ಎ.10-17,ಕನ್ಯಾಡಿ ಶ್ರೀ ರಾಮ ಕ್ಷೇತ್ರದಲ್ಲಿ 64ನೇ ವರ್ಷದ ಶ್ರೀ ರಾಮ ನಾಮ ಸಪ್ತಾಹ ಹಾಗೂ‌ ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು ಮಹಾ ಬ್ರಹ್ಮರಥೋತ್ಸವ

Suddi Udaya

ಕನ್ಯಾಡಿ : ಭಗವಂತನನ್ನು ಬಿಟ್ಟು ನಮ್ಮ ಬದುಕಿಲ್ಲ.ಜನ ಕಲ್ಯಾಣ ಮತ್ತು ಸಾತ್ವಿಕ ಭಾವನೆಯಿಂದ ನಾವುಗಳು ಬದುಕುವವರು. ನಿರಂತರವಾದ ಸುಖ,ಶಾಂತಿ,ನೆಮ್ಮದಿ ಪಡೆಯಬೇಕಾದರೆ ಜೀವನದಲ್ಲಿ ಧಾರ್ಮಿಕ ಮೌಲ್ಯವನ್ನು ಹೊಂದಿರಬೇಕು.ಶ್ರೀ ರಾಮ ಭಗವಾನ್ ನಿತ್ಯಾನಂದ ಮಂದಿರದಲ್ಲಿ ಜಗದ್ಗುರು ಪೂಜ್ಯ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯಸ್ಮರಣೆಯೊಂದಿಗೆ 64ನೇ ವರ್ಷದ ಶ್ರೀ ರಾಮ ನಾಮ ಸಪ್ತಾಹ ಹಾಗೂ ದಕ್ಷಿಣದ ಅಯೋಧ್ಯೆ ಎಂದೆನಿಸಿದ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು ಮಹಾ ಬ್ರಹ್ಮರಥೋತ್ಸವವು ಎ.10 ರಿಂದ 17ರ ತನಕ ನಡೆಯಲಿದೆ ಎಂದು ಶ್ರೀರಾಮ ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ನುಡಿದರು.

ಅವರು ಎ.4 ರಂದು ಶ್ರೀರಾಮ ಕ್ಷೇತ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರದಲ್ಲಿ ನಡೆಯುವ ಜಾತ್ರಾ ಮಹೋತ್ಸವದ ಬಗ್ಗೆ ವಿವರಿಸಿದರು.

ಶ್ರೀರಾಮ ಕ್ಷೇತ್ರದ ಶಾಖಾ ಮಠವನ್ನು ಅಯೋಧ್ಯೆಯಲ್ಲಿ ನಿರ್ಮಿಸಲು ಯೋಜನೆ ಹಾಕಿಕೊಂಡಿದ್ದು ಆದಷ್ಟು ಬೇಗ ಕೆಲಸ ಪ್ರಾರಂಭಿಸಿ ಲೋಕಾರ್ಪಣೆಗೊಳಿಸಲಿದ್ದೇವೆ ಎಂದರು

ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ನಿರಂತರ 7 ದಿವಸಗಳ ಕಾಲ ಆಹೋರಾತ್ರಿ ಭಜನಾ ಕಾರ್ಯಕ್ರಮ ನಡೆಯಲಿದೆ. ವಿಶೇಷವಾಗಿ ಎ.10 ರಂದು ಬೆಳಿಗ್ಗೆ 7ರಿಂದ ವಾರ್ಷಿಕ ಪ್ರತಿಷ್ಠಾ ಮಹೋತ್ಸವದ ವೈದಿಕ ಕಾರ್ಯಕ್ರಮ ನಡೆಯಲಿದೆ. 9-30ಕ್ಕೆ ಶ್ರೀರಾಮನಾಮ ಸಪ್ತಾಹದ ಅಖಂಡ ನಂದಾದೀಪವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾನೆಗೊಳ್ಳಲಿದೆ.ರಾತ್ರಿ 7ರಿಂದ ಬಲಿ ಉತ್ಸವ, ಮಹಾಪೂಜೆ ನಡೆಯಲಿದೆ.ಎ.11 ರಂದು ಬೆಳಿಗ್ಗೆ ನಾರಿಕೇಳ ಗಣಯಾಗ, ಗುರುಗಳಿಗೆ ವಿಶೇಷ ಅಲಂಕಾರ ಪೂಜೆ ಮಧ್ಯಾಹ್ನ ಸದ್ಗುರು ಶ್ರೀ ನಿತ್ಯಾನಂದ ಸ್ವಾಮಿ, ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಶಿರ್ಡಿ ಸಾಯಿ ಬಾಬಾ ಗುರುಗಳಿಗೆ ಪೂಜೆ, ಮಹಾಪೂಜೆ ಅನ್ನಪೂರ್ಣೇಶ್ವರಿ ಮಂದಿರದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ದೇವಿಗೆ ವಿಶೇಷ ಅಲಂಕಾರ ಪೂಜೆ, ಅನ್ನಸಂತರ್ಪಣೆ ಸಾಯಂಕಾಲ 7ರಿಂದ ಶ್ರೀ ಗುರುದೇವರ ಉತ್ಸವಮೂರ್ತಿಗಳ ಬಲಿ ಉತ್ಸವ, ಉತ್ಸವ ಪೂಜೆ ನಡೆಯಲಿದೆ ಎಂದರು.

