ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವವು ಎ.13ರಿಂದ ಎ.22 ರವರೆಗೆ ನಡೆಯಲಿದ್ದು ಎ.25ರಂದು ಶ್ರೀ ಭದ್ರಕಾಳಿ ದೇವಿಯ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ.
ಎ.13 ರಂದು ತೋರಣ ಮೂಹೂರ್ತ, ಏಕಾದಶ ರುದ್ರಾಭಿಷೇಕ, ನವಕ ಪ್ರಧಾನ, ಕಂಕಣಬಂಧ, ಬೆಳಿಗ್ಗೆ 11.30ಕ್ಕೆ ಧ್ವಜಾರೋಹಣ ನಡೆಯಲಿದೆ.
ಎ.14 ದೀಪದ ಬಲಿ, ಏಕಾದಶ ರುದ್ರಾಭಿಷೇಕ ಸಂಜೆ ಗಂಟೆ 7.00ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಾದ ನೃತ್ಯಾರ್ಪಣಂ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
ಎ.15 ಬೆಳಿಗ್ಗೆ 9.00 ರಿಂದ ಶತರುದ್ರಾಭಿಷೇಕ, ಎ.16 ಬೆಳಿಗ್ಗೆ ಗಣಪತಿ ದೇವರಿಗೆ 12 ತೆಂಗಿನಕಾಯಿ ಗಣಯಾಗ, ಅಪರಾಹ್ನ ಗಂಟೆ 3.00 ರಿಂದ ಹಸಿರುವಾಣಿ ಹೊರೆಕಾಣಿಕೆ, ರಾತ್ರಿ 7.00ರಿಂದ ತಾಳಮದ್ದಳೆ ‘ಮೀನಾಕ್ಷಿ ಕಲ್ಯಾಣ’ ನಡೆಯಲಿದೆ.
ಎ.17 ರಂದು ಬೆಳಿಗ್ಗೆ ಶ್ರೀ ಜನಾರ್ಧನ ದೇವರಿಗೆ ವಿಷ್ಣು ಸಹಸ್ರ ನಾಮಾರ್ಚನೆ, ಸಂಜೆ ದೀಪಾರಾಧನೆ, ರಾತ್ರಿ ರಕ್ತೇಶ್ವರಿ ದೈವದ ನೇಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಯಕ್ಷಗಾನ ತಾಳಮದ್ದಳೆ ಶ್ರೀ ರಾಮ ಕಾರುಣ್ಯ ನಡೆಯಲಿದೆ.
ಎ.18 ಬೆಳಿಗ್ಗೆ ನಾಗದೇವರಿಗೆ ಆಶ್ಲೇಷ ಬಲಿ, ಪವಮಾನ ಅಭಿಷೇಕ, ಸಂಜೆ ವೇಣೂರು ತುಳುನಾಡ ಕಲಾವಿದರಿಂದ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.
ಎ.19 ರಂದು ಬೆಳಿಗ್ಗೆ ಶ್ರೀ ಭದ್ರಕಾಳಿ ದೇವಿಗೆ ಸಪ್ತಶತಿ ಪಾರಾಯಣ, ಬೆಳಿಗ್ಗೆ ಗಂಟೆ 9.00 ರಿಂದ 12ರತನಕ ವಿವಿಧ ಭಜನಾ ತಮಡಗಳಿಂದ ಭಜನೋತ್ಸವ ಕಾರ್ಯಕ್ರಮ, ರಾಥ್ರಿ ದರ್ಶನ ಬಲಿ, ಕಲ್ಕುಡ-ಕಲ್ಲುರ್ಟಿ ದೈವಗಳ ನೇಮೋತ್ಸವ ಹಾಗೂ ರಾತ್ರಿ 9.30 ರಿಂದ ಪ್ರಸಿದ್ಧ ಕಲಾವಿದರಿಮದ ಯಕ್ಷಗಾನ ಗಾನ ವೈಭವ, ಶಿವಾಂಜಲಿ ಡ್ಯಾನ್ಸ್ ಇನ್ ಸ್ಟಿಟ್ಯೂಟ್ ವೇಣೂರು ಇವರಿಂದ ಹಾಸ್ಯ, ನಾಟ್ಯ, ವೈಭವ ನಡೆಯಲಿದೆ.
ಎ.20 ರಂದು ಬೆಳಿಗ್ಗೆ 9.00 ರಿಂದ ಸಾರ್ವಜನಿಕ ಶನಿಪೂಜೆ, ಎ.21 ರಂದು ಬೆಳಿಗ್ಗೆ ಕವಾಟೋದ್ಘಾಟನೆ, ಚೂಣೋತ್ಸವ, ರಾತ್ರಿ 8.30 ರಿಂದ ಕೊಡಮಣಿತ್ತಾಯ ದೈವದ ಗಗ್ಗರ ಸೇವೆ, 9.00ರಿಂದ ಉತ್ಸವ, ಮಹಾರಥೋತ್ಸವ, ಅವಕೃತ ಕಟ್ಟೆಪೂಜೆ, ಬಾಕಿಮಾರು ಗದ್ದೆಗೆ ಸವಾರಿ, ದೈವ-ದೇವಚರ ಭೇಟಿ, ಅವಭೃತ ಸ್ನಾನ, ಧ್ವಜಾರೋಹಣ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಯಕ್ಷಗಾನ ಬಯಲಾಟ ಶ್ರೀ ದೇವಿ ಮಹಾತ್ಮೆ ನಡೆಯಲಿದೆ.
ಎ.22 ರಂದು ಏಕಾದಶ ರುದ್ರಾಭಿಷೇಕ, ಸಂಪ್ರೋಕ್ಷಣೆ, ಸಂತರ್ಪಣೆ, ಮಹಾಮಂತ್ರಾಕ್ಷತೆ ರಾತ್ರಿ 7.00 ರಿಂದ ಅಂಗಣ ಪಂಜುರ್ಲಿ ದೈವದ ನೇಮ ನಡೆಯಲಿದೆ.