25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿ

ನಿರ್ಗತಿಕ ವಯೋ ವೃದ್ದನಿಗೆ ಶ್ರೀಗುರು ಚೈತನ್ಯ ಸೇವಾಶ್ರಮದಲ್ಲಿ ಆಶ್ರಯ

ವೇಣೂರು: ಕಳೆದ 15 ದಿನಗಳಿಂದ ವೇಣೂರು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾನಸಿಕ ಸ್ಥಿಮಿತವಿಲ್ಲದ ವಯೋವೃದ್ಧ ಅಲೆಮಾರಿಯಾಗಿ ತಿರುಗಾಡುತಿದ್ದುದನ್ನು ಕಂಡ ಸ್ಥಳೀಯರು ವೇಣೂರು ಪೋಲೀಸ್ ಠಾಣೆಗೆ ತಿಳಿಸಿ, ಪುನರ್ವಸತಿ ಕಲ್ಪಿಸಿದ‌ ಮಾನವೀಯತೆಯ ಪ್ರಸಂಗ ಬೆಳಕಿಗೆ ಬಂದಿದೆ.
ಈ ಅಸ್ವಸ್ಥ ಉಡುಪಿಯ ಕಾಪುವಿನ ಪರಿಸರದ ರಮೇಶ್ ಪೂಜಾರಿ ಎಂದು ಗುರುತಿಸಲಾಗಿದ್ದು.ಬಂಧು ಬಳಗದ ಸಂಬಂಧ ಕಳಚಿ , ಅನಾವಶ್ಯಕ ತೊಂದರೆ ಕೊಡುತ್ತಿದ್ದು ಕ್ರಮೇಣ ಮಾನಸಿಕ ಸ್ಥಿಮಿತ ಕಳೆದು ಊರೂರು ಅಲೆಯುತಿದ್ದು ಕಾಪು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಸದ್ಯ ಈ ವ್ಯಕ್ತಿ ವೇಣೂರು ಸಮೀಪದ ಗುಂಡೂರಿ‌ ಗ್ರಾಮದ ಅಂಗಡಿ ಮುಂಗಟ್ಟುಗಳ ಮಧ್ಯೆ ಅನಾಥವಾಗಿ ತಿರುಗಾಡುತ್ತಿದ್ದ ನ್ನು, ಕಂಡ ಸ್ಥಳೀಯರಾದ ಸುಕೇಶ್ ಪೂಜಾರಿ, ಪ್ರವೀಣ್ ಆಚಾರ್ಯ, ಇವರು ವೇಣೂರು ಪೋಲೀಸ್ ಠಾಣೆಗೆ ಸಂಪರ್ಕಿಸಿ ಸಹಾಯಕ್ಕಾಗಿ ವಿನಂತಿಸಿದಂತೆಯೇ, ಇದಕ್ಕೆ ಗುಂಡೂರಿಯ ಶ್ರೀಗುರು ಚೈತನ್ಯವನ್ನು ಸೇವಾಶ್ರಮದ ಹೊನ್ನಯ್ಯ ಕಾಟಿಪಳ್ಳರವರು ಪೋಲೀಸರ ಜತೆ ಸಹಕರಿಸಿ ಈ ವ್ಯಕ್ತಿಯ ಬಂಧುಗಳ ಪತ್ತೆ ಹಚ್ಚಿ ಪೋಲೀಸ್ ಠಾಣೆಗೆ ಕರೆಸಿ ಅವರ ಸಮಸ್ಯೆ ಆಲಿಸಿ ಬಂಧುಗಳ ಒಪ್ಪಿಗೆಯಂತೆಯೇ ಸೇವಾಶ್ರಮದಲ್ಲಿ ಎ.3ರಂದು ಪುನರ್ವಸತಿ ಕಲ್ಪಿಸಲಾಯಿತು .
ಪೂಲೀಸರ,ಸ್ಥಳೀಯರ, ಶ್ರೀಗುರು ಚೈತನ್ಯ ಸೇವಾಶ್ರಮದ ಈ ಮಾನವೀಯತೆಯ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Related posts

ಕಳೆಂಜ: ಕೃಷಿಕ ಪೆರ್ನು ಗೌಡ ನಿಧನ

Suddi Udaya

ಧರ್ಮಸ್ಥಳ ಶ್ರೀ ಮಂ.ಸ್ವಾ.ಅ. ಹಿ.ಪ್ರಾ. ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಪುದುವೆಟ್ಟು ಓಂ ಶಕ್ತಿ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ಉಜಿರೆ ಬೂತ್ ಸಂಖ್ಯೆ 98 ರ ಮತಗಟ್ಟೆಗೆ ಯುವ ನಾಯಕ ರಂಜನ್ ಜಿ ಗೌಡ ಹಾಗೂ ಅಭಿನಂದನ್ ಹರೀಶ್ ಕುಮಾರ್ ‍ಭೇಟಿ

Suddi Udaya

ಬೆಳ್ತಂಗಡಿ: ಕೋಟು೯ ರಸ್ತೆ ಬಳಿ ಮರ ಬಿದ್ದು ಎರಡು ವಿದ್ಯುತ್ ಕಂಬಗಳಿಗೆ ಹಾನಿ

Suddi Udaya

ಸರಕಾರಿ ಬಸ್ಸಿನಲ್ಲೇ ಹೃದಯಾಘಾತವಾಗಿ ಲಾಯಿಲದ ಇಲೆಕ್ಟ್ರೀಷಿಯನ್ ತಾಜ್ ಬಾವುಂಞಿ ನಿಧನ

Suddi Udaya
error: Content is protected !!