ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಎಂಟನೇ ದಿನದ ಬ್ರಹ್ಮಕಲಶೋತ್ಸವ:

Suddi Udaya

ಮಿತ್ತಬಾಗಿಲು: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನ ಇದರ ಬ್ರಹ್ಮ ಕಲಶೋತ್ಸವದ ಎಂಟನೇ ದಿನವಾದ ಇಂದು ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು

ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಾಚನ ನೀಡಿ, ಧಾರ್ಮಿಕ ಜಾಗೃತಿ ಈಗ ಎದ್ದು ನಿಂತಿದೆ, ಅದೆಷ್ಟೋ ಬಾರಿ ವಿದೇಶಿಗರ ದಾಳಿ ನಡೆದರೂ ಮೂಲ ಸಂಸ್ಕೃತಿ ನಶಿಸುವ ಪ್ರಯತ್ನ ನಡೆದರೂ, ಭಾರತೀಯ ಸಂಸ್ಕೃತಿ ಉಳಿಯಲು ಕಾರಣ ಅದರಲ್ಲಿ ರುವ ಧರ್ಮಕ್ಕೆ ಗಟ್ಟಿತನ. ನಮ್ಮ ಸನಾತನ ಹಿಂದೂ ನೆಲೆಗೆ ಭದ್ರವಾದ ನೆಲೆಯಿದೆ, ಎನ್ನುವುದಕ್ಕೆ ನಮ್ಮವರ ಅಗಾದ ಶ್ರಮ ಹಾಗೂ ಪ್ರಯತ್ನ ಇದೆ ಎನ್ನುವುದಕ್ಕೆ ಒಂದು ಸ್ಪಷ್ಟ ನಿದರ್ಷನವೇ ನಮ್ಮ ಸಂಸ್ಕೃತಿ ಎಂದರು.

