30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಸುಲ್ಕೇರಿಮೊಗ್ರು ಪುರುಷರ ಬಳಗ ವತಿಯಿಂದ ರಾಶಿ ಪೂಜೆ

ಸುಲ್ಕೇರಿಮೊಗ್ರು ಪುರುಷರ ಬಳಗ ವತಿಯಿಂದ ಗರಡಿ ವಠಾರದಲ್ಲಿ ರಾಶಿ ಪೂಜೆಯು ಭಕ್ತಿ ಶ್ರದ್ಧೆಯಿಂದ ವಿಜೃಂಭಣೆಯಿಂದ ಮಾ.30ರಂದು ಜರಗಿತು.

ಸುಗ್ಗಿ ಹುಣ್ಣಿಮೆ ದಿನ ಮೂರು ದಿನಗಳ ಕಾಲ ವಿವಿಧ ವೇಷ ಧರಿಸಿ ಗ್ರಾಮದಲ್ಲಿ ಮನೆ ಮನೆಗೆ ಭೇಟಿ ನೀಡಿ ಕದ್ರಿ ದೇವಸ್ಥಾನದಿಂದ ತೀರ್ಥ ಪ್ರಸಾದ ತಂದು ರಾಶಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಹಿರಿಯ ವೇಷಧಾರಿಗಳಾದ ರಾಮಣ್ಣ ಮೂಲ್ಯ ಅಂಬಡೆದಡಿ ಮತ್ತು ಓಬಯ್ಯ ದೇವಾಡಿಗ ಇವರಿಗೆ ಸನ್ಮಾನ ಮಾಡಲಾಯಿತು ಹಾಗೂ ಉಚಿತ ಡೋಲು ಸೇವೆ ಸಲ್ಲಿಸಿದ ಪ್ರಸಾದ್ ದಾಯಿಗುಡ್ಡೆ ಇವರನ್ನು ಗೌರವಿಸಲಾಯಿತು.

ಸಂದೀಪ್ ಪಟ್ಲ ನೇತೃತ್ವದಲ್ಲಿ ನಡೆದ ಈ ರಾಶಿ ಪೂಜೆಯಲ್ಲಿ ಊರ ಹಾಗೂ ಪರವೂರ ನೂರಾರು ಭಕ್ತರು ಭಾಗವಹಿಸಿ ದೇವರ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಎಂ. ಗಂಗಾಧರ ಮಿತ್ತಮಾರು ಸೋಮನಾಥ ಬಂಗೇರ ವರ್ಪಳೆ, ಗುರುವಪ್ಪ ಪೂಜಾರಿ, ಪಟ್ಲ ರಾಮಪ್ಪ ಸಣ್ಣಪಟ್ಲ, ನಾರಾಯಣ ಪರಂಟ್ಯಾಲ, ಪುರಂದರ ಪಡುಬೈಲು, ಅಶೋಕ ಕಾಡಂಗೆ, ಅಳದಂಗಡಿ ಸಿಎ ಬ್ಯಾಂಕ್ ಉಪಾಧ್ಯಕ್ಷ ಜನಾರ್ಧನ ಕೊಡಂಗೆ, ರವಿ ಸಾಲಿಯಾನ್, ನಂದನ್ , ಗಣೇಶ್ ಕಾಡಂಗೆ, ರಾಜೇಂದ್ರ ಸಾಲಿಯಾನ್, ಧರ್ಣಪ್ಪ, ಪ್ರಮೋದ್, ವಸಂತ ಅಂಚನ್, ಆನಂದ ಅಂಚನ್, ಸಂಕೇತ್ ವರ್ಷಾಳೆ, ಕಿಶೋರ್ ,ಸತೀಶ್ ,ರಮೇಶ್, ಗೇತನ್, ಶಿವಪ್ಪ ಕೊಲ್ಲಂಗೆ ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಪೃಥ್ವಿ ಜುವೆಲ್ಸ್ ನಲ್ಲಿ ಬಂಪರ್ ಲಕ್ಕಿ ಡ್ರಾ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

Suddi Udaya

ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದ ಕ್ಷೇಮ ನಿಧಿಯ 12ನೇ ಸಹಾಯಧನ ಹಸ್ತಾಂತರ

Suddi Udaya

ಜೆಸಿಐ ಪುತ್ತೂರಿನಲ್ಲಿ ತರಬೇತಿ ಕಾರ್ಯಗಾರ

Suddi Udaya

ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಎಕ್ಸೆಲ್ ಪರ್ಬ-2024

Suddi Udaya

ಎಸ್.ಎಸ್.ಎಲ್.ಸಿ ಫಲಿತಾಂಶ: ಬೆಳ್ತಂಗಡಿ ತಾಲೂಕಿಗೆ ಶೇ. 94.18 ಫಲಿತಾಂಶ

Suddi Udaya

ಉಜಿರೆ: ಶಿಕ್ಷಕರ ದಿನಾಚರಣೆಯ ಅಂಗವಾಗಿ ನಡೆದ ಹಲವು ಸ್ಪರ್ಧೆಗಳಲ್ಲಿ ಎಸ್.ಡಿ.ಎಮ್ ಅನುದಾನಿತ ಸೆಕೆಂಡರಿ ಶಾಲೆಗೆ ಪ್ರಶಸ್ತಿ

Suddi Udaya
error: Content is protected !!