ಕಡಬದ ಮರ್ದಾಳ ಜಂಕ್ಷನ್ ನಲ್ಲಿ ಅಕ್ರಮ ಗೋಸಾಗಾಟದ ಕಾರು ಡಿಕ್ಕಿ, ಗಂಭೀರ ಗಾಯಗೊಂಡ ವ್ಯಕ್ತಿ ಸಾವು: ಹಿಂದೂ ಸಂಘಟನೆಯ ಕಾರ್ಯಕರ್ತರಿಂದ ಪ್ರತಿಭಟನೆ,

Suddi Udaya

ಬೇಳ್ತಂಗಡಿ:ಕಡಬದ ಮರ್ದಾಳ ಜಂಕ್ಷನ್ ನಲ್ಲಿ ಅಕ್ರಮ ಗೋ ಸಾಗಾಟದಕಾರೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಮಾ.30 ರ ಸಂಜೆ ನಡೆದಿತ್ತು. ನೆಕ್ಕಿತ್ತಡ್ಕದ ಅಚ್ಚಿಲ ಪಟ್ಟೆ ನಿವಾಸಿ ವಿಠಲ ರೈ ಮೃತ ದುರ್ದೈವಿ.

ಸುಬ್ರಹ್ಮಣ್ಯ ಕಡೆಯಿಂದ ಕಡಬ ಕಡೆಗೆ ತೆರಳುತ್ತಿದ್ದ ಮಾರುತಿ 800 ಕಾರು ಡಿಕ್ಕಿಯಾಗಿದ್ದು, ಕಾರನ್ನು ಚಾಲಕ ನಿಲ್ಲಿಸದೆ ಪರಾರಿಯಾಗಿದ್ದ. ಆರೋಪಿಗಳು ಕಾರನ್ನು ಮರ್ಧಾಳ ಸಮೀಪದ ನೆಕ್ಕಿತ್ತಡ್ಕ ಎಂಬಲ್ಲಿನ ದಿ। ರಶೀದ್ ಎಂಬವರ ಮನೆಯ ಮುಂಭಾಗದಲ್ಲಿ ನಿಲ್ಲಿಸಿ ದನವನ್ನು ಪಕ್ಕದ ತೋಟದಲ್ಲಿ ಕಟ್ಟಿ ಪರಾರಿಯಾಗಿದ್ದಾರೆ.ವಿಠಲ ರೈ ಅವರಿಗೆ ಡಿಕ್ಕಿ ಹೊಡೆದ ಕಾರು ಎಸ್ಕೆಪ್ ಆಗಿತ್ತು. ಇಷ್ಟಾಗುತ್ತಿದ್ದಂತೆ ಕಾರಿನ ಕುರಿತು ಸಾರ್ವಜನಿಕರು ಮಾಹಿತಿ ಕಲೆ ಹಾಕಿದ್ದು ಈ ವೇಳೆ ಕಾರಿನಲ್ಲಿ 2 ದನಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.ಪ್ರತಿಭಟನೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಶಾಸಕಿ ಭಾಗೀರಥಿ ಮುರುಳ್ಯ ಸಾಥ್ಇಷ್ಟಾಗುತ್ತಿದ್ದಂತೆ ಹಿಂದೂ ಸಂಘಟನೆಯ ಕಾರ್ಯಕರ್ತರು ರಾಜ್ಯ ರಸ್ತೆ ತಡೆದು ಪ್ರತಿಭಟನೆಗೆ ನಡೆಸಿದರು.

ಘಟನೆಯ ವಿರುದ್ದ ರೊಚ್ಚಿಗೆದ್ದ ಹಿಂದೂ ಸಂಘಟನೆಗಳು ಕಡಬ ಆಸ್ಪತ್ರೆಯ ಬಳಿ ಮೊದಲು ಬೃಹತ್ ಪ್ರತಿಭಟನೆ ನಡೆಸಿದರು,ಎಸ್.ಪಿ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು. ಇನ್ನು ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ನಿರತರಿಗೆ ಬೆಂಬಲ ಸೂಚಿಸಿ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಅಕ್ರಮವಾಗಿ ನಡೆಸುತ್ತಿರುವ ಖಾಸಾಯಿ ಖಾನೆಗಳನ್ನು ಕೂಡಲೇ ಬಂದ್ ಮಾಡಬೇಕು. ಯಾರದೇ ಒತ್ತಡವಿದ್ದರೂ ಕಾನೂನು ಪ್ರಕಾರ ಸೂಕ್ತ ಕ್ರಮ ಜರುಗಿಸುವಂತೆ ಪೊಲೀಸರಿಗೆ ತಿಳಿಸಿದರು.

ಮಧ್ಯರಾತ್ರಿ ಸ್ಥಳಕ್ಕೆ ಎಸ್ಪಿ ಭೇಟಿ: ಇನ್ನು ಪ್ರತಿಭಟನಾಕಾರು ದಕ್ಷಿಣಕನ್ನಡ ಎಸ್ಪಿ ಸ್ಥಳಕ್ಕೆ ಬರೋವರೆಗೂ ಯಾವುದೇ ಕಾರಣಕ್ಕೂ ಪ್ರತಿಭಟನೆ ಕೈಬಿಡಲ್ಲ ಎಂದು ಪಟ್ಟು ಹಿಡಿದರು. ಮಧ್ಯರಾತ್ರಿ ಎಸ್ಪಿ ಸ್ಥಳಕ್ಕೆ ಭೇಟಿ ನೀಡಿದರು.

ಪ್ರತಿಭಟನಾನಿರತರು ಹಾಗೂ ಶಾಸಕರುಗಳ ಜೊತೆ ಮಾತುಕತೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮಕೈಗೊಳ್ಳೋದಾಗಿ ಭರವಸೆ ನೀಡಿದರು.ಭಾನುವಾರ ಮಧ್ಯಾಹ್ನದ ಒಳಗೆ ಆರೋಪಿಗಳನ್ನು ಬಂಧಿಸುವಂತೆ ಪ್ರತಿಭಟನಾಕಾರರು ಡೆಡ್ ಲೈನ್ ನೀಡಿದ್ದಾರೆ. ಆರೋಪಿಗಳನ್ನು ತ್ವರಿತವಾಗಿ ಬಂಧಿಸುವ ಎಲ್ಲಾ ಪ್ರಕ್ರಿಯೆಗಳನ್ನು, ಮಾಡುವ ಭರವಸೆ ನೀಡಿದ್ದಾರೆ.

ಈ ನಡುವೆ ಬೆಳಗ್ಗಿನ ಜಾವ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದ್ದು, ಈ ಬಗ್ಗೆ ಪೊಲೀಸರು ಅಧಿಕೃತ ಮಾಹಿತಿಯನ್ನು ಇನ್ನಷ್ಟೇ ನೀಡಬೇಕಾಗಿದೆ.

Leave a Comment

error: Content is protected !!