ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಇದರ ಬೆಳ್ತಂಗಡಿ ತಾಲೂಕು ಶಾಖೆಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಬೆಳ್ತಂಗಡಿ ಮಾರಿಗುಡಿ ಬಳಿಯ ಏಕತಾ ಸೌದದಲ್ಲಿ ಜರುಗಿತು.
ಸಂಘದ 2023ನೇ ಸಾಲಿನ ಸಾಧಕರ ಸನ್ಮಾನ ಹಾಗೂ ಸಂಘದ ನಿಕಟ ಪೂರ್ವ ಅಧ್ಯಕ್ಷ ಡಾ.ಜಯಕೀರ್ತಿ ಜೈನ್ ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಕೆ.ಎಸ್ ಚಂದ್ರಶೇಖರ ನೆರವೇರಿಸಿದರು.
ಅಧ್ಯಕ್ಷತೆಯನ್ನು ತಾಲೂಕು ಸಂಘದ ಅಧ್ಯಕ್ಷ ಜಯರಾಜ್ ಜೈನ್ ವಹಿಸಿದ್ದರು. ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾ ಕೇಸರಿ, ಪಸುಸಂಗೋಪನಾ ಇಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ.ರವಿಕುಮಾರ್ ಎಂ., ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಕೆ.ನೀಲಯ ಗೌಡ, ಕ.ರಾ.ಸ. ನೌ.ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಚಿದಾನಂದ ಎಸ್. ಹೂಗಾರ್, ಕಾರ್ಯದರ್ಶಿ ಗಂಗಾರಾಣಿ ನಾ. ಜೋಶಿ, ಕೋಶಾಧಿಕಾರಿ ಮೇರಿ ಎನ್. ಜೆ., ರಾಜ್ಯ ಪರಿಷತ್ ಸದಸ್ಯ ಆನಂದ ಡಿ, ಆಂತರಿಕ ಲೆಕ್ಕ ಪರಿಶೋಧಕ ರಘುಪತಿ ಕೆ.ರಾವ್, ಸಂಚಾಲಕ ಧರಣೇಂದ್ರ ಕೆ., ಪ್ರೌಢ ಶಾಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ತಚ್ಚಮೆ, ಅಮಿತಾನಂದ ಹೆಗ್ಡೆ ಬಂಗಾಡಿ, ಎಡ್ವರ್ಡ್ ಡಿಸೋಜಾ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ವಿಠಲಶೆಟ್ಟಿ, ಸಂಘದ ಉಪಾಧ್ಯಕ್ಷರುಗಳಾದ ಸಿದ್ದೇಶ್ ನಾಯಕ್, ಪರಮೇಶ್ ಟಿ, ಮಂಜ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.
ರತ್ನಾವತಿ ಮತ್ತು ತಂಡ ಪ್ರಾರ್ಥನೆ ಹಾಡಿದರು. ಆನಂದ ಡಿ ಸ್ವಾಗತಿಸಿದರು. ಜಯರಾಜ್ ಜೈನ್ ಪ್ರಸ್ತಾವನೆಗೈದರು ವಿಠಲ ಶೆಟ್ಟಿ ಅಭಿನಂದನಾ ಸಭೆ ನೆರವೇರಿಸಿದರು. ಸಂಘದ ವರದಿಯನ್ನು ಗಂಗಾರಾಣಿ ನಾ.ಜೋಶಿ ವಾಚಿಸಿದರೆ, ಲೆಕ್ಕಪತ್ರವನ್ನು ಮಂಡನೆ ಮೇರಿ ಎನ್. ಜಿ ಮಂಡಿಸಿದರು.
ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ : ಕಾರ್ಯಕ್ರಮದಲ್ಲಿ ಸರಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಡಾ. ಜಯಕೀರ್ತಿ ಜೈನ್ ಸಹಿತ ಹಲವರು ಸಾಧಕರಿಗೆ ಸನ್ಮಾನ ನಡೆಯಿತು. ಕೃಷಿ ಕ್ಷೇತ್ರದ ಸಾಧನೆಗಾಗಿ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತರಾಗಿರುವ ಬಿ.ಕೆ.ದೇವ ರಾವ್ ಕಡಿರುದ್ಯಾವರ, ಗೃಹ ರಕ್ಷಕ ದಳದಲ್ಲಿ ಮುಖ್ಯ ಮಂತ್ರಿ ಚಿನ್ನದ ಪದಕ ಪುರಸ್ಕೃತ ಜಯಾನಂದ ಲಾಯಿಲ, ಅಗ್ನಿ ಶಾಮಕ ಸೇವೆಗಾಗಿ ಮುಖ್ಯಮಂತ್ರಿ ಚಿನ್ನದ ಪದಕ ಪಡೆದಿರುವ ಉಸ್ಮಾನ್ ಗರ್ಡಾಡಿ, ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿರುವ ಬೆಳಾಲು ಪ್ರೌಢ ಶಾಲಾ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್ ಚೊಕ್ಕಾಡಿ, ಪ್ರಶಾಂತ್ ಬಂದಾರು ಮತ್ತು ಕಲ್ಲೇಶಪ್ಪ ಮುಂಡೂರು, ಕ್ರೀಡೆಯಲ್ಲಿ ರಾಜ್ಯ ಮಟ್ಟದ ಪುರಸ್ಕಾರ ಪಡೆದಿರುವ ಹೇಮಚಂದ್ರ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆ ತೋರಿರುವ ಪದ್ಮಪ್ರಿಯ ಜೈನ್, ಕಬಡ್ಡಿ ಕ್ರೀಡೆಯಲ್ಲಿ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿರುವ ಕವನ್ ಕುಮಾರ್ ಮತ್ತು ಚೇತನಾ, ಎಸ್ಸೆಸ್ಸೆಲ್ಸಿಯಲ್ಲಿ ಫಲಿತಾಂಶದಲ್ಲಿ ವಿಶೇಶ ಸಾಧನೆ ತೋರಿರುವ ವಾಣಿ ಆಂಗ್ಲ ಮಾದ್ಯಮ ಶಾಲಾ ವಿದ್ಯಾರ್ಥಿನಿ ರಕ್ಷಿತಾ, ಕುಮಾರ ಅಭಿಷೇಕ್, ಅಮೃತಾ ಎಸ್ ಎಇ.ಎಂ ಉಜಿರೆ, ಸುರಕ್ಷಿತಾ ಕನ್ನಡ ಮಾದ್ಯಮ ಶಾಲೆ ಪೆರ್ಲ ಬೈಪಾಡಿ, ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಶಿವಶಂಕರ್ ಭಟ್, ಬೆಂಗಳೂರು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯ ಕಾರ್ಯದರ್ಶಿ ಯಾಗಿ ನೇಮಕಗೊಂಡಿರುವ ಕೃಷ್ಣಾನಂದರಾವ್ ಮುಂಡಾಜೆ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ರವಿ ರಾಜ್ ಗೌಡ, ರಾಷ್ಟ್ರ ಮಟ್ಟದ ಕಬಡ್ಡಿ ಪಟು, ಅರಣ್ಯ ಇಲಾಖೆಯ ವಿನಯ ಚಂದ್ರ ಮತ್ತು ಸಂತೋಷ್ ಕುಮಾರ್ ಬಿ., ದೇವಿ ಪ್ರಸಾದ್ ಪಶುಸಂಗೋಪನೆ ತೋಟಗಾರಿಕೆ ಬಂದಾರು- ಮೊಗ್ರು ಇವರನ್ನು ಸನ್ಮಾನಿಸಲಾಯಿತು.
ಇವರ ಸಾಧನ ವಿವರವನ್ನು ಪಿಡಿಒ ಗಾಯತ್ರಿ, ಆರೋಗ್ಯ ಇಲಾಖೆಯ ಮೋಹಿನಿ, ಟಿಜಿಟಿ ಯ ಸುರೇಶ್, ತೋಟಗಾರಿಕಾ ಇಲಾಖೆಯ ಮಲ್ಲಿನಾಥ ಬಿರಾದಾರ್, ಕೃಷಿ ಇಲಾಖೆಯ ಚಿದಾನಂದ ಎಸ್.ಹೂಗಾರ್, ಶಿಕ್ಷಣ ಇಲಾಖೆಯ ಧರಣೇಂದ್ರ ಕುಮಾರ್, ಅರಣ್ಯ ಇಲಾಖೆಯ ಹರಿಪ್ರಸಾದ್, ಶಿಕ್ಷಣ ಇಲಾಖೆಯ ಆರತಿ ಇವರು ನೀಡಿದರು.
ನಿಕಟಪೂರ್ವ ಅಧ್ಯಕ್ಷ ನನಿವೃತ್ತ ಡಾ.ಜಯಕೀರ್ತಿ ಜೈನ್ ಅವರನ್ನು ಪ್ರಾ.ಶಾಲಾ ಶಿಕ್ಷಕರ ಸಂಘ, ಜಿಪಿಟಿ ಶಿಕ್ಷಕರ ಸಂಘ ಹಾಗೂ ನಿವೃತ್ತ ನೌಕರರ ಸಂಘದಿಂದ ಸನ್ಮಾನಿಸಲಾಯಿತು.
ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ನಿರೂಪಿಸಿದರು. ಆರೋಗ್ಯ ಇಲಾಖೆಯ ಚಂದ್ರಶೇಖರ ಧನ್ಯವಾದವಿತ್ತರು. ನೌಕರರ ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ವೃಂದ ಸಂಘಟನೆಗಳ ಪದಾಧಿಕಾರಿಗಳು ಸಹಕರಿಸಿದರು. ಈ ವೇಳೆ ವಿವಿಧ ಸಂಘದ ಪದಾಧಿಕಾರಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.