ಬೆಳ್ತಂಗಡಿ: ಕ್ರೈಸ್ತರ ಅತ್ಯಂತ ಪವಿತ್ರ ಹಬ್ಬ ವಾದ ಈಸ್ಟರ್ ಗೆ ಸಿದ್ಧತೆಯಾಗಿ ಆಚರಿಸುವ ವ್ರತಕಾಲ ಇಂದು ನಲವತ್ತನೇ ದಿನವನ್ನು ಪ್ರವೇಶಿಸಿದೆ. ಇದರ ಪ್ರಯುಕ್ತ ಬೆಳ್ತಂಗಡಿ ಧರ್ಮ ಪ್ರಾಂತ್ಯ ದ ಶಿಲುಬೆಯ ಹಾದಿಯ ಪುಣ್ಯ ಕ್ಷೇತ್ರ ಗಂಡಿಬಾಗಿಲಿನ ದೇವಗಿರಿ ಶಿಲುಬೆಯ ಹಾದಿ ಯಶಸ್ವಿಯಾಗಿ ಸಂಪನ್ನಗೊಂಡಿತು.
ಧರ್ಮ ಪ್ರಾಂತ್ಯದ ವಿವಿದ ಧರ್ಮ ಕೇಂದ್ರಗಳಿಂದ ಮುಂಜಾನೆ ಯಿಂದಲೇ ದೇವಗಿರಿಯ ಸಂತ ಜುದರ ದೇವಾಲಯದ ಅಂಗಳದಲ್ಲಿ ಸೇರಿ ಬಲಿಪೂಜೆಯನ್ನರ್ಪಿಸಿ ಕೈಗಳಲ್ಲಿ ಸಣ್ಣ ಶಿಲುಭೆಯ ಹರಕೆಯನ್ನೋತ್ತು ದೇವಗಿರಿ ಬೆಟ್ಟವನ್ನು ಲೋಕ ರಕ್ಷಕ ಯೇಸುವಿನ
ಯಾತನೆಯನ್ನು ಸ್ಮರಿಸಿ ಶಿಲುಭೆಯ ಹಾದಿಯ ಹಾಡು ಮತ್ತು ಪ್ರಾರ್ಥನೆ ಯೊಂದಿಗೆ ಬೆಟ್ಟ ವನ್ನೇರಿದರು. ನಿನ್ನೆಯ ಹನ್ನೆರಡು ದಿನಗಳು ಕಠಿಣ ವ್ರತ ಆಚರಣೆಗೆ ಕ್ರೈಸ್ತರು ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಇಷ್ಟಾರ್ಥ ಈಡೇರಿಕೆ, ಹಾಗೂ ಪಾಪ ವಿಮೋಚನೆ ಗಾಗಿ ಕ್ರೈಸ್ತರು ಇದರಲ್ಲಿ ಭಾಗವಹಿಸಿ ಪ್ರಾರ್ಥಿಸುತ್ತಾರೆ. ಪ್ರತಿ ವರ್ಷವೂ ವಿವಿಧ ಸ್ಥಳಗಳಿಂದ ಧರ್ಮ ಗುರುಗಳೂ, ಭಗೀನಿಯರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.