ಜೋಗಿ ಪುರುಷರ ವೃಂದ ನಿಟ್ಟಡ್ಕ ನಾಲ್ಕೂರು ವತಿಯಿಂದ ರಾಶಿಪೂಜೆ: ಶಾಸಕ ಹರೀಶ್ ಪೂಂಜರವರಿಗೆ ಗೌರವಾರ್ಪಣೆ, ಪೂಜೆಯಲ್ಲಿ ನೂರಾರು ಭಕ್ತರು ಭಾಗಿ

Suddi Udaya

ಬಳಂಜ: ಜೋಗಿ ಪುರುಷರ ವೃಂದ ನಿಟ್ಟಡ್ಕ ನಾಲ್ಕೂರು ಇದರ ವತಿಯಿಂದ ರಾಶಿ ಪೂಜೆಯು ನಿಟ್ಟಡ್ಕ ಪಲ್ಕೆಯಲ್ಲಿ ಅತ್ಯಂತ ಶ್ರದ್ದಾ ಭಕ್ತಿಯಿಂದ ನಡೆಯಿತು.

ತುಳುನಾಡಿನ ಅತ್ಯಂತ ಶ್ರೇಷ್ಠ ಜಾನಪದ ಕಲೆಗಳಲ್ಲಿ ಪುರುಷರ ಕಟದಟುವುದು ಕೂಡ ಒಂದು. ಸುಗ್ಗಿಯ ಹುಣ್ಣಿಮೆಯ ಸಂದರ್ಭದಲ್ಲಿ ಪುಂಡು ಪುರುಷರು ವಿವಿಧ ವೇಷಧಾರಿಗಳು ಮನೆ ಮನೆಗೆ ಭೇಟಿ ನೀಡಿ ಪುರುಷ ಕಟ್ಟುವ ಪದ್ದತಿಯನ್ನು ನಾಲ್ಕೂರಿನಲ್ಲಿ ಕಳೆದ ನೂರಾರು ವರ್ಷಗಳಿಂದ ಹಿರಿಯರು ನಡೆಸಿಕೊಂಡು ಬರುತ್ತಿದ್ದಾರೆ.

ಸುರೇಶ್ ಪೂಜಾರಿ ಜೈಮಾತ ನಾಲ್ಕೂರು ಇವರ ನೇತೃತ್ವದಲ್ಲಿ ಪುರುಷರ ರಾಶಿಪೂಜೆಯಲ್ಲಿ ಊರ ಪರವೂರ ನೂರಾರು ಭಕ್ತರು ಭಾಗವಹಿಸಿ ದೇವರ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪೂಜಾ ಕಾರ್ಯಕ್ರಮಕ್ಕೆ ಶಾಸಕ ಹರೀಶ್ ಪೂಂಜರವರು ಬೇಟಿ ನೀಡಿದರು. ಜೋಗಿ ಪುರುಷರ ವತಿಯಿಂದ ಶಾಸಕರನ್ನು ಗೌರವಿಸಲಾಯಿತು.

ಪುರುಷರ ಕಟ್ಟುವ ಮೊದಲ ದಿನ ವಿಶ್ವನಾಥ ಪೂಜಾರಿ ಬಾಕ್ಯರಡ್ಡ, ಎರಡನೇ ದಿನ ಶ್ರೀಧರ ಪೂಜಾರಿ ಪುಣ್ಕೆದೊಟ್ಟು, ಮೂರನೆ ದಿನ ಸಂದೇಶ್ ಪೊನ್ನೆದಕಲ ಹಾಗೂ ರಾಶಿ ಪೂಜೆಯ ದಿನ ಶಾಸಕ ಹರೀಶ್ ಪೂಂಜರವರು ಅನ್ನದಾನದ ಸೇವೆ ನೀಡಿದರು.

ಈ ಸಂದರ್ಭದಲ್ಲಿ ಹಿರಿಯರಾದ ಚೆನಮು ಪೂಜಾರಿ, ಪದ್ಮಪ್ಪ ಪೂಜಾರಿ ತಾರಿಪಡ್ಪು,ಕೃಷ್ಣಪ್ಪ ಪೂಜಾರಿ ಅಲ್ಲಿಂತ್ಯಾರು,ರಾಜು ಶೆಟ್ಟಿ, ವಸಂತ ಪೂಜಾರಿ,ಶ್ರೀಧರ ಪೂಜಾರಿ,ಶೇಖರ ಪೂಜಾರಿ,ರಮೇಶ್ ಪೂಜಾರಿ,ರಮಾನಂದ ಪೂಜಾರಿ, ದುಗ್ಗಯ್ಯ ಪೂಜಾರಿ,ಟಾಕು ಪೂಜಾರಿ ಮಜ್ಜೇನಿ,ವಸಂತ ನೀರೋಳ್ಬೆ, ಅಳದಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ ಬಳಂಜ ಗ್ರಾ.ಪಂ ಅಧ್ಯಕ್ಷೆ ಶೋಭಾ ಕುಲಾಲ್,ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್, ಬಳಂಜ ಗ್ರಾ.ಪಂ ಉಪಾಧ್ಯಕ್ಷ ಯಶೋಧರ ಶೆಟ್ಟಿ,ಸದಸ್ಯ ಬಾಲಕೃಷ್ಣ ಪೂಜಾರಿ,ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ರಂಜಿತ್ ಹೆಚ್.ಡಿ, ಪ್ರಮುಖರಾದ ದಿನೇಶ್ ಕೋಟ್ಯಾನ್,ಪ್ರವೀಣ್ ಕುಮಾರ್ ಹೆಚ್.ಎಸ್,ಕರುಣಾಕರ ಹೆಗ್ಡೆ, ಯೋಗೀಶ್ ಯೈಕುರಿ,ದಿನೇಶ್ ಪೂಜಾರಿ ಅಂತರ, ಸೀತರಾಮ‌ ಪೂಜಾರಿ,ಹರೀಶ್ ವೈ ಚಂದ್ರಮ,ಸನತ್ ಶೆಟ್ಟಿ,ನಾಗೇಶ್ ಶೆಟ್ಟಿ,ಸಚಿನ್ ಶೆಟ್ಟಿ ಕುರೆಲ್ಯ, ನಾರಾಯಣ ಪೂಜಾರಿ,ಜನಾರ್ಧನ ಪೂಜಾರಿ,ರಂಜಿತ್ ಮಜಲಡ್ಡ,ಗೀರೀಶ್ ನಿಟ್ಟಡ್ಕ,ಜಗದೀಶ್ ಪೂಜಾರಿ ಬಳ್ಳಿದಡ್ಡ,ಪ್ರವೀಣ್ ಪೂಜಾರಿ ಲಾಂತ್ಯಾರು,ಯುವ ಕಲಾವಿದರು,ಯುವಶಕ್ತಿ ಫ್ರೆಂಡ್ಸ್, ಶ್ರೀಮಾತ ಫ್ರೆಂಡ್ಸ್ ತಂಡದ ಪದಾಧಿಕಾರಿಗಳು ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.

ಚಂದ್ರಹಾಸ ಬಳಂಜ ಕಾರ್ಯಕ್ರಮ ನಿರೂಪಿಸಿದರು.

Leave a Comment

error: Content is protected !!