ಬೆಳ್ತಂಗಡಿ: ಭಾರತೀಯ ಭೂಸೇನೆಯಲ್ಲಿ ಕಳೆದ 20ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬಾರ್ಯ ಗ್ರಾಮದ ಪಿಲಿಗೂಡು ನಿವಾಸಿ ಹವಾಲ್ದಾರ್ ಜಯಾನಂದ ಪೂಜಾರಿ ಅವರು ಮಾ.31ರಂದು ನಿವೃತ್ತಿಯಾಗಲಿದ್ದಾರೆ
ಜಯಾನಂದ ಪೂಜಾರಿಯವರು 2004ರಿಂದ 2006ರ ತನಕ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಭೂಸೇನೆಯ ಟ್ರೈನಿಂಗ್ ಪಡೆದುಕೊಂಡಿದ್ದಾರೆ. ಬಳಿಕ 3 ವರ್ಷ ಉತ್ತರ ಪ್ರದೇಶದ ಮೀರತ್, 3 ವರ್ಷ 23ರಾಷ್ಟ್ರೀಯ ರೈಫಲ್, 3 ವರ್ಷ ಬೆಂಗಳೂರು, 3 ವರ್ಷ ಉತ್ತರ ಪ್ರದೇಶದ ಆಗ್ರಾ, 2 ವರ್ಷ ಜಮ್ಮು ಕಾಶ್ಮೀರದ ಲೇಹ್ ಲಕ್ ಹಾಗೂ ಪ್ರಸ್ತುತ ಬೆಂಗಳೂರಿನ 515 ಆರ್ಮಿ ಬೇಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ 20ವರ್ಷಗಳ ಸೇವಾ ಅವಧಿಯಲ್ಲಿ ಹಲವು ಪದಕಗಳನ್ನೂ ಪಡೆದುಕೊಂಡಿದ್ದಾರೆ. 9 ವರ್ಷಗಳ ಸುದೀರ್ಘ ಸೇವಾ ಪದಕ, ವಿಶೇಷ ಸೇವಾ ಪದಕ(ಆಪರೇಷನ್ ರಹಿನೋ), ಪಶ್ಚಿಮಬಂಗಾಳ, ಅಸ್ಸಾಂ, ಜಮ್ಮು ಕಾಶ್ಮೀರದಲ್ಲಿನ ಸೇವೆಯ ವೇಳೆ ಸೈನ್ಯ ಸೇವಾ ಪದಕ, 75ನೇ ಇಂಡಿಪೆಂಡೆನ್ಸ್ ವಾರ್ಷಿಕೋತ್ಸವ ಪದಕ, 20 ವರ್ಷಗಳ ಸುದೀರ್ಘ ಸೇವೆಗಾಗಿ ಪದಕ, 23 ರಾಷ್ಟ್ರೀಯ ರೈಫಲ್ ಹಾಗೂ ಅಸ್ಸಾಂನ ಗುವಾಹಟಿಯಲ್ಲಿ ಸೇವೆ ವೇಳೆ ಅತ್ಯುತ್ತಮ ಹಾರ್ಡ್ ವರ್ಕರ್ ಪ್ರಶಸ್ತಿ, ಲೇಹ್ ಲಾಕ್‌ನಲ್ಲಿ ಸೇವೆ ವೇಳೆ ಎಕ್ಸಲೆಂಟ್ ಅವಾರ್ಡ್ ಪಡೆದುಕೊಂಡಿದ್ದಾರೆ.
ಇವರು ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಪಿಲಿಗೂಡು ಪೆಲತ್ತಾಜೆ ದಿ.ಜನಾರ್ದನ ಪೂಜಾರಿ ಹಾಗೂ ಅಪ್ಪಿ ದಂಪತಿಯ ಪುತ್ರ. ಪತ್ನಿ ಪವಿತ್ರ, ಪುತ್ರಿಯರಾದ ತನ್ನಿ, ತಸ್ಸಿ,