23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಪ್ರಗತಿ ಮಹಿಳಾ ಮಂಡಲದಿಂದ ಮಹಿಳಾ ದಿನಾಚರಣೆ, ಸಾಧಕರಿಗೆ ಸನ್ಮಾನ

ಉಜಿರೆಯ ಪ್ರಗತಿ ಮಹಿಳಾ ಮಂಡಲದ ವತಿಯಿಂದ ನಡೆದ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ವೈಟ್ ಲಿಪ್ಟರ್ ಹಾಗೂ ಬಾಡಿ ಬಿಲ್ಡರ್ ಉಜಿರೆಯ ಕು.ಶ್ರದ್ದಾ ನಾಯ್ಕ ಹಾಗೂ ವೈದ್ಯಕೀಯ ಸವಲತ್ತುಗಳು ಇಲ್ಲದಂತಹ ಕಾಲದಲ್ಲಿ ಸಾವಿರಾರು ಹೆರಿಗೆಗಳನ್ನು ಮಾಡಿಸಿದ ನಿವೃತ್ತ ಶುಶ್ರೂಷಕಿ ಶ್ರೀಮತಿ ದೇವಮ್ಮ ಅವರುಗಳನ್ನು ಸನ್ಮಾನಿಸಲಾಯಿತು

ಕು.ಶ್ರದ್ದಾರವರು ಉಜಿರೆಯ ತೋಟಗಾರಿಕಾ ಇಲಾಖೆಯ ನಿವೃತ್ತ ಅಧಿಕಾರಿ ಸಂಜೀವ ನಾಯ್ಕ ಹಾಗೂ ಕೃಷಿ ಇಲಾಖೆಯ ಅಧಿಕಾರಿ ಶ್ರೀಮತಿ ಶೈಲಜಾ ಇವರ ಪುತ್ರಿಯಾಗಿದ್ದು ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಗೊಳ್ಳುತ್ತಿರುವ ಪ್ರತಿಭಾನ್ವಿತ ಯುವ ಕ್ರೀಡಾಪಟುವಾಗಿರುತ್ತಾಳೆ .


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಅಧ್ಯಾಪಕಿ ಶ್ರೀಮತಿ ಮನೋರಮಾ ತೋಳ್ಪಾಡಿತ್ತಾಯ , ಬ್ಯಾಂಕ್ ಆಫ್ ಬರೋಡ ಉಜಿರೆ ಶಾಖೆಯ ಶ್ರೀಮತಿ ಸಂಧ್ಯಾ ,ಪ್ರಗತಿ ಮಹಿಳಾ ಮಂಡಲ ಉಜಿರೆಯ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಪ್ರಕಾಶ್, ಕಾರ್ಯದರ್ಶಿ ಶ್ರೀಮತಿ ಗಾಯತ್ರಿ ಶ್ರೀಧರ್, ಕೋಶಾಧಿಕಾರಿ ಶ್ರೀಮತಿ ಪೂರ್ಣಿಮ ಸಂಜೀವ್ ಉಪಸ್ಥಿತರಿದ್ದರು.


ನಂತರ ಉಜಿರೆಯ ನಿವೃತ್ತ ಶುಶ್ರೂಷಕಿ ಶ್ರೀಮತಿ ದೇವಮ್ಮ ಅವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು
ಕಾರ್ಯಕ್ರಮದ ಆರಂಭದಲ್ಲಿ ಸಂಘದ ಮಾರ್ಗದರ್ಶಕರಾಗಿದ್ದು ಇತ್ತೀಚಿಗೆ ದೈವಾಧೀನರಾದ ದಿ‌.ನಾ’ ವುಜಿರೆ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.


ಶ್ರೀಮತಿ ಜಯಲಕ್ಷ್ಮಿನಾಗೇಶ್ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಅಧ್ಯಕ್ಷೆ ಶ್ರೀಮತಿ ಜಯಶ್ರೀ ಪ್ರಕಾಶ್ ಸ್ವಾಗತಿಸಿದರು . ಶ್ರೀಮತಿ ಅನ್ನಪೂರ್ಣ ಪ್ರಕಾಶ್ ಕಾರ್ಯಕ್ರಮವನ್ನು ನಿರೂಪಿಸಿ, ಶ್ರೀಮತಿ ನಳಿನಿ ಇಚ್ಚಿಲ ವಂದಿಸಿದರು.

Related posts

ಪೆರಿಂಜೆ : ಪಡ್ಡಾಯಿಬೆಟ್ಟು ನಿವಾಸಿ ಕೃಷಿಕ ವಿಠಲ ಹೆಗ್ಡೆ ನಿಧನ

Suddi Udaya

ಜ.25: ಧರ್ಮಸ್ಥಳದಲ್ಲಿ ಶ್ರೀ ಶಿವಶಕ್ತಿ ಅಯ್ಯಂಗಾರ್ ಬೇಕರಿ ಶುಭಾರಂಭ

Suddi Udaya

ಭಾರೀ ಮಳೆಗೆ: ಮದ್ದಡ್ಕ-ಪಡಂಗಡಿ ಕುದ್ರೆಂಜ ಸಮೀಪ ತೋಟಕ್ಕೆ ನುಗ್ಗಿದ್ದ ನೀರು

Suddi Udaya

ಮೊಗ್ರು: ಮಳೆಯಿಂದ ಹಾನಿಯಾದ ಮುಖ್ಯರಸ್ತೆಯ ದುರಸ್ತಿ ಕಾರ್ಯ

Suddi Udaya

ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾಗಿ ಸುನೀಲ್ ಕುಮಾರ್ , ಉಪಾಧ್ಯಕ್ಷರಾಗಿ ದಯಾನಂದ ಎಸ್

Suddi Udaya

ಕೊಕ್ಕಡ: ರಿಕ್ಷಾ ಚಾಲಕ ನೇಣುಬಿಗಿದು ಆತ್ಮಹತ್ಯೆ

Suddi Udaya
error: Content is protected !!