April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅರಸಿನಮಕ್ಕಿ: ಶ್ರೀ ಗೋಪಾಲಕೃಷ್ಣ ಅ.ಹಿ.ಪ್ರಾ. ಶಾಲೆಯಲ್ಲಿ ಬೇಸಿಗೆ ಶಿಬಿರ ಉದ್ಘಾಟನೆ

ಅರಸಿನಮಕ್ಕಿ: ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕು ದಿನಗಳ ನಡೆಯುವ ಬೇಸಿಗೆ ಶಿಬಿರಕ್ಕೆ ಮಾ.28 ರಂದು ಚಾಲನೆ ನೀಡಲಾಯಿತು.

ಮೊದಲ ದಿನದ ಬೇಸಿಗೆ ಶಿಬಿರದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸೀತಾರಾಮ ಗೌಡ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಶಾಲಾ ಶಿಕ್ಷಕಿಯರಾದ ಶ್ರೀಮತಿ ದಿವ್ಯಶ್ರೀ ಯವರು ವಿದ್ಯಾರ್ಥಿಗಳಿಗೆ ಭಗವದ್ಗೀತೆಯನ್ನು ಪಠಿಸಲು ತಿಳಿಸಿಕೊಟ್ಟರು. ಕುಮಾರಿ ಲೋಲಾಕ್ಷಿ ಯವರು ಯಕ್ಷಗಾನ ಹಾಗೂ ತುಳು ಲಿಪಿ, ಶ್ರೀಮತಿ ಸ್ವಾತಿ ಯವರು ಭರತನಾಟ್ಯ ಹಾಗೂ ಶ್ರೀಮತಿ ಸಂಧ್ಯಾ ರವರು ಗಣಕಯಂತ್ರ ತರಬೇತಿಯನ್ನು ನೀಡಿದರು. ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡರು.

ವಿದ್ಯಾರ್ಥಿಗಳಾದ ಕಿರಣ್‌ ಹಾಗೂ ಶ್ರಾವ್ಯ ವಂದಿಸಿದರು. ಶ್ರೀಮತಿ ಹೇಮಾವತಿಯವರು ಕಾರ್ಯಕ್ರಮವನ್ನು ನಿರೂಪಿಸಿದರು

Related posts

ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ಸತೀಶ್ ಕೆ. ಕಾಶಿಪಟ್ಣ, ಉಪಾಧ್ಯಕ್ಷರಾಗಿ ದಿವಾಕರ ಭಂಡಾರಿ

Suddi Udaya

ಮಾಯಿಲ ಕೋಟೆ ಸೀಮೆ ದೈವಸ್ಥಾನದಲ್ಲಿ ಸಂಕ್ರಮಣ ಪೂಜೆ ಹಾಗೂ ಕಲ್ಲುರ್ಟಿ ಅಗೇಲು ಸೇವೆ

Suddi Udaya

ಕರಾಟೆ ಸ್ಪರ್ಧೆ : ಶ್ರೀ ಧ.ಮಂ. ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗೆ ಚಿನ್ನದ ಪದಕ

Suddi Udaya

ನಾರಾವಿ ಮಾಂಡೋವಿ ಮೋಟಾರ್ ಶಾಖೆಯ ವತಿಯಿಂದ ಶಿಕ್ಷಕರ ದಿನಾಚರಣೆಗೆ ವಿಶೇಷ ಕೊಡುಗೆ

Suddi Udaya

ನ.8: ಕಳೆಂಜ ನಡುಜಾರು ಸ.ಕಿ.ಪ್ರಾ. ಶಾಲೆಯಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ

Suddi Udaya

ಜಿ. ಕೃಷ್ಣ ಬೆಳ್ತಂಗಡಿ ನಿರ್ದೇಶನದ ” ಇದು ನಮ್ ಶಾಲೆ ” ಚಲನಚಿತ್ರದ ಪೋಸ್ಟರ್ ಹಾಗೂ ವಿಡಿಯೋ ಹಾಡುಗಳ” ಬಿಡುಗಡೆ

Suddi Udaya
error: Content is protected !!