಂದ ಮತದಾನ

Suddi Udaya

ವಾಲಿಬಾಲ್ ಪಂದ್ಯಾಟ: ಮುಂಡಾಜೆ ಪ್ರೌಢಶಾಲಾ ಬಾಲಕಿಯರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೆ ಹಾಗೂ ಪರಿವಾರ ದೈವಗಳ ನರ್ತನ ಸೇವೆ: ಹಸಿರು ವಾಣಿ ಮತ್ತು ಪುಷ್ಪಗನ್ನಡಿ ಸಮರ್ಪಣೆ

Suddi Udaya
error: Content is protected !!