ಎ.12ರಂದು ಬೆಳಿಗ್ಗೆ ನವಗ್ರಹ ಶಾಂತಿ ಹೋಮ, ನವಗ್ರಹಗಳಿಗೆ ವಿಶೇಷ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ, ಸಾಯಂಕಾಲ 7ರಿಂದ ಶ್ರೀ ರಾಮ ದೇವರ ರಜತ ಪಾಲಕಿ ಉತ್ಸವ ನಡೆಯಲಿದೆ.ಎ.13 ರಂದು ಬೆಳಿಗ್ಗೆ ಮಹಾ ಮೃತ್ಯುಂಜಯ ಹೋಮ, ಮಧ್ಯಾಹ್ನ ಅನ್ನಪೂರ್ಣೇಶ್ವರಿ ದೇವಿಗೆ ಮಹಾಪೂಜೆ ನಾಗದೇವರಿಗೆ ಪಂಚಾಮೃತ ಅಭಿಷೇಕ, ಅನ್ನಸಂತರ್ಪಣೆ ಸಾಯಂಕಾಲ 7ರಿಂದ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಬಲಿ ಉತ್ಸವ ಮತ್ತು “ಪುಷ್ಪ ರಥೋತ್ಸವ” ನಡೆಯಲಿದೆ.ಎ.14ರಂದು ಬೆಳಿಗ್ಗೆ ನವದುರ್ಗಾ ಹೋಮ, ನವದುರ್ಗೆಯರಿಗೆ ವಿಶೇಷ ಅಲಂಕಾರ ಪೂಜೆ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ. ಸಾಯಂಕಾಲ 7 ರಿಂದ ಶ್ರೀ ದುರ್ಗಾಪರಮೇಶ್ವರಿ ದೇವಿ ಮೂರ್ತಿ ಬಲಿ ಉತ್ಸವ, ಪೂಜೆ“ಚಂದ್ರಮಂಡಲ ರಥೋತ್ಸವ”ನಡೆಯಲಿದೆ ಎಂದರು.

