ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ ಆಶ್ರಯದಲ್ಲಿ ಕೊಕ್ಕಡ ಗ್ರಾಮ ಸಮಿತಿ ಸಭೆ, ನೂತನ ಸಮಿತಿ ರಚನೆ

ಕೊಕ್ಕಡ : ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ (ರಿ.) ತಾಲೂಕು ಘಟಕ ಬೆಳ್ತಂಗಡಿ, ಇದರ ಆಶ್ರಯದಲ್ಲಿ, ಕೊಕ್ಕಡ ಗ್ರಾಮದ ಗ್ರಾಮ ಸಮಿತಿಯನ್ನು ಸೆ.21 ರಂದು ಕೊಕ್ಕಡದ ಡಾ|| ಬಿ.ಆರ್. ಅಂಬೇಡ್ಕರ್ ಭವನದಲ್ಲಿ ತಾಲೂಕು ಘಟಕದ ಅಧ್ಯಕ್ಷ ದಿನೇಶ್ ಕೆ ಕೊಕ್ಕಡ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ತಾಲೂಕು ಘಟಕದ ಗೌರವ ಸಲಹೆಗಾರ ಗೋಪಾಲಕೃಷ್ಣ ಕುಕ್ಕಳ, ಪ್ರಧಾನ ಕಾರ್ಯದರ್ಶಿ ಶೇಖರ್ ವಿ. ಧರ್ಮಸ್ಥಳ, ನಿಕಟಪೂರ್ವ ಕಾರ್ಯದರ್ಶಿ ಶರತ್ ಕೊಕ್ಕಡ, ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಾಸ್ಥಾನ ಕೊಕ್ಕಡ ಇದರ ವ್ಯವಸ್ಥಾಪನಾ ಸಮಿತಿಯ ಸದಸ್ಯ ಗಿರೀಶ್ ಶಬರಾಡಿ, ಕೊಕ್ಕಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ವಿಶ್ವನಾಥ ಕೊಕ್ಕಡ ಮುಂತಾದವರು ಉಪಸ್ಥಿತರಿದ್ದರು.

ಗೋಪಾಲಕೃಷ್ಣ ಕುಕ್ಕಳ ಪ್ರಸ್ತಾವಿಕವಾಗಿ ಮಾತಾಡುತ್ತಾ ಆದಿದ್ರಾವಿಡ ಸಮಾಜ ಸೇವಾ ಸಂಘದ ಹಿನ್ನೆಲೆ, ಜಾತಿ ಪ್ರಮಾಣಪತ್ರ ಪಡೆಯುವಲ್ಲಿ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು, ಮತ್ತು ಈ ಸಮಸ್ಯೆಗಳನ್ನು ಎದುರಿಸಲು ಆದಿದ್ರಾವಿಡ ಸಮುದಾಯ ಸಂಘಟಿತರಾಗಬೇಕಾದ ಅನಿವಾರ್ಯತೆಯನ್ನು ಸಭೆಗೆ ವಿವರಿಸಿದರು.

ತಾಲೂಕು ಅಧ್ಯಕ್ಷ ದಿನೇಶ್ ಕೆ ಕೊಕ್ಕಡ ಮಾತನಾಡುತ್ತಾ ನಮ್ಮಲ್ಲಿರುವ ಉತ್ತಮ ನಡವಳಿಕೆ, ವ್ಯಕ್ತಿತ್ವ, ಜೀವನ ಪದ್ದತಿ, ಆಚಾರ-ವಿಚಾರಗಳಿಂದ ಮಾತ್ರ ನಮಗೆ ಸಮಾಜದಲ್ಲಿ ಗೌರವ ದೊರೆಯುತ್ತದೆ. ಪ್ರಮುಖವಾಗಿ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿ, ಉನ್ನತ ಪದವಿ, ಶ್ರೇಣಿ, ಮತ್ತು ಹುದ್ದೆಯನ್ನು ಪಡೆಯುವುದರೊಂದಿಗೆ, ರಾಜ್ಯ ಸಂಘಟನೆಯ ಸಮಾಜಮುಖಿ ಕಾರ್ಯಕ್ರಮಗಳನ್ನು ಗ್ರಾಮೀಣ ಮಟ್ಟಕ್ಕೆ ತಲುಪಿಸುವ ಮೂಲಕ ಸಮುದಾಯವನ್ನು ಬಲಪಡಿಸಿದರೆ, ನಾವು ಕೂಡ ಸಮಾಜದಲ್ಲಿ ಇತರ ಸಮುದಾಯಗಳಂತೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಿಕೀಯ ಸ್ಥಾನಮಾನ ಪಡೆಯಲು ಸಾಧ್ಯವಾಗುತ್ತದೆ ಎಂದರು.

ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ (ರಿ) ಕೊಕ್ಕಡ ಗ್ರಾಮ ಸಮಿತಿಗೆ ನೂತನ ಅಧ್ಯಕ್ಷರಾಗಿ ಮೌನೇಶ್, ಉಪಾಧ್ಯಕ್ಷರಾಗಿ ಸಂಪತ್, ಕಾರ್ಯದರ್ಶಿಯಾಗಿ ಅನಿಲ್, ಜೊತೆಕಾರ್ಯದರ್ಶಿಯಾಗಿ ಅಭಿಜಿತ್, ಕೋಶಾಧಿಕಾರಿಯಾಗಿ ಜಯಂತ್, ಗೌರವಾಧ್ಯಕ್ಷರಾಗಿ ಗಿರೀಶ್ ಶಬರಾಡಿ, ಗೌರವ ಸಲಹೆಗಾರರಾಗಿ ವಿಶ್ವನಾಥ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಪ್ರವೀಣ್, ಮಾಧವ, ಗುರುಪ್ರಸಾದ್, ಸಾಗರ್, ಗಣೇಶ್, ಕಿರಣ್, ನವೀನ್, ಸುದೀಪ್, ರಾಜೇಶ್, ರಮೇಶ್, ನವನೀತ್, ರಂಜಿತ್ ಇವರುಗಳು ಆಯ್ಕೆಯಾದರು.

ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಶೇಖರ್ ವಿ. ಧರ್ಮಸ್ಥಳ ಸ್ವಾಗತಿಸಿ, ಧನ್ಯವಾದವಿತ್ತರು.

Related posts

ಕೃಷಿ ಇಲಾಖೆಯಲ್ಲಿ ಜಲಾನಯನ ಪ್ರದೇಶದ ರೈತರಿಗೆ ಕೈಗಾಡಿ, ಪವರ್ ವಿಹಾರ್ ಯಂತ್ರೋಪಕರಣ ವಿತರಣೆ

Suddi Udaya

ಶ್ರೀರಾಮ ಶಿಶು ಮಂದಿರದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ

Suddi Udaya

ಅಶ್ವಮೇಧ ಕಾಮರ್ಸ್ ಫೆಸ್ಟ್ ನಲ್ಲಿ ವಾಣಿ ಪದವಿ ಪೂರ್ವ ಕಾಲೇಜಿಗೆ ಸಮಗ್ರ ಪ್ರಶಸ್ತಿ

Suddi Udaya

ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಈ ವರ್ಷದ 150ನೇ ಪ್ರದರ್ಶನ ಸಂಭ್ರಮ

Suddi Udaya

ಅಳದಂಗಡಿ ಮತದಾನ ಕೇಂದ್ರಕ್ಕೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಮೈಪಾಲ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಸರಕಾರದಿಂದ ರೂ 72 ಕೋಟಿ ಅನುದಾನ

Suddi Udaya
error: Content is protected !!