ಅಧ್ಯಕ್ಷತೆಯನ್ನು ಆಡಳಿತಾಧಿಕಾರಿ ಮೋಹನ್ ಕಾರಿಂಜ ವಹಿಸಿದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಸುವರ್ಣ ಪ್ರತಿಷ್ಠಾನ ಅಧ್ಯಕ್ಷ ಸಂಪತ್ ಸುವರ್ಣ, ಮಂಗಳೂರು ದ.ಕ ಜಿಲ್ಲಾ ಹಾಲು ಒಕ್ಕೂಟ ಅಧ್ಯಕ್ಷೆ ಸುಚರಿತ ಶೆಟ್ಟಿ, ಮಂಗಳೂರು ದ.ಕ ಜಿಲ್ಲಾ ಹಾಲು ಒಕ್ಕೂಟ, ನಿರ್ದೇಶಕ ಪದ್ಮನಾಭ ಶೆಟ್ಟಿ ಅರ್ಕಜೆ, ಮಾಯ ಬೆಳಾಲು ಮಾಯ ಶ್ರೀ ಮಹಾದೇವ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹಾಗು ವಾಣಿ ವಿದ್ಯಾ ಸಂಸ್ಥೆಗಳ ಗೌರವಾಧ್ಯಕ್ಷ ಹೆಚ್ ಪದ್ಮ ಗೌಡ, ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಹಾಗೂ ಶೀ ಅನ್ನಪೂರ್ಣೇಶ್ವರಿ ಸೇವಾ ಟ್ರಸ್ಟ್ (ರಿ.) ವಿಜಯನಗರ, ಮೈಸೂರು ಅಧ್ಯಕ್ಷ ಡಾ| ಅನಂತ ಗೌಡ ಕಲ್ಲೆಟ್ಟು, ಬೆಂಗಳೂರು ಕ್ರೈಸ್ಟ್‌ ಯೂನಿರ್ವಸಿಟಿ ಸಹಾಯಕ ಪ್ರಾಧ್ಯಾಪಕರು ಡಾ| ಪ್ರಶಾಂತ್ ದಿಡುಪೆ, ಕಡಿರುದ್ಯಾವರ ಸಾವಿತ್ರಿ ಬೈಲುವಾರು ಸಮಿತಿ ಪ್ರಮುಖರು ರವೀಂದ್ರ ಪೂಜಾರಿ, ಕಾನರ್ಪ, ಕಡಿರುದ್ಯಾವರ ಶ್ರೀ ಗಿರಿಜೆ ಬೈಲುವಾರು ಸಮಿತಿ ಪ್ರಮುಖರು ಆನಂದ ಗೌಡ ಮುಳಿಹಿತ್ತು,, ಕಡಿರುದ್ಯಾವರ ಶ್ರೀದುರ್ಗಾದೇವಿ ಬೈಲುವಾರು ಸಮಿತಿ ಪ್ರಮುಖರು ಲಕ್ಷ್ಮಣ ಪೂಜಾರಿ ಮಠ,, ನೇತ್ರಾವತಿ ಬೈಲುವಾರು ಸಮಿತಿ, ಕಡಿರುದ್ಯಾವರ ಪ್ರಮುಖರು ಗೋಪಾಲ ಗೌಡ ಗುಮ್ಮಡಿಮಾರ್ ಉದ್ದಾರ, ಕಡಿರುದ್ಯಾವರ ಶ್ರೀ ಲಲಿತೆ ಬೈಲುವಾರು ಸಮಿತಿ ಪ್ರಮುಖರು ದೀಕ್ಷಿತ್ ಹೆಚ್ ಹೊಸಮಾರು, ಕಡಿರುದ್ಯಾವರ ಕಮಲಾಕ್ಷಿ ಬೈಲುವಾರು ಸಮಿತಿ ಪ್ರಮುಖರು ಸಂಜೀವ ಗೌಡ ನೂಜಿ ದರ್ಖಾಸು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯಿಂದ ದೇವಳದಲ್ಲಿ ನಿರಂತರ ಭಜನಾ ಸೇವೆಯ ನೇತೃತ್ವ ವಹಿಸಿದವರಿಗೆ ದಿ| ಬಿ. ಕೆ. ಗಂಗಾಧರ ರಾವ್, ಅವರ ಪರವಾಗಿ ಬಿ. ಕೆ. ರಾಜಶೇಖರ ರಾವ್, ಕೊಂಬಿನಡ್ಕ, ಪಿ. ಎಸ್ ಚಂದ್ರಶೇಖರ ರಾವ್ ಕೊಲ್ಲಿಪಾಲು, ಎ. ಶಿವಣ್ಣ ಗೌಡ ಅಣಿಲ, ವಿಜಯ ಪೂಜಾರಿ ದೇವಸ ಕಾಜೂರು, ನಾರಾಯಣ ಗೌಡ ಸೀ೦ದಡ್ಡು, ಅಣ್ಣಿ ಪೂಜಾರಿ ಕಾಯರ್ದೊಟ್ಟು, ಬಿ.ಕೆ ಶ್ರೀನಿವಾಸ್ ರಾವ್ ಇವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಅಧ್ಯಕ್ಷ ಬಿ.ಕೆ ಧನಂಜಯ ರಾವ್, ಜೀರ್ಣೋದ್ಧಾರ ಸಮಿತಿಯ ಲೋಕೇಶ್ ರಾವ್, ಬ್ರಹ್ಮಕಲಶೋತ್ಸವ ಸಮಿತಿಯ ಕೋಶಾಧಿಕಾರಿ ವಾಸುದೇವ ರಾವ್ ಕಕ್ಕೆನೇಜಿ, ಯಶೋಧರ ಬಲ್ಲಾಳ್ ಬಂಗಾಡಿ ಅರಮನೆ, ವರ್ಷ ವರುಣ್ ಕುಮಾರ್ ಬೆಂಗಳೂರು, ಬೈಲುವಾರು ಸಮಿತಿಯ ರವೀಂದ್ರ ಪೂಜಾರಿ, ಆನಂದ ಗೌಡ , ಲಕ್ಷ್ಮಣ ಪೂಜಾರಿ, ಗೋಪಾಲ ಗೌಡ, ದೀಕ್ಷಿತ್ ಹೆಚ್, ಸಂಜೀವ ಗೌಡ, ಹಾಗೂ ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು.

ರೂಪಶ್ರೀ ಉಜಿರೆ ಪ್ರಾರ್ಥಿಸಿ, ನಗರಾಲಂಕರ ಸಮಿತಿಯ ಸಂಚಾಲಕ ಉಮೇಶ್ ಪೂಜಾರಿ ಮಾಲೂರು ಸ್ವಾಗತಿಸಿದರು. ಜನಾರ್ದನ ಕಾನಪ೯ ಕಾರ್ಯಕ್ರಮ ನಿರೂಪಿಸಿದರು.

ವರದಿ: ರತ್ನಾಕರ್ ನಾವೂರು

Leave a Comment

error: Content is protected !!