30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ತುಮಕೂರು ದುಷ್ಕರ್ಮಿಗಳಿಂದ ಕಾರಿಗೆ ಬೆಂಕಿ ಹಚ್ಚಿ ಹತ್ಯೆ ಮಾಡಿದ ಪ್ರಕರಣ ಸಂಬಂಧ ತುಮಕೂರು ಜಿಲ್ಲಾ ಎಡಿಷನ್ ಎಸ್ಪಿ ಯವರನ್ನು ಬೇಟಿ ಮಾಡಿ ಪ್ರಕರಣದ ಬಗ್ಗೆ ಮಾಹಿತಿ ಪಡೆದ ರಕ್ಷಿತ್ ಶಿವರಾಂ

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಮೂವರು ತುಮಕೂರಿಗೆ ಹೋಗಿ ಅಲ್ಲಿ ದುಷ್ಕರ್ಮಿಗಳಿಂದ ಕಾರಿಗೆ ಬೆಂಕಿ ಹಚ್ಚಿ ಹತ್ಯೆ ಮಾಡಿದ ಪ್ರಕರಣ ಸಂಬಂಧ ತುಮಕೂರು ಜಿಲ್ಲಾ ಎಡಿಷನ್ ಎಸ್ಪಿ ಬಿ.ಎಸ್.ಅಬ್ದುಲ್ ಖಾದರ್ ಅವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಕಚೇರಿಗೆ ಮಾ.24 ರಂದು ಸಂಜೆ ಭೇಟಿ ಮಾಡಿ ಪ್ರಕರಣ ಬಗ್ಗೆ ಮಾಹಿತಿ ಪಡೆದುಕೊಂಡು ಹತ್ಯೆ ಯಾವ ಕಾರಣಕ್ಕೆ ಮಾಡಿದ್ದಾರೆ ಇದರ ಹಿಂದಿರುವ ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು ಮನವಿ ಮಾಡಿದರು. ಜೊತೆಗೆ ಮೂವರ ಮೃತದೇಹದ ಡಿಎನ್ಎ ಪರೀಕ್ಷೆ ಅದಷ್ಟು ಬೇಗ ಮಾಡಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲು ಮನವಿ ಮಾಡಿಕೊಂಡರು. ಈ ವೇಳೆ ಎಡಿಷನ್ ಎಸ್ಪಿ ಅಬ್ದುಲ್ ಖಾದರ್ ಅವರು ಈ ಮೂರು ಜನರ ಹತ್ಯೆಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು ಇನ್ನೂ ಎರಡು ದಿನದ ಒಳಗೆ ಪ್ರಕರಣದ ಬಗ್ಗೆ ಎಲ್ಲಾ ಮಾಹಿತಿಯನ್ನು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.ತುಮಕೂರು ಎಡಿಷನ್ ಎಸ್ಪಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ವೇಳೆ ದ.ಕ.ಜಿಲ್ಲಾ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಫರ್ನಾಂಡೀಸ್ ಮತ್ತು ಬೆಳ್ತಂಗಡಿ ಕಾಂಗ್ರೆಸ್ ಯೂತ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಹಕಿಂ ಕೊಕ್ಕಡ ಜೊತೆಯಲ್ಲಿದ್ದರು.

Related posts

ವಕೀಲರ ಸಂಘದ ಕಚೇರಿಗೆ ರಕ್ಷಿತ್ ಶಿವರಾಂ ಸೌಹಾರ್ಧ ಭೇಟಿ, ಸಮಾಲೋಚನೆ

Suddi Udaya

ಮುಂಡಾಜೆ : ಸುಷ್ಮಾ ಪಟವರ್ಧನ್ ನಿಧನ

Suddi Udaya

ಗಾಳಿ ಮಳೆಗೆ ಮನೆ ಹಾನಿ: ಚಾರ್ಮಾಡಿ ಮುಡಿಪು ಅರ್ಕನ ಮಸೀದಿಯ ಧರ್ಮಗುರುಸಮೀರ್ ಮುಸ್ಲಿಯರ್,ದಿನೇಶ್ ವಲಸಾರಿ ರವರಿಗೆ ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ನಿಂದ ಆರ್ಥಿಕ ನೆರವು

Suddi Udaya

ವಾಣಿ ಕಾಲೇಜಿನ ತುಳು ಸಂಘದ ಆಶ್ರಯದಲ್ಲಿ ‘ಆಟಿ ಒಂಜಿ ನೆಂಪು’ ಕಾರ್ಯಕ್ರಮ

Suddi Udaya

ಗುರುವಾಯನಕೆರೆ ಗೆಳೆಯರ ಬಳಗ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಮದ್ದಡ್ಕ ತಾಯಿ‌ ಪಿಲಿಚಾಮುಂಡಿ‌ ದೈವಸ್ಥಾನದಲ್ಲಿ ತಾಂಬೂಲ ಪ್ರಶ್ನಾ ಚಿಂತನೆ

Suddi Udaya
error: Content is protected !!