22.8 C
ಪುತ್ತೂರು, ಬೆಳ್ತಂಗಡಿ
April 4, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮೂಡಿಗೆರೆ ಪಟ್ಟಣದಲ್ಲಿ ಮಾದಕ ವಸ್ತು ಗಾಂಜಾ ಮಾರಾಟದಲ್ಲಿ ತೊಡಗಿದ್ದ ಬೆಳ್ತಂಗಡಿಯ ಇಬ್ಬರು ಯುವಕರ ಬಂಧನ

ಬೆಳ್ತಂಗಡಿ: ಮೂಡಿಗೆರೆ ಪಟ್ಟಣದ ಛತ್ರಮೈದಾನದಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಬೆಳ್ತಂಗಡಿಯ ಇಬ್ಬರನ್ನು ಮೂಡಿಗೆರೆ ಪೊಲೀಸರು ಬಂಧಿಸಿದ್ದ ಘಟನೆ ಮಾ.31 ರಂದು ನಡೆದಿದೆ.

ಮೂಡಿಗೆರೆ ಪಟ್ಟಣದ ಛತ್ರಮೈದಾನದಲ್ಲಿ ಬೆಳ್ತಂಗಡಿಯ ನಿವಾಸಿಗಳಾದ ಉಮ್ಮರ್ ಫಾರೂಕ್ ಬಿನ್ ಮೊಹಮ್ಮದ್ ಫಾರೂಕ್ ಹಾಗೂ ಅಬ್ದುಲ್ ಅಕ್ರಂ ಬಿನ್ ಉಮ್ಮರ್ ಇವರುಗಳು ಸಾರ್ವಜನಿಕರಿಗೆ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಮೂಡಿಗೆರೆ ಪೊಲೀಸರು ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರ ಬಳಿ  ಅಕ್ರಮವಾಗಿ ಹೊಂದಿದ್ದ 10,000/ ರೂ ಬೆಲೆಯ ಸುಮಾರು 650 ಗ್ರಾಂ ತೂಕದ ಒಣ ಗಾಂಜಾವನ್ನು  ಅಮಾನತ್ತುಪಡಿಸಿಕೊಂಡಿದ್ದಾರೆ.

ಆರೋಪಿತರ ವಿರುದ್ದ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಮೂಡಿಗೆರೆ ಪಿ.ಎಸ್.ಐ. ಗಳಾದ ಶ್ರೀನಾಥ್ ರೆಡ್ಡಿ, ಕಿಶೋರ್, ಎ.ಎಸ್.ಐ. ತಿಮ್ಮಪ್ಪ, ಸಿಬ್ಬಂದಿಗಳಾದ ವೈಭವ್, ದಯಾನಂದ್, ಇಮ್ತಿಯಾಜ್ ಪಾಷಾ ಪಾಲ್ಗೊಂಡಿರುತ್ತಾರೆ.

Related posts

ಬಸ್ ದರ ಏರಿಕೆ ಮಾಡಿರುವುದು ರಾಜ್ಯ ಸರಕಾರ ಜನರ ಬದುಕಿನ‌ ಮೇಲೆ ದಾಳಿ ಮಾಡಿದಂತಾಗಿದೆ : ಸಿಪಿಐಎಂ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್

Suddi Udaya

ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರವರು ಕಣಿಯೂರು ಗುತ್ತು ಮನೆಗೆ ಭೇಟಿ

Suddi Udaya

ನಾವೂರು ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿಯಿಂದ ಸುಲ್ಯೋಡಿ ಶಾಲೆಯಲ್ಲಿ ಶ್ರಮದಾನ

Suddi Udaya

ಗುರುವಾಯನಕೆರೆ ಎಕ್ಸೆಲ್ ಪ. ಪೂ. ಕಾಲೇಜಿನಲ್ಲಿ ವಿಶ್ವ ಪರಿಸರ ದಿನ

Suddi Udaya

ಬೆಳ್ತಂಗಡಿ: ಡಿಕೆಡಿಆರ್‌ಎಸ್ ಸಂಸ್ಥೆಯಲ್ಲಿ ಕ್ಲಸ್ಟರ್ ಮಟ್ಟದ ಸಾಂವಿಧಾನಿಕ ಹಕ್ಕುಗಳ ಬಗ್ಗೆ ಮಾಹಿತಿ ಕಾರ್ಯಾಗಾರ

Suddi Udaya

ಕನ್ಯಾಡಿ-I ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲಾ ಸಂಸತ್ ಚುನಾವಣೆ

Suddi Udaya
error: Content is protected !!