28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿಯಲ್ಲಿ ಅಕ್ರಮವಾಗಿ ಗೋ ಸಾಗಾಟ

ಬೆಳ್ತಂಗಡಿ: ಅಕ್ರಮವಾಗಿ ಗೋ ಸಾಗಾಟ ನಡೆಸುತ್ತಿದ್ದ ಪ್ರಕರಣವೊಂದನ್ನು ಬೆಳ್ತಂಗಡಿ ಪೊಲೀಸರು ಪತ್ತೆಹಚ್ಚಿದ್ದು ಮೂರು ಜಾನುವಾರುಗಳನ್ನು ರಕ್ಷಿಸಲಾಗಿದ್ದು ವಾಹನವನ್ನು ವಶಪಡಿಸಿಕೊಂಡು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಎ.2ರಂದು ನಗರದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಸ್ಕೂಟರ್ ಹಾಗೂ ಅದರ ಹಿಂದೆ ಹೋಗುತ್ತಿದ್ದ ಟಾಟಾ ಏಸ್ ವಾಹನವನ್ನು ಪೊಲೀಸರು ಪರಿಶೀಲನೆಗಾಗಿ ತಡೆದಾಗ ಎರಡೂ ವಾಹನಗಳನ್ನು ನಿಲ್ಕಿಸಿದ್ದು ಸ್ಕೂಟರ್ ಸವಾರ ಸ್ಥಳದಿಂದ ಓಡಿ ತಪ್ಪಿಸಿಕೊಂಡಿದ್ದಾನೆ. ಟಾಟಾ ಏಸ್ ವಾಹನವನ್ನು ಪರಿಶೀಲಿಸಲಾಗಿ ಅದರಲ್ಲಿ ಮೂರು ಜಾನುವಾರುಗಳನ್ನು ಯಾವುದೇ ಪರವಾನಿಗೆ ಇಲ್ಲದೆ ಸಾಗಾಟ ಮಾಡುತ್ತಿರುವುದು ಕಂಡು ಬಂದ ಹಿನಲ್ಲೆಯಲ್ಲಿ ಟಾಟಾ ಏಸ್ ಚಾಲಕ ಎಚ್.ಎಸ್ ಮಧು ಎಂಬಾತನನ್ನು ವಶಕ್ಕೆ ಪಡೆದ ಪೊಲೀಸರು ಸ್ಕೂಟರ್ ಹಾಗೂ ಟಾಟಾ ಏಸ್ ವಾಹನವನ್ನೂ ಹಾಗೂ ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ.

ತಪ್ಪಿಸಿಕೊಂಡ ಆರೋಪಿ ಕಳಿಯ ಗ್ರಾಮದ ನಿವಾಸಿ ಹಂಝ ಸುಣ್ಣಲಡ್ಡ ಹಾಗೂ ಟಾಟಾ ಏಸ್ ಚಾಲಕ ಮಧು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಟಾಟಾ ಏಸ್‌ ವಾಹನದ ಒಳಗಡೆ ಸುಮಾರು ರೂ 10,000/- ಬೆಲೆ ಬಾಳುವ ನಸು ಹಳದಿ ಬಣ್ಣದ ದನಗಳು-02 ಮತ್ತು ಸುಮಾರು ರೂ 5,000/- ಬೆಲೆ ಬಾಳುವ ಕಪ್ಪು ಬಣ್ಣದ ದನ – 01 ಇದ್ದು, ಇವುಗಳ ಒಟ್ಟು ಅಂದಾಜು ಮೌಲ್ಯ ರೂ 15,000/- ಆಗಬಹುದು. ಸ್ವಾಧೀನಪಡಿಸಿದ ವಾಹನದ ಅಂದಾಜು ಬೆಲೆ ರೂ 1,50,000/- ಮತ್ತು ಜಾನುವಾರು ಸಾಗಾಟದ ಸಮಯ ಎ ಸ್ಕಾರ್ಟ್ ಮಾಡಿದ ಟಿವಿಎಸ್ ಜುಪಿಟರ್ ಸ್ಕೂಟರಿನ ಅಂದಾಜು ಮೌಲ್ಯ ರೂ 50,000/- ಆಗಬಹುದು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣಾ ಅ.ಕ್ರ ನಂ 47 /2024 ಕಲಂ: 4, 5, 7, 12 ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ ಮತ್ತು ಕಲಂ: 11 ಡಿ ಪ್ರಾಣಿ ಹಿಂಸೆ ತಡೆ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ

Related posts

ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್. ಶ್ರೀನಿವಾಸ ರವರಿಗೆ ಸನ್ಮಾನ

Suddi Udaya

ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದಲ್ಲಿ ಸ್ವಾತಂತ್ರ್ಯೋತ್ಸವ

Suddi Udaya

ಬಂದಾರು ಶಾಲಾ ವಿದ್ಯಾರ್ಥಿಗಳಿಗೆ ಬೆಸ್ಟ್ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಉಚಿತ ನೋಟ್ ಪುಸ್ತಕ ವಿತರಣೆ

Suddi Udaya

ಸುದ್ದಿ ಉದಯ ವಾರಪತ್ರಿಕೆಯ ವತಿಯಿಂದ ಮುಳಿಯ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಹಮ್ಮಿಕೊಂಡ ‘ರಾಧೆ-ಕೃಷ್ಣ’ ಪೋಟೋ ಸ್ಪರ್ಧಾ ವಿಜೇತ ಪುಟಾಣಿ ಮಕ್ಕಳಿಗೆ ಬಹುಮಾನ ವಿತರಣೆ

Suddi Udaya

ಸಿ.ಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

Suddi Udaya

ಮಹಮ್ಮಾಯಿ ಕಟ್ಟೆ ಫ್ರೆಂಡ್ಸ್ ಸೋಣoದೂರು ಪಣಕಜೆ ಇದರ ಆಶ್ರಯದಲ್ಲಿ ಪುರುಷರ ಅಂತರ್ ಜಿಲ್ಲಾ ಮಟ್ಟದ ಮುಕ್ತ ಕಬ್ಬಡಿ ಪಂದ್ಯಾಟ

Suddi Udaya
error: Content is protected !!