April 12, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಳಂಜ ವಾಲಿಬಾಲ್ ಕ್ಲಬ್ ಸೀಸನ್-5 ವಾಲಿಬಾಲ್ ಪಂದ್ಯಾಟ ಯಶಸ್ವಿಯಾಗಿ ಸಂಪನ್ನ.

ಬಳಂಜ: ಕಳೆದ 5 ವರ್ಷಗಳ ಹಿಂದೆ ಬಳಂಜದಲ್ಲಿ ಬಿವಿಎಲ್ ಬಿಡ್ಡಿಂಗ್ ಮಾದರಿಯ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಿ 5 ಸೀಸನ್ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ.

ಬಿಡ್ಡಿಂಗ್ ಮಾದರಿಯ 6 ತಂಡಗಳ ಪೈಕಿ ಪ್ರಗತಿಪರ ಕೃಷಿಕ ವಿಶ್ವನಾಥ ಹೊಳ್ಳ ಮತ್ತು ಯುವ ಉದ್ಯಮಿ ಅನಂತರಾಮ ಹೊಳ್ಳ ಮಾಲಕತ್ವದ ಮಜ್ಜೇನಿಬೈಲು ಬ್ರದರ್ಸ್ ತಂಡ ಸೀಸನ್ 5 ರ ಎಲ್ಲಾ ಪಂದ್ಯಾವಳಿಯಲ್ಲಿ ಪ್ರಥಮ‌ ಸ್ಥಾನ‌ ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿದೆ.

ರಾಕೇಶ್ ಹೆಗ್ಡೆ ಮಾಲಕತ್ವದ ಇಕೋಫ್ರೇಶ್ ಎಂಟರ್ಪ್ರೈಸಸ್, ಸಂತೋಷ್ ಪಿ ಕೋಟ್ಯಾನ್ ಮಾಲಕತ್ವದ ಕೋಟ್ಯಾನ್ ರಾಕರ್ಸ್, ಸಂತೋಷ್ ಕುಮಾರ್ ಮಾಲಕತ್ವದ ಶಿವಗಿರಿ ಕಾಪಿನಡ್ಕ, ಸಚಿನ್ ಶೆಟ್ಟಿ ಮಾಲಕತ್ವದ ಶ್ರೀಮಾತಾ ಅಟೆಕ್ಕರ್ಸ್,ವಿನು ಬಳಂಜ ಮಾಲಕತ್ವದ ದಿಮಿಸೋಲೆ ತಂಡವು ಭಾಗವಹಿಸಿದ್ದವು.

ಚಾಂಪಿಯನ್ ತಂಡದಲ್ಲಿ ಗುರುಪ್ರಸಾದ್ ಹೆಗ್ಡೆ ದರಿಮಾರ್,ಲತೇಶ್ ಪೆರಾಜೆ,ಯಶಸ್ಸ್ ಬಳಂಜ,ನಿಶಾಂತ್ ಹುಂಬೆಜೆ,ಶರಣ್ ಅಟ್ಲಾಜೆ,ಯತೀಶ್ ಶಾರಬೈಲು,ಪ್ರಕಾಶ್ ಶೆಟ್ಟಿ ತಾರ್ದೊಟ್ಟು,ನಿತಿನ್,ಅಭಿ,ಅನ್ವಿತ್,ರಾಹುಲ್ ಇದ್ದರು.

ಬಳಂಜ ವಾಲಿಬಾಲ್ ಕ್ಲಬ್ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ ಸೇರಿದಂತೆ ತಂಡದ ಪದಾಧಿಕಾರಿಗಳು, ಆಟಗಾರರು, ವಿವಿಧ ತಂಡದ ಮಾಲಕರು ಚಾಂಪಿಯನ್ ತಂಡವನ್ನು ಅಭಿನಂದಿಸಿದರು.

ಮಜ್ಜೇನಿಬೈಲು ಬ್ರದರ್ಸ್ ತಂಡ ಚಾಂಪಿಯನ್ ಆದ ಹಿನ್ನಲೆಯಲ್ಲಿ ತಂಡದ ಎಲ್ಲಾ ಸದಸ್ಯರನ್ನು ತಂಡದ ಮಾಲಕರಾದ ವಿಶ್ವನಾಥ ಹೊಳ್ಳ,ಅನಂತರಾಮ ಹೊಳ್ಳ ಶಿರ್ಡಿ ಸಾಯಿಬಾಬಾ ಮಂದಿರ ದರ್ಶನ ಯಾತ್ರೆ ಕೈಗೊಂಡಿದ್ದಾರೆ.

Related posts

ಶಿರ್ಲಾಲು ರಮಾನಂದ ಟೈಲರ್ ನಿಧನ

Suddi Udaya

ಬಳಂಜ: ನಾಲ್ಕೂರು ಬೊಳ್ಳಾಜೆ, ಪುಣ್ಕೆದೊಟ್ಟು ಪರಿಸರದಲ್ಲಿ ಚಿರತೆ ಹೆಜ್ಜೆಗುರುತು: ಅರಣ್ಯ ಇಲಾಖೆಗೆ ಮಾಹಿತಿ, ಚಿರತೆಯ ಸೆರೆಗೆ ಬೋನ್ ಅಳವಡಿಕೆ

Suddi Udaya

ಕುತ್ಲೂರು ಗ್ರಾಮ ಅರಣ್ಯ ಸಮಿತಿಯ ವಾರ್ಷಿಕ ಮಹಾಸಭೆ

Suddi Udaya

ಜ. 29-31: ಬೆಳ್ತಂಗಡಿ ಸ್ಪಂದನ ಪಾಲಿಕ್ಲಿನಿಕ್ ಮತ್ತು ಲ್ಯಾಬೋರೇಟರಿ ಹಾಗೂ ಸ್ಪಂದನ ಕ್ಲಿನಿಕ್‌ನಲ್ಲಿ ಉಚಿತ ಹಾಗೂ ವಿಶೇಷ ರಿಯಾಯಿತಿ

Suddi Udaya

ನಾವರ ದೇವಸ್ಥಾನದ ಬಳಿ ರಬ್ಬರ್ ತೋಟಕ್ಕೆ ಬೆಂಕಿ

Suddi Udaya

ಮೊಗ್ರು ಮುಗೇರಡ್ಕ ‘ಜೈ ಶ್ರೀರಾಮ್ ಫ್ರೆಂಡ್ಸ್ ಕ್ಲಬ್’ ಬೆಳ್ಳಿಹಬ್ಬ ಪ್ರಯುಕ್ತ ‘ರಜತ ಪಥ’ ಕಾರ್ಯಕ್ರಮ

Suddi Udaya
error: Content is protected !!