30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಎ.10-17: ಶ್ರೀರಾಮ ಭಗವಾನ್ ನಿತ್ಯಾನಂದ ಮಂದಿರದಲ್ಲಿ 64ನೇ ವರ್ಷದ ಶ್ರೀರಾಮ ನಾಮ ಸಪ್ತಾಹ: ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು ಮಹಾ ಬ್ರಹ್ಮರಥೋತ್ಸವ

ಕನ್ಯಾಡಿ: ಶ್ರೀ ರಾಮ ಭಗವಾನ್ ನಿತ್ಯಾನಂದ ಮಂದಿರದಲ್ಲಿ ಜಗದ್ಗುರು ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯಸ್ಮರಣೆಯೊಂದಿಗೆ, ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ೬೪ನೇ ವರ್ಷದ ಶ್ರೀ ರಾಮ ನಾಮ ಸಪ್ತಾಹ ಹಾಗೂ ದಕ್ಷಿಣದ ಅಯೋಧ್ಯೆ ಎಂದೆನಿಸಿದ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು ಮಹಾ ಬ್ರಹ್ಮರಥೋತ್ಸವವು ಎ.10 ರಿಂದ 17ರ ತನಕ ನಡೆಯಲಿದೆ.


ಎ.10 ರಂದು ಬೆಳಿಗ್ಗೆ 7ರಿಂದ ವಾರ್ಷಿಕ ಪ್ರತಿಷ್ಠಾ ಮಹೋತ್ಸವದ ವೈದಿಕ ಕಾರ್ಯಕ್ರಮ ನಡೆಯಲಿದೆ. ೯-೩೦ಕ್ಕೆ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾ ನಾದ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಶ್ರೀರಾಮನಾಮ ಸಪ್ತಾಹದ ಅಖಂಡ ನಂದಾದೀಪವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾನೆಗೊಳ್ಳಲಿದೆ.ರಾತ್ರಿ ೭ರಿಂದ ಬಲಿ ಉತ್ಸವ, ಮಹಾಪೂಜೆ ನಡೆಯಲಿದೆ.


ಎ.11 ರಂದು ಬೆಳಿಗ್ಗೆ ನಾರಿಕೇಳ ಗಣಯಾಗ, ಗುರುಗಳಿಗೆ ವಿಶೇಷ ಅಲಂಕಾರ ಪೂಜೆ ಮಧ್ಯಾಹ್ನ ಸದ್ಗುರು ಶ್ರೀ ನಿತ್ಯಾನಂದ ಸ್ವಾಮಿ, ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಶಿರ್ಡಿ ಸಾಯಿ ಬಾಬಾ ಗುರುಗಳಿಗೆ ಪೂಜೆ, ಮಹಾಪೂಜೆ ಅನ್ನಪೂರ್ಣೇಶ್ವರಿ ಮಂದಿರದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ದೇವಿಗೆ ವಿಶೇಷ ಅಲಂಕಾರ ಪೂಜೆ, ಅನ್ನಸಂತರ್ಪಣೆ ಸಾಯಂಕಾಲ 7ರಿಂದ ಶ್ರೀ ಗುರುದೇವರ ಉತ್ಸವಮೂರ್ತಿಗಳ ಬಲಿ ಉತ್ಸವ, ಉತ್ಸವ ಪೂಜೆ ನಡೆಯಲಿದೆ.


ಎ.12ರಂದು ಬೆಳಿಗ್ಗೆ ನವಗ್ರಹ ಶಾಂತಿ ಹೋಮ, ನವಗ್ರಹಗಳಿಗೆ ವಿಶೇಷ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ, ಸಾಯಂಕಾಲ ೭ರಿಂದ ಶ್ರೀ ರಾಮ ದೇವರ ರಜತ ಪಾಲಕಿ ಉತ್ಸವ ನಡೆಯಲಿದೆ.
ಎ.13 ರಂದು ಬೆಳಿಗ್ಗೆ ಮಹಾ ಮೃತ್ಯುಂಜಯ ಹೋಮ, ಮಧ್ಯಾಹ್ನ ಅನ್ನಪೂರ್ಣೇಶ್ವರಿ ದೇವಿಗೆ ಮಹಾಪೂಜೆ ನಾಗದೇವರಿಗೆ ಪಂಚಾಮೃತ ಅಭಿಷೇಕ, ಅನ್ನಸಂತರ್ಪಣೆ ಸಾಯಂಕಾಲ 7ರಿಂದ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಬಲಿ ಉತ್ಸವ ಮತ್ತು “ಪುಷ್ಪ ರಥೋತ್ಸವ” ನಡೆಯಲಿದೆ.
ಎ.14ರಂದು ಬೆಳಿಗ್ಗೆ ನವದುರ್ಗಾ ಹೋಮ, ನವದುರ್ಗೆಯರಿಗೆ ವಿಶೇಷ ಅಲಂಕಾರ ಪೂಜೆ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ. ಸಾಯಂಕಾಲ 7ರಿಂದ ಶ್ರೀ ದುರ್ಗಾಪರಮೇಶ್ವರಿ ದೇವಿ ಮೂರ್ತಿ ಬಲಿ ಉತ್ಸವ, ಪೂಜೆ ಚಂದ್ರಮಂಡಲ ರಥೋತ್ಸವ ನಡೆಯಲಿದೆ.
ಎ.15ರಂದು ಬೆಳಿಗ್ಗೆ ಸಹಸ್ರನಾಮ ಯಾಗ, ಶ್ರೀ ಗೋಪಾಲಕೃಷ್ಣ ದೇವರಿಗೆ ವಿಶೇಷ ಮಹಾಪೂಜೆ, ಅನ್ನಸಂತರ್ಪಣೆ ಸಾಯಂಕಾಲ 7ರಿಂದ ಬಲಿಮೂರ್ತಿ ಬಲಿ ಉತ್ಸವ ಬೆಳ್ಳಿ ರಥೋತ್ಸವ ನಡೆಯುವುದು.
ಎ.16ರಂದು ಬೆಳಿಗ್ಗೆ ದತ್ತಯಾಗ, ಮಧ್ಯಾಹ್ನ ಆಂಜನೇಯ ದೇವರಿಗೆ ಮತ್ತು ದತ್ತಾತ್ರೇಯ ಗುರುಗಳಿಗೆ ವಿಶೇಷ ಮಹಾಪೂಜೆ, ಅನ್ನಸಂತರ್ಪಣೆ, ಸಾಯಂಕಾಲ 5 ಗಂಟೆಗೆ ಗೋಧೂಳಿ ಲಗ್ನದಲ್ಲಿ ಅನುಜ್ಞೆ, ಯಾಗಶಾಲಾ ಪ್ರವೇಶ, ಭಗವದ್ ವಾಸುದೇವ ಪುಣ್ಯಾಹ, ಸಂಕಲ್ಪ, ಸಪ್ತದಳ ಕಲಶಾರಾಧನೆ, ಪ್ರಧಾನ ಹೋಮಗಳು, ಸಾಯಂಕಾಲ ೭ರಿಂದ ಶ್ರೀ ದತ್ತಾತ್ರೇಯ ಮೂರ್ತಿ ಮತ್ತು ಆಂಜನೇಯ ದೇವರ ಮೂರ್ತಿ ಬಲಿ ಉತ್ಸವ ಮತ್ತು ಶ್ರೀ ಹನುಮಾನ್ ರಥೋತ್ಸವ”, ಕಟ್ಟೆ ಪೂಜೆ, ಕೆರೆ ದೀಪೋತ್ಸವ ಉತ್ಸವ, ಉಪಚಾರ ಸೇವೆ, ನೈವೇದ್ಯ, ಮಂಗಳಾರತಿ, ತೀರ್ಥ-ಪ್ರಸಾದ ನಡೆಯಲಿದೆ.
ಎ.17ರಂದು ಬೆಳಿಗ್ಗೆ ಸುಪ್ರಭಾತ, ವೇದಘೋಷ, ವಿಷ್ಣು ಸಹಸ್ರನಾಮ ಹೋಮ, ಶ್ರೀ ರಾಮ ತಾರಕ ಮಂತ್ರ ಯಜ್ಞ ಮಂಗಳಂ, ವಾಗ್ಗೇವಿ ಯಜ್ಞ ಪ್ರಾಯಶ್ಚಿತ್ತ ಹೋಮ, ಶಾಂತಿ ಹೋಮ, 10.30ಕ್ಕೆ ಮಹಾಸಂಕಲ್ಪ, ಪೂರ್ಣಾಹುತಿ, ಕ್ಷೇತ್ರಾದಿ ದೇವರಿಗೆ ವಿಶೇಷ ಅಲಂಕಾರ ಪೂಜೆ ಮೂರ್ತಿ ಬಲಿ, ಪಾಲಕಿ ಬಲಿ, ಹಗಲು ಉತ್ಸವ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 7ರಿಂದ
ಶ್ರೀ ಬಲಿ, ಭೂತಬಲಿ, ಶ್ರೀ ದೇವರ ಪಾಲಕಿ ಬಲಿ ಉತ್ಸವ, ಮಹಾ ಬ್ರಹ್ಮರಥೋತ್ಸವ, ರಥಾರೋಹಣ ಪೂಜೆ ಮಹೋತ್ಸವ, ಅವಭ್ರತ ಓಕುಳಿ ಮತ್ತು ಕ್ಷೇತ್ರದ ರಕೇಶ್ವರಿ ಮತ್ತು ಗುಳಿಗ ದೈವಗಳಿಗೆ ನೇಮೋತ್ಸವ ನಡೆಯಲಿದೆ.

Related posts

ಕಲ್ಮಂಜ ಸರಕಾರಿ ಪ್ರೌಢಶಾಲೆಯಲ್ಲಿ ಹದಿಹರೆಯದ ಆರೋಗ್ಯ ಮತ್ತು ಶುಚಿತ್ವ ಕಾರ್ಯಕ್ರಮ

Suddi Udaya

ನಾಲ್ಕೂರು: ಬಿಜೆಪಿ ಬೂತ್ ಸಮಿತಿಯ ನೂತನ ಅಧ್ಯಕ್ಷರಾಗಿ ಸುರೇಶ್ ಪೂಜಾರಿ ಜೈಮಾತಾ ಕಾರ್ಯದರ್ಶಿಯಾಗಿ‌ ಸಂದೇಶ್ ಶೆಟ್ಟಿ ರಾಮನಗರ ಆಯ್ಕೆ

Suddi Udaya

ಶ್ರೀ.ಧ.ಮಂ. ಕಾಲೇಜಿನಲ್ಲಿ ‘ತೆರಿಗೆಯ ಮೂಲಭೂತ ಅಂಶಗಳು’ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ವಕೀಲರ ಸಂಘದ ನೇತೃತ್ವದಲ್ಲಿ – ವಸಂತ ಮರಕಡ ಅಧ್ಯಕ್ಷತೆಯ 2023-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ

Suddi Udaya

ಮತದಾನ ಜಾಗೃತಿಗಾಗಿ ಸೆಲ್ಪಿ ಪಾಯಿಂಟ್’ನಾನು ಮತದಾನ ಮಾಡುವೆ ನೀವು ಮಾಡಿ’ ಸಂದೇಶ ಸಾರಿದ ತಾ.ಪಂ.‌ಕಾಯ೯ನಿವಾ೯ಹಣಾಧಿಕಾರಿ ಹಾಗೂ ಸಿಬ್ಬಂದಿಗಳು

Suddi Udaya

ಸವಣಾಲು: ಕೋಳಿ ಅಂಕಕ್ಕೆ ಪೊಲೀಸರ ದಾಳಿ: ಪ್ರಕರಣ ದಾಖಲು

Suddi Udaya
error: Content is protected !!