September 6, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ, 28ನೇ ವರ್ಷದ ಸಾಮೂಹಿಕ ಶ್ರೀ ಗೌರಿ ಪೂಜೆ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಚನೆ- ಪೂರ್ವಭಾವಿ ಸಭೆ

ಉಜಿರೆ: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ನಡೆಯುವ 28ನೇ ವರ್ಷದ ಸಾಮೂಹಿಕ ಶ್ರೀ ಗೌರಿ ಪೂಜೆ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವದ ವಿವಿಧ ಸಮಿತಿ ರಚನೆ ಹಾಗೂ ಪೂರ್ವಭಾವಿ ಸಭೆಯು ಜೂ.22ರಂದು ಉಜಿರೆಯ ಕುಂಜರ್ಪದಲ್ಲಿ ನಡೆಯಿತು.

28ನೇ ವರ್ಷದ ಸಾಮೂಹಿಕ ಶ್ರೀ ಗೌರಿ ಪೂಜೆ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಚಂದ್ರಶೇಖರ್ ಶೆಟ್ಟಿ ಬಿಲ್ಲರೋಡಿ, ಕಾರ್ಯದರ್ಶಿಯಾಗಿ ಅಶೋಕ್, ಕೋಶಾಧಿಕಾರಿಯಾಗಿ ಅಶ್ವಥ್ ರವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರುಗಳಾಗಿ ನಿರಂಜನ್ ಕಡಂಬು, ಕಿಶೋರ್ ಪೆರ್ಲ, ಸುದೇಶ್ ಕುಂಟಿನಿ, ಸಚಿನ್ ಕಲ್ಲೆ, ಸಂತೋಷ್ ವೇಣೂರು, ದಿನೇಶ್ ನಾವೂರ, ಬೊಮ್ಮಯ್ಯ, ಲಿಂಗಪ್ಪ, ಜಯಂತ್ ಬಂಗೇರ ನಿಡ್ಲೆ, ಮಹೇಶ್ ಅತ್ರೋಡಿ, ಲಿವೀಶ್ ಚಂದ್ರ, ಜೊತೆ ಕಾರ್ಯದರ್ಶಿಯಾಗಿ ಸೃಜನ್ ಕುಂಜರ್ಪ, ವಿಕ್ಕಿ ಶೆಟ್ಟಿ,ಮನು ಮನ್ನಡ್ಕ, ಸೃಜನ್ ಪಜಿರಡ್ಕ ಪ್ರಮೋದ್ ವಿವೇಕಾನಂದ ನಗರ, ಸದಾಶಿವ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ರಾಷ್ಟೀಯ ಹಿಂದೂ ಜಾಗರಣ ವೇದಿಕೆಯ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ, ಗೌರವಾಧ್ಯಕ್ಷ ಹರೀಶ್ ಕುಮಾರ್ ಬರಮೇಲು, ಅಧ್ಯಕ್ಷ ಅನಿಲ್ ಕುಮಾರ್ ಅಂತರ, ಸಂಚಾಲಕ ಮನೋಜ್ ಕುಮಾರ್, ಶಿಲ್ಪಿ ವೆಂಕಟೇಶ್ ಕಾಶಿಬೆಟ್ಟು, ಉಮೇಶ್ ಅತ್ತಾಜೆ, ಪ್ರಶಾಂತ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಅನಿಲ್ ಕುಮಾರ್ ಅಂತರ 2024ನೇ ಸಾಲಿನ ಆಯ-ವ್ಯಯ ವೆಚ್ಚವನ್ನು ಮಂಡಿಸಿದರು. ಕಿಶೋರ್ ಪೆರ್ಲ ಸ್ವಾಗತಿಸಿ ವಂದಿಸಿದರು.

Related posts

ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ: ರೂ 1.07ಕೋಟಿ ನಿವ್ವಳ ಲಾಭ, ಶೇ. 11 ಡಿವಿಡೆಂಡ್ ಘೋಷಣೆ

Suddi Udaya

ದೆಹಲಿಯಲ್ಲಿ ನಿರ್ಮಾಣಗೊಳ್ಳಲಿರುವ ಯೋಧರ ಉದ್ಯಾನವನಕ್ಕೆ ಬೆಳ್ತಂಗಡಿಯಿಂದ ಮಣ್ಣು ಸಮರ್ಪಣೆ

Suddi Udaya

ಕೊಕ್ಕಡ ಜೇಸಿಐ ಕಪಿಲಾ ಘಟಕಕ್ಕೆ ವಲಯಾಧ್ಯಕ್ಷರ ಭೇಟಿ, ಘಟಕ ವೆಬ್ ಸೈಟ್ ಲೋಕಾರ್ಪಣೆ

Suddi Udaya

ಲಾಯಿಲ: ಹಾಡಹಗಲೇ ಕಾರಿನಲ್ಲಿಟ್ಟಿದ್ದ ನಗದು, ಚಿನ್ನಾಭರಣ ಕಳವು

Suddi Udaya

ಅರಸಿನಮಕ್ಕಿ ಶ್ರೀ ಗೋಪಾಲಕೃಷ್ಣ ಅ.ಹಿ.ಪ್ರಾ ಶಾಲೆಗೆ ಟೇಬಲ್ ಕೊಡುಗೆ

Suddi Udaya

ರೂ.23 ಕೋಟಿ ವೆಚ್ಚದಲ್ಲಿ ನಿಮಾ೯ಣವಾಗಲಿರುವ ಬೆಳ್ತಂಗಡಿ ನೂತನ ನ್ಯಾಯಾಲಯ ಸಂಕೀರ್ಣಕ್ಕೆ ಶಿಲಾನ್ಯಾಸ

Suddi Udaya
error: Content is protected !!