25.7 C
ಪುತ್ತೂರು, ಬೆಳ್ತಂಗಡಿ
May 17, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶಿಲಾ೯ಲಿನಲ್ಲಿ ತಂದೆಯ ಮೇಲೆ ಪುತ್ರ, ಸೊಸೆಯಿಂದ ಹಲ್ಲೆ ಆರೋಪ: ವೇಣೂರು ಪೊಲೀಸ್ ಠಾಣೆಗೆ ದೂರು

ಬೆಳ್ತಂಗಡಿ: ತನ್ನ ಮೇಲೆ ಪುತ್ರ ಹಾಗೂ ಸೊಸೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ತಂದೆ ವೇಣೂರು ಠಾಣೆಗೆ ದೂರು ನೀಡಿದ್ದಾರೆ.

ಶಿರ್ಲಾಲು ಗ್ರಾಮದ ಸರಪ್ಪಾಡಿ ಮನೆ ನಿವಾಸಿಯಾಗಿರುವ ಸುಂದರ ಪೂಜಾರಿ(75) ಎಂಬವರೇ ದೂರು ನೀಡಿದವರಾಗಿದ್ದಾರೆ. ಸುಂದರ ಪೂಜಾರಿ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ನನ್ನ ಹೆಸರಿನಲ್ಲಿರುವ ಜಮೀನನ್ನು ತನ್ನೋಬ್ಬನ ಹೆಸರಿಗೆ ಬರೆದು ಕೊಡುವಂತೆ ಒತ್ತಾಯಿಸಿ ಪುತ್ರ ಹಾಗೂ ಸೊಸೆ ಆಗಾಗ ಜಗಳ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ.ಮಾ.21ರಂದು ಸಂಜೆಯ ವೇಳೆ ಪುತ್ರ ಮನೆಯಲ್ಲಿ ಇದ್ದ ಅಡಿಕೆಯನ್ನು ತೆಗೆದುಕೊಂಡು ಹೋಗಲು ಮುಂದಾಗಿದ್ದು ಈ ವೇಳೆ ನಾನು ಪ್ರಶ್ನಿಸಿದಾಗ ಕೋಪಗೊಂಡ ಮಗ ಹಾಗೂ ಸೊಸೆ ಅಡಿಕೆ ಮರದ ಸಲಾಕೆಯಿಂದ ಹಲ್ಲೆ ನಡೆಸಿ ಕೊಲೆಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಆರೋಪಿಸಿದ್ದಾರೆ .

ಹಲ್ಲೆಗೆ ಒಳಗಾಗಿರುವ ಸುಂದರ ಪೂಜಾರಿ ಆಸ್ಪತ್ರೆಗೆ ದಾಖಲಾಗಿದ್ದು ಈ ಬಗ್ಗೆ ವೇಣೂರು ಪೊಲೀಸರಿಗೆ ದೂರು ನೀಡಿದ್ದಾರೆ. ವೇಣೂರು ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ

Related posts

ಗುರುವಾಯನಕೆರೆ ಸ.ಪ್ರೌ. ಶಾಲೆಯ ಚಿತ್ರಕಲಾ ಶಿಕ್ಷಕ ವಿ.ಕೆ ವಿಟ್ಲ ರವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

Suddi Udaya

ಪುರುಷರ ನೆಟ್ ಬಾಲ್ ಚಾಂಪಿಯನ್ ಶಿಪ್ ಪಂದ್ಯಾಟ: ಮಂಗಳೂರು ವಿಶ್ವವಿದ್ಯಾನಿಲಯ ತಂಡ ಚಾಂಪಿಯನ್

Suddi Udaya

ಕೃಷಿಕ ಕಲಾಯ ದಾಮೋದರ ಬಂಗೇರ ನಿಧನ

Suddi Udaya

ಕಲ್ಮಂಜ: ಪುರೋಹಿತ ಶ್ರೀಕಾಂತ ಭಿಡೆ ನಿಧನ

Suddi Udaya

ಬೆಳ್ತಂಗಡಿ: ಚುನಾವಣೆ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಬಿಗಿ : 24 ಗಂಟೆಯೂ ಸಂಚರಿಸುವ ವಾಹನಗಳ ಪರಿಶೀಲನೆ

Suddi Udaya

ಪಡ್ಲಾಡಿ ಸ.ಹಿ.ಪ್ರಾ. ಶಾಲೆಯಲ್ಲಿ ಪರಿಸರ ಮಾಹಿತಿ ಮತ್ತು ಗಿಡನಾಟಿ ಕಾರ್ಯಕ್ರಮ

Suddi Udaya
error: Content is protected !!