ಎ.15ರಂದು ಬೆಳಿಗ್ಗೆ ಸಹಸ್ರನಾಮ ಯಾಗ, ಶ್ರೀ ಗೋಪಾಲಕೃಷ್ಣ ದೇವರಿಗೆ ವಿಶೇಷ ಮಹಾಪೂಜೆ, ಅನ್ನಸಂತರ್ಪಣೆ ಸಾಯಂಕಾಲ 7ರಿಂದ ಬಲಿಮೂರ್ತಿ ಬಲಿ ಉತ್ಸವ “ಬೆಳ್ಳಿ ರಥೋತ್ಸವ” ನಡೆಯುವುದು.ಎ.16ರಂದು ಬೆಳಿಗ್ಗೆ ದತ್ತಯಾಗ, ಮಧ್ಯಾಹ್ನ ಆಂಜನೇಯ ದೇವರಿಗೆ ಮತ್ತು ದತ್ತಾತ್ರೇಯ ಗುರುಗಳಿಗೆ ವಿಶೇಷ ಮಹಾಪೂಜೆ, ಅನ್ನಸಂತರ್ಪಣೆ, ಸಾಯಂಕಾಲ 5 ಗಂಟೆಗೆ ಗೋಧೂಳಿ ಲಗ್ನದಲ್ಲಿ ಅನುಜ್ಞೆ, ಯಾಗಶಾಲಾ ಪ್ರವೇಶ, ಭಗವದ್ ವಾಸುದೇವ ಪುಣ್ಯಾಹ, ಸಂಕಲ್ಪ, ಸಪ್ತದಳ ಕಲಶಾರಾಧನೆ, ಪ್ರಧಾನ ಹೋಮಗಳು, ಸಾಯಂಕಾಲ 7ರಿಂದ ಶ್ರೀ ದತ್ತಾತ್ರೇಯ ಮೂರ್ತಿ ಮತ್ತು ಆಂಜನೇಯ ದೇವರ ಮೂರ್ತಿ ಬಲಿ ಉತ್ಸವ ಮತ್ತು “ಶ್ರೀ ಹನುಮಾನ್ ರಥೋತ್ಸವ”, ಕಟ್ಟೆ ಪೂಜೆ, ಕೆರೆ ದೀಪೋತ್ಸವ ಉತ್ಸವ, ಉಪಚಾರ ಸೇವೆ, ನೈವೇದ್ಯ, ಮಂಗಳಾರತಿ, ತೀರ್ಥ-ಪ್ರಸಾದ ನಡೆಯಲಿದೆ.ಎ.17ರಂದು ಬೆಳಿಗ್ಗೆ ಸುಪ್ರಭಾತ, ವೇದಘೋಷ, ವಿಷ್ಣು ಸಹಸ್ರನಾಮ ಹೋಮ, ಶ್ರೀ ರಾಮ ತಾರಕ ಮಂತ್ರ ಯಜ್ಞ ಮಂಗಳಂ, ವಾಗ್ಗೇವಿ ಯಜ್ಞ ಪ್ರಾಯಶ್ಚಿತ್ತ ಹೋಮ, ಶಾಂತಿ ಹೋಮ, 10-30ಕ್ಕೆ ಮಹಾಸಂಕಲ್ಪ, ಪೂರ್ಣಾಹುತಿ, ಕ್ಷೇತ್ರಾದಿ ದೇವರಿಗೆ ವಿಶೇಷ ಅಲಂಕಾರ ಪೂಜೆ ಮೂರ್ತಿ ಬಲಿ, ಪಾಲಕಿ ಬಲಿ, ಹಗಲು ಉತ್ಸವ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 7ರಿಂದ
ಶ್ರೀ ಬಲಿ, ಭೂತಬಲಿ, ಶ್ರೀ ದೇವರ ಪಾಲಕಿ ಬಲಿ ಉತ್ಸವ, “ಮಹಾ ಬ್ರಹ್ಮರಥೋತ್ಸವ”, ರಥಾರೋಹಣ ಪೂಜೆ ಮಹೋತ್ಸವ, ಅವಭ್ರತ ಓಕುಳಿ ಮತ್ತು ಕ್ಷೇತ್ರದ ರಕೇಶ್ವರಿ ಮತ್ತು ಗುಳಿಗ ದೈವಗಳಿಗೆ “ನೇಮೋತ್ಸವ” ನಡೆಯಲಿದೆ ಎಂದರು.

‌ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ‌ ಅಧ್ಯಕ್ಷ ಪೀತಾಂಬರ ಹೇರಾಜೆ, ಶ್ರೀರಾಮ ಕ್ಷೇತ್ರದ ಸೇವಾ ಸಮಿತಿ ಸಂಚಾಲಕ ಜಯಂತ್ ಕೋಟ್ಯಾನ್, ಧರ್ಮಸ್ಥಳ ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ್ ರಾವ್,ರಾಜ್ಯ ಯಕ್ಷಗಾನ ಅಕಾಡೆಮಿ ಸದಸ್ಯ ರಾಘವ ಹೆಚ್ ಗೇರುಕಟ್ಟೆ,ಉದ್ಯಮಿ ರವಿ ಆರ್ಲ,ಧರ್ಮಸ್ಥಳ ಸಿಎ ಬ್ಯಾಂಕ್ ಅಧ್ಯಕ್ಷ ಪ್ರೀತಮ್ ಡಿ,ಪ್ರಮುಖರಾದ ಪ್ರಶಾಂತ್ ಎಂ ಪಾರೆಂಕಿ,ಕೃಷ್ಣಪ್ಪ ಗುಡಿಗಾರ್,ಅಣ್ಣಿ ಪೂಜಾರಿ,ಸುದರ್ಶನ್ ಕನ್ಯಾಡಿ,ಭಾಸ್ಕರ್ ಧರ್ಮಸ್ಥಳ, ಅನಿಲ್ ಗೌಡ,ಪ್ರವೀಣ್ ಕಲ್ಮಂಜ,ಸುಂದರ ಗೌಡ,ಪುರುಷೋತ್ತಮ ಡಿ ಉಪಸ್ಥಿತರಿದ್ದರು.ಕ್ಷೇತ್ರದ ತುಕರಾಮ್ ಸ್ವಾಗತಿಸಿದರು.

Leave a Comment

error: Content is protected !!