ಬೆಳ್ತಂಗಡಿ : ಬಿ.ಎಸ್. ಪಿ ವತಿಯಿಂದ ದ.ಕ ಲೋಕಸಭಾ ಕ್ಷೇತ್ರಕ್ಕೆ ಕಾಂತಪ್ಪ ಅಲಂಗಾರ್ ರವರು ಎ.3ರಂದು ಬಿ.ಎಸ್.ಪಿ ಯ ಅಭ್ಯರ್ಥಿಯಾಗಿ ನಾಮ ಪತ್ರವನ್ನು ಸಲ್ಲಿಸುವ ಕುರಿತು ಮಾ.30ರಂದು ಬೆಳ್ತಂಗಡಿ ಸಂತೆಕಟ್ಟೆ ಸುವರ್ಣ ಆರ್ಕೇಡ್ ನಲ್ಲಿ ಪತ್ರಿಕಾಗೋಷ್ಠಿ ನಡೆಯಿತು.
ಬಿ.ಎಸ್.ಪಿ ಅಭ್ಯರ್ಥಿ ಕಾಂತಪ್ಪ ಅಲಂಗಾರ್ ಮಾತನಾಡಿ ಬಿಜೆಪಿಯ ಆಳ್ವಿಕೆಯಲ್ಲಿ ದೇಶದ ಬಹುಜನರು ಆತಂಕದಲ್ಲಿದ್ದು ಬಿಜೆಪಿಯ ಸರಕಾರ ರಚಿಸಿದಾಗಲೆಲ್ಲ “ನಾವು ಸಂವಿಧಾನವನ್ನು ಬದಲಾಯಿಸುತ್ತೇವೆ” ಎಂದು ಹೇಳುತ್ತಲೇ ಇದ್ದಾರೆ. 2000 ಇಸವಿಯಲ್ಲೂ ಸಹ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳಿದ ಬಿಜೆಪಿ ಪಕ್ಷದ ವಿರುದ್ಧ ಬಿ.ಎಸ್.ಪಿಯು ದೇಶವ್ಯಾಪ್ತಿ ಹೋರಾಟ ಮಾಡಿದ ಮೇಲೆ ಇಂತಹ ಹೇಳಿಕೆ ನಿಂತು ಹೋಗಿತ್ತು. ಖಾಸಗೀಕರಣಕ್ಕೆ ಮೊದಲಿಗೆ ಚಾಲನೆ ನೀಡಿದವರು ಕಾಂಗ್ರೆಸ್. ಇಂದಿಗೂ ಬ್ಯಾಕ್‌ಲ್ಯಾಗ್ ಹುದ್ದೆಗಳನ್ನು ಭರ್ತಿ ಮಾಡದೇ ಕ್ರಮೇಣ ರದ್ದು ಮಾಡುತ್ತಿದೆ. ಇತರೆ ಹಿಂದುಳಿದ ವರ್ಗಗಳಿಗೆ (ಓಬಿಸಿ) ಮೀಸಲಾತಿ ನೀಡಲು ಶಿಫಾರಸ್ಸು ಮಾಡಿದ ಎರಡು ಆಯೋಗಗಳ ವರದಿಯನ್ನು ತಿಪ್ಪಗೆಸೆದ ಅಪಕೀರ್ತಿಯು ಕಾಂಗ್ರೆಸ್‌ಗೆ ಸಲ್ಲಬೇಕಾಗಿದೆ ಎಂದರು.
ಬಿ.ಎಸ್.ಪಿ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಗೋಪಾಲ್ ಮುತ್ತೂರು ಪ್ರಾಸ್ತವಿಕವಾಗಿ ಮಾತನಾಡಿ ಎಲ್ಲಾ ರಾಷ್ಟೀಯ ಪಕ್ಷಗಳು ಚುನಾವಣಾ ಬಾಂಡ್ ನ್ನು ಪಡೆಯುತ್ತವೆ ಆದರೆ ಬಹುಜನ ಸಮಾಜ ಪಾರ್ಟಿ ಯಾವುದೇ ಚುನಾವಣಾ ಬಾಂಡ್ ಗಳನ್ನು ಪಡೆಯುವುದಿಲ್ಲ ಎಂದರು
ಈ ಸಂದರ್ಭದಲ್ಲಿ ಬಿ.ಎಸ್. ಪಿ ಜಿಲ್ಲಾ ಘಟಕದ ಜಿಲ್ಲಾ ಉಪಾಧ್ಯಕ್ಷ ಶಿವಪ್ಪ ಗಾರ್ಡಡಿ, ಬಿ.ಎಸ್.ಪಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ತಾಲೂಕು ಅಧ್ಯಕ್ಷ ಪಿ.ಎಸ್ ಶ್ರೀನಿವಾಸ್ ಉಪಸ್ಥಿತರಿದ್ದರು.
ತಾಲೂಕು ಅಧ್ಯಕ್ಷ ಪಿ.ಎಸ್ ಶ್ರೀನಿವಾಸ್ ಸ್ವಾಗತಿಸಿ, ಜಿಲ್ಲಾಧ್ಯಕ್ಷ ಗೋಪಾಲ್ ಮುತ್ತೂರು ಧನ್ಯವಾದವಿತ್ತರು.