24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಎ.13,ವಿಷು ಕಣಿ ಆಚರಣಾ ಸಮಿತಿಯಿಂದ ಕೇರಳ ಸಂಪ್ರಾದಾಯಿಕ ವಿಷು ಕಣಿ ಆಚರಣೆ: ಕೇರಳ ಚೆಂಡೆ ಪ್ರದರ್ಶನ, ಪೂಕಳಂ, ಮನೋರಂಜನಾ ಕಾರ್ಯಕ್ರಮ, 32 ಬಗೆಯ ಉಟೋಪಚಾರ

ಬೆಳ್ತಂಗಡಿ:ವಿಷು ಕಣಿ ಆಚರಣಾ ಸಮಿತಿಯಿಂದ 3 ನೇ ವರ್ಷದ ಕೇರಳ ಸಾಂಪ್ರದಾಯಿಕ ವಿಷು ಕಣಿ ಆಚರಣೆಯು ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಎ.13 ರಂದು ನಡೆಯಲಿದೆ.ಕಳೆದ ಎರಡು ವರ್ಷದ ಹಿಂದೆ ಉಜಿರೆಯಲ್ಲಿ ನಡೆದ ವಿಷು ಕಣಿ ಆಚರಣೆಯಲ್ಲಿ ಬೆಳ್ತಂಗಡಿ ತಾಲೂಕಿನ ಸಾವಿರಾರು ಜನರು ಭಾಗವಹಿಸಿದ್ದರು‌.ವಿಷು ಹಬ್ಬ ಕೃಷಿ ಪ್ರಧಾನ ಹಬ್ಬವಾಗಿದ್ದು ಮನೆಮಂದಿ ವಿಷು ಕಣಿ ಇಟ್ಟು ಬೆಳಗ್ಗೆ ಬೇಗ ಎದ್ದು ಹೆಚ್ಚಿನ ಮನೆ, ದೇವಸ್ಥಾನ, ದೈವಸ್ಥಾನಗಳಲ್ಲಿ ಪೂಜೆ ನಡೆಸುತ್ತಾರೆ.ಬಾಳೆಹಣ್ಣು, ಎಳನೀರು, ಹಲಸಿನ ಹಣ್ಣು, ಕನ್ನಡಿ, ತಂಬಿಗೆಯಲ್ಲಿ ನೀರು, ಎಲೆಅಡಿಕೆ, ಹಣ, ಕುಂಕುಮ,ಚಿನ್ನದ ