ಉಜಿರೆ : ಇಲ್ಲಿಯ ಶ್ರೀ ಧ.ಮ. ಕಾಲೇಜು ವಾರ್ಷಿಕೋತ್ಸವ, ವಿಶೇಷ ಸಾಧಕರಿಗೆ ಸನ್ಮಾನ – ಚಿಗುರು ಪತ್ರಿಕೆ ಅನಾವರಣ ಕಾರ್ಯಕ್ರಮವು ಮಾ.30ರಂದು ನಡೆಯಿತು.
ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಪ್ರೋ. ಪಿ.ಎಲ್. ಧರ್ಮ ಉಪಕುಲಪತಿಗಳು ಚಿಗುರು ಪತ್ರಿಕೆ ಅನಾವರಣಗೊಳಿಸಿ ಮಾತನಾಡಿ ತಂತ್ರಜ್ಞಾನ ಹೇಗಿರಬೇಕು ಎಂಬುವುದನ್ನು ಪ್ರಯೋಗ ಮಾಡಿದ್ದು ದಿ. ಯಶೋವರ್ಮ ರವರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ ಸಹನೆ ಹಾಗೂ ಸಹಬಾಳ್ವೆಯನ್ನು ಕಲಿಸಿ ಕೊಡುತ್ತದೆ ಎಂದರು.ಅತಿಥಿ ಅಭ್ಯಾಗತರಿಂದ ನಿವೃತ್ತ ಪ್ರಾಧ್ಯಾಪಕರಿಗೆ, ರಾಂಕ್ ವಿಜೇತರಿಗೆ, ಪಿ.ಹೆಚ್.ಡಿ ಮತ್ತು ವಿಶೇಷ ಸಾಧಕ ಅಧ್ಯಾಪಕರಿಗೆ, ವಿಶೇಷ ಸಾಧಕ ವಿದ್ಯಾರ್ಥಿಗಳಿಗೆ, ಎನ್.ಸಿ.ಸಿ /ಎನ್.ಎಸ್.ಎಸ್ / ಕ್ರೀಡಾ ವಿಭಾಗದ ರಾಷ್ಟ್ರಮಟ್ಟದ ಸಾಧಕರಿಗೆ ಸನ್ಮಾನ ಮಾಡಲಾಯಿತು.
ವೇದಿಕೆಯಲ್ಲಿ ಡಿ. ಹರ್ಷೇಂದ್ರ ಹೆಗ್ಡೆ, ಪ್ರಾಂಶುಪಾಲರಾದ ಡಾ.ಬಿ.ಎ. ಕುಮಾರ ಹೆಗ್ಡೆ, ಉಪಪ್ರಾಂಶುಪಾಲರಾದ ಶಶಿಶೇಖರ ಕಾಕತ್ಕರ್ ಉಪಸ್ಥಿತರಿದ್ದರು. ಸಹ ಪ್ರಾಧ್ಯಾಪಕ ಡಾ. ಶ್ರೀಧರ ಭಟ್ಟ್ ನಿರೂಪಿಸಿ, ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪ್ರಾಂಶುಪಾಲರಾದ ಡಾ.ಬಿ.ಎ. ಕುಮಾರ ಹೆಗ್ಡೆ ಸ್ವಾಗತಿಸಿ ವರದಿ ವಾಚನ ಮಾಡಿದರು. ಉಪಪ್ರಾಂಶುಪಾಲರಾದ ಶಶಿಶೇಖರ ಕಾಕತ್ಕರ್ ಧನ್ಯವಾದವಿತ್ತರು.