27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ತುಮಕೂರುನಲ್ಲಿ ಬೆಳ್ತಂಗಡಿಯ ಮೂವರನ್ನು ಹತ್ಯೆ ಪ್ರಕರಣ: ಗೃಹ ಸಚಿವರನ್ನು ಬೇಟಿ ಮಾಡಿದ ರಕ್ಷಿತ್ ಶಿವರಾಂ

ಬೆಳ್ತಂಗಡಿ : ಮೂವರು ಬೆಳ್ತಂಗಡಿ ತಾಲೂಕಿನವರು ಕಾರಿನಲ್ಲಿ ತುಮಕೂರಿಗೆ ಹೋಗಿ ಅಲ್ಲಿ ದುಷ್ಕರ್ಮಿಗಳಿಂದ ಕಾರಿಗೆ ಬೆಂಕಿ ಹಚ್ಚಿ ಹತ್ಯೆ ಮಾಡಿದ ಪ್ರಕರಣ ಸಂಬಂಧ ಗೃಹಸಚಿವ ಪರಮೇಶ್ವರ್ ಅವರ ನಿವಾಸದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಮಾ.24 ರಂದು ಸಂಜೆ ಭೇಟಿ ಮಾಡಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲು ಪೊಲೀಸ್ ಇಲಾಖೆಗೆ ಸೂಚಿಸಲು ಮನವಿ ಮಾಡಿದರು.

ಅದಲ್ಲದೆ ಮೃತದೇಹದ ಡಿಎನ್ಎ ಪರೀಕ್ಷೆ ಮಾಡಿ ಕುಟುಂಬಕ್ಕೆ ಹಸ್ತಾಂತರಿಸುವ ಕ್ರಮ ಕೈಗೊಳ್ಳಲು ಮನವಿ ಮಾಡಿದರು. ಈ ವೇಳೆ ತುಮಕೂರು ಪೊಲೀಸ್ ಅಧಿಕಾರಿಯನ್ನು ಗೃಹ ಸಚಿವರು‌ ಕರೆ ಮಾಡಿ ಕರೆಸಿಕೊಂಡು ಪ್ರಕರಣದ ಬಗ್ಗೆ ಮಾಹಿತಿ ಪಡೆದರು. ಪೊಲೀಸ್ ಅಧಿಕಾರಿ ಪ್ರಕರಣದ ಎಲ್ಲಾ ಮಾಹಿತಿಯನ್ನು ವಿವರಿಸಿದ್ದು. ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು. ಇನ್ನೂ ಎರಡು ದಿನದಲ್ಲಿ ಪ್ರಕರಣದ ಬಗ್ಗೆ ಪತ್ರಿಕಾಗೋಷ್ಠಿ ಮಾಡಿ ತಿಳಿಸಲಾಗುವುದು ಎಂದು ಹೇಳಿದರು.

ತುಮಕೂರು ಎಡಿಷನ್ ಎಸ್ಪಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ವೇಳೆ ದ.ಕ.ಜಿಲ್ಲಾ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಫರ್ನಾಂಡೀಸ್ ಮತ್ತು ಬೆಳ್ತಂಗಡಿ ಕಾಂಗ್ರೆಸ್ ಯೂತ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಹಕಿಂ ಕೊಕ್ಕಡ ಜೊತೆಯಲ್ಲಿದ್ದರು.

Related posts

ಉಜಿರೆ ಕು| ಸೌಜನ್ಯಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣ: ಮರು ತನಿಖೆಗೆ ಒತ್ತಾಯಿಸಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸೌಜನ್ಯರ ಮನೆಯವರಿಂದ ಸಿ.ಎಂ ಸಿದ್ದರಾಮಯ್ಯರವರಿಗೆ ಮನವಿ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ತಂದೆಯಂದಿರ ದಿನಾಚರಣೆ

Suddi Udaya

ನಾಳ : ತೇರಾ ಬಾಕಿಮಾರು ಗದ್ದೆಯಲ್ಲಿ ನೇಜಿ ನಾಟಿ

Suddi Udaya

ವೇಣೂರು ಶ್ರೀ ಧ.ಮಂ. ಕೈಗಾರಿಕಾ ತರಬೇತಿ ಸಂಸ್ಥೆಯ ಎನ್.ಎಸ್.ಎಸ್ ಘಟಕ ವತಿಯಿಂದ ಮಂಗಳತೇರು ಶಾಲೆಯಲ್ಲಿ ನಾಯಕತ್ವ ಶಿಬಿರ

Suddi Udaya

ಬೆಳ್ತಂಗಡಿ ತಾಲೂಕು ಬಂಟರ ಯಾನೆ ನಾಡವರ ಸಂಘದ ನಿರ್ದೇಶಕರ ಹಾಗೂ ವಿಶೇಷ ಆಹ್ವಾನಿತರ ಸಭೆ: ದೀಪಾವಳಿಯ ತುಡಾರು ಪರ್ಬ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮುಂಡಾಜೆ : ನಿಡಿಗಲ್ ನಿವಾಸಿ, ಗಣೇಶ ಪ್ರಭು ಹೃದಯಾಘಾತದಿಂದ ನಿಧನ

Suddi Udaya
error: Content is protected !!