23.6 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳಾಲು ಪ್ರೌಢಶಾಲೆಯಲ್ಲಿ ಬೇಸಿಗೆ ಶಿಬಿರ

ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕ ರಕ್ಷಕ ಸಂಘ ಮತ್ತು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಕ್ರೀಡೆ ಮತ್ತು ಮನೋಲ್ಲಾಸ ಶಿಬಿರ ಆರಂಭವಾಯಿತು. ಶಿಬಿರದ ಉದ್ಘಾಟನೆಯನ್ನು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶೇಖರ ಗೌಡ ಕೊಲ್ಲಿಮಾರ್ ರವರು ನೆರವೇರಿಸಿ ಮಾತನಾಡುತ್ತಾ, ಬೆಳಾಲು ಪ್ರೌಢಶಾಲೆಯಲ್ಲಿ ನಿರಂತರವಾಗಿ ಬೇಸಿಗೆ ಶಿಬಿರವು ಆಯೋಜನೆಗೊಳ್ಳುತ್ತಿದೆ. ಶಿಬಿರದ ಮೂಲಕ ವಿದ್ಯಾರ್ಥಿಗಳು ವಿಶೇಷ ತರಬೇತಿ ಮತ್ತು ಜ್ಞಾನವನ್ನು ಪಡೆದು, ಬದುಕಿನ ಸವಾಲುಗಳನ್ನು ಎದುರಿಸುವ ಆತ್ಮವಿಶ್ವಾಸ ಪಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಚರು. ಅತಿಥಿಗಳಾಗಿ ಆಗಮಿಸಿದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣೇಶ ಕನಿಕ್ಕಿಲರವರು ಶುಭಕೋರಿದರು.


ಒಂದು ವಾರದ ಶಿಬಿರದಲ್ಲಿ ರಂಗಕಲೆ, ಗಾಯನ, ಕರಕುಶಲ, ಉಜಿರೆ ಶ್ರೀ ಧ ಮ ಕಾಲೇಜು ಭೇಟಿ, ಆರೋಗ್ಯ ಮಾಹಿತಿ, ಕತೆಗಳಲ್ಲಿ ಜೀವನ ಮೌಲ್ಯ, ಬರವಣಿಗೆ ಕಲೆ ಮೊದಲಾದ ವಿಷಯಗಳಲ್ಲಿ ತರಬೇತಿ ನಡೆಯಲಿದೆ. ವಿವಿಧ ಸಂಪನ್ಮೂಲ ವ್ಯಕ್ತಿಗಳು ಆಗಮಿಸಲಿದ್ದಾರೆ.

ಮೊದಲ ದಿನದ ಶಿಬಿರದಲ್ಲಿ ಕರಕುಶಲ ತಯಾರಿಯ ಬಗ್ಗೆ ಚಿತ್ರಕಲಾ ಶಿಕ್ಷಕರಾದ ಉಜಿರೆಯ ಶ್ರೀರಾಮ್ ಮತ್ತು ಶ್ರೀಮತಿ ಕಾದಂಬರಿ ಧರ್ಮಸ್ಥಳ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿಯನ್ನು ನೀಡಿದರು.

ಉದ್ಘಾಟನಾ ಸಮಾರಂಭದಲ್ಲಿ ಶಿಬಿರದ ಸಂಯೋಜಕರಾದ ಕೃಷ್ಣಾನಂದ, ಸುಮನ್ ಯು ಎಸ್ , ಶ್ರೀಮತಿ ಕೋಕಿಲ, ಶ್ರೀಮತಿ ಚಿತ್ರಾರವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಕು. ರಕ್ಷಾ (ಎಂಟನೇ ತರಗತಿ) ಸ್ವಾಗತಿಸಿ, ಕು. ಚಿನ್ಮಯಿ(9ನೇ ತರಗತಿ) ವಂದಿಸಿದರು, ಕು. ಇಂದುಮತಿ(9ನೇ ತರಗತಿ) ಕಾರ್ಯಕ್ರಮ ನಿರೂಪಿಸಿದರು.

Related posts

ಚಾರ್ಮಾಡಿ : ಬಂಟ್ವಾಳ ಗ್ರಾಮದ ಯುವಕನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

Suddi Udaya

ಬಳಂಜ: ನಮ್ಮ ಮಣ್ಣು ನಮ್ಮ ದೇಶ ಧ್ಯೇಯದೊಂದಿಗೆ ದೆಹಲಿಯಲ್ಲಿ ನಿರ್ಮಾಣಗೊಳ್ಳುವ ಹುತಾತ್ಮರ ಸ್ಮಾರಕಕ್ಕೆ ಬಳಂಜ ಗ್ರಾ.ಪಂ ಮುಖೇನಾ ಮಣ್ಣು ಹಸ್ತಾಂತರ

Suddi Udaya

ಫೆ.4: ಮಡಂತ್ಯಾರು ನೂತನ್ ಕ್ಲೋತ್ ಸೆಂಟರ್‌ನಲ್ಲಿ ಅಮೃತ ಮಹೋತ್ಸವ ಸಂಭ್ರಮ, ಗಿಫ್ಟ್ ಕೂಪನ್ ಡ್ರಾ ವಿಜೇತರಿಗೆ ಬಹುಮಾನ ವಿತರಣೆ

Suddi Udaya

ಪುಂಜಾಲಕಟ್ಟೆಯಲ್ಲಿ ಹೆಸರಾಂತ ಬಿ.ಪುಂಡಲೀಕ ಬಾಳಿಗಾ & ಸನ್ಸ್ ಜ್ಯುವೆಲ್ಲರ್‍ಸ್ ವಿಸ್ತೃತ ನೂತನ ಮಳಿಗೆಯ ಶುಭಾರಂಭ

Suddi Udaya

ಜ.14-23: ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ

Suddi Udaya

ವೇಣೂರು: ಶ್ರೀ ಧ. ಮಂ. ಕೈಗಾರಿಕಾ ತರಬೇತಿ ಸಂಸ್ಥೆಯ ಶಿಕ್ಷಕ ಸನತ್ ಕುಮಾರ್ ಬೀಳ್ಕೊಡುಗೆ ಸಮಾರಂಭ

Suddi Udaya
error: Content is protected !!