27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ: ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾದ ಅಧ್ಯಕ್ಷರಾಗಿ ಆಯ್ಕೆ ಯಾದ ಸೇಬಾಷ್ಟಿಯನ್ ಪಿ ಸಿ ರವರಿಗೆ ಕೆ ಎಸ್ ಎಂ ಸಿ ಎ ಬೆಳ್ತಂಗಡಿ ವತಿಯಿಂದ ಅಭಿನಂದನೆ

ಬೆಳ್ತಂಗಡಿ :ಭಾರತೀಯ ಜನತಾ ಪಕ್ಷದ ಬೆಳ್ತಂಗಡಿ ತಾಲೂಕು ಅಲ್ಪಸಂಖ್ಯಾತ ಮೋರ್ಚಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸೇಬಾಷ್ಟಿಯನ್ ಪಿ ಸಿ ಯವರಿಗೆ ಬೆಳ್ತಂಗಡಿ ಧರ್ಮಪ್ರಾಂತ್ಯ ದ ಕರ್ನಾಟಕ ಸೀರೋ ಮಲಬಾರ್ ಕ್ಯಾಥೋಲಿಕ್ ಅಸೊಸಿಯೇಷನ್ ಸಂಘಟನೆಯ ಪರವಾಗಿ ಅಭಿನಂದಿಸಿದರು.

ಸೇಬಾಷ್ಟಿಯನ್ ಪಿ ಸಿ ಅವರು ಕೆ ಎಸ್ ಎಂ ಸಿ ಎ ಬೆಳ್ತಂಗಡಿ ಧರ್ಮ ಪ್ರಾಂತ್ಯ ಇದರ ಕೇಂದ್ರ ಸಮಿತಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಬಹುಮುಖ ಚಟುವಟಿಕೆ ಗಳ ಮೂಲಕ ಹಲವಾರು ಸಾಮಾಜಿಕ, ಧಾರ್ಮಿಕ ಮತ್ತು ಕ್ರೀಡಾ ಚಟುವಟಿಕೆಗಳ ಮುಖಾಂತರ ಓರ್ವ ಉತ್ತಮ ನಾಯಕ ಮತ್ತು ಸಂಘಟಕ ಎಂಬ ಹಿರಿಮೆ ಪಡೆದಿದ್ದಾರೆ. ವಿನ್ಸೆಂಟ್ ಡಿ ಪೌಲ್ ಸೊಸೈಟಿಯ ಧರ್ಮ ಪ್ರಾಂತ್ಯ ಮಟ್ಟದ ಪದಾಧಿಕಾರಿಯಾಗಿ ಹಾಗೂ ಕೆ ಎಸ್ ಎಂ ಸಿ ಎ ಪಿ ಆರ್ ಓ ಆಗಿ ಸೇವೆ ಸಲ್ಲಿಸುತ್ತಿದ್ದಾರೆ., ಧರ್ಮ ಪ್ರಾಂತ್ಯ ರಜತ ಸಂಭ್ರಮದ ಸ್ವಾಗತ ಸಮಿತಿ, ಮತ್ತು ಆರ್ಥಿಕ ಸಮಿತಿಯಲ್ಲಿದ್ದು ಉತ್ತಮ ನಾಯಕತ್ವದ ಮುಖಾಂತರ ರಜತ ಸಂಭ್ರಮ ಯಶಸ್ವೀಗೊಳಿಸುವಲ್ಲಿ ಸೇಬಾಷ್ಟಿಯನ್ ಪಿ ಸಿ ನೀರ್ಣಾಯಕ ಕೊಡೆಗೆಯನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ಕೆ ಎಸ್ ಎಂ ಸಿ ಎ ಇದರ ಕೇಂದ್ರೀಯ ನಿರ್ದೇಶಕರು ಆಗಿರುವ ವಂದನಿಯ ಫಾ. ಶಾಜಿ ಮಾತ್ಯು ಅವರು ಸೇಬಾಷ್ಟಿಯನ್ ಪಿ ಸಿ ಅವರ ಹೊಸ ಜವಾಬ್ದಾರಿ ಸಮಾಜಕ್ಕೆ ಹೆಚ್ಚು ಸೇವೆ ನೀಡಲು ಒಂದು ಅವಕಾಶ ವಾಗಲಿ ಎಂದು ಹಾರೈಸಿದ್ದಾರೆ.

ತಾಲೂಕು ಉಪಾಧ್ಯಕ್ಷರಾಗಿ ಆಯ್ಕೆ ಯಾದ ಉಜಿರೆ ಕೆ ಎಸ್ ಎಂ ಸಿ ಎ ಪ್ರಾಥಮಿಕ ಘಟಕದ ಅಧ್ಯಕ್ಷ ಜೋಬಿನ್ ಮುಳವನ ಮಾಚಾರು, ಹಾಗೂ ಕಾರ್ಯದರ್ಶಿ ಯಾಗಿ ಆಯ್ಕೆ ಯಾಗಿರುವ ಪ್ರಿನ್ಸ್ ತೋಮಸ್ ತೋಟತ್ತಾಡಿ ಇವರನ್ನು
ಅಧ್ಯಕ್ಷರು ಬಿಟ್ಟಿ ನೆಡುನಿಲಂ, ಸೇಬಾಷ್ಟಿಯನ್ ಎಂ ಜೆ ಪ್ರದಾನ ಕಾರ್ಯದರ್ಶಿಗಳು, ಬೆನ್ನಿ ಕೋಲಮ್ಚೇರಿ ಉಪಾಧ್ಯಕ್ಷರು, ಜಿಮ್ಮಿ ಗುಂಡ್ಯ , ಜಾರ್ಜ್ ಟಿ ವಿ, ಶ್ರೀಮತಿ ಅಲ್ಫೋನ್ಸ, ಶ್ರೀಮತಿ ರರೀನಾ ಸಿಬಿ ಧರ್ಮಸ್ಥಳ. ಕೇಂದ್ರ ಸಮಿತಿ ಸದಸ್ಯರು ಅಭಿನಂದಿಸಿದ್ದಾರೆ.

Related posts

ಬೆಳ್ತಂಗಡಿಯಲ್ಲಿ ಸಿಂಧೂರ ಟ್ರೇಡರ್ಸ್ ಶುಭಾರಂಭ

Suddi Udaya

ಮುಗ್ಗ ಗುತ್ತುವಿನಲ್ಲಿ ಪೀತಾಂಬರ ಹೇರಾಜೆಯವರ 75 ನೇ ವರ್ಷದ ಹುಟ್ಟುಹಬ್ಬ ಆಚರಣೆ

Suddi Udaya

ಧರ್ಮಸ್ಥಳ ಪೊಲೀಸ್ ಠಾಣೆಯ ಪಿ.ಎಸ್.ಐ ಅನಿಲ್ ಕುಮಾರ್ ವರ್ಗಾವಣೆ: ನೂತನ ಪಿಎಸ್ಐ ಆಗಿ ಕಿಶೋ‌ರ್.ಪಿ ನೇಮಕ

Suddi Udaya

ಅಪಘಾತದಿಂದ ಗಾಯಗೊಂಡಿರುವ ಕೆಎಸ್‌ಎಮ್‌ಸಿಎ ಪಿಆರ್‌ಒ ಪಿ.ಸಿ ಸೆಬಾಸ್ಟಿಯನ್ ರವರನ್ನು ಭೇಟಿ ಮಾಡಿದ ಬಿಷಪ್ ಲಾರೆನ್ಸ್ ಮುಕ್ಕುಯಿ

Suddi Udaya

ಬೆಳ್ತಂಗಡಿ: ಎಸ್.ಬಿ.ಐ ಲೈಫ್ ಬೆಳ್ತಂಗಡಿ ಬ್ರಾಂಚ್ ಉದ್ಘಾಟನೆ

Suddi Udaya

ಪುತ್ರಬೈಲು ಕಿಂಡಿಅಣೆಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡ ಮರಗಳ ದಿಮ್ಮಿಗಳ ತೆರವು ಕಾರ್ಯ

Suddi Udaya
error: Content is protected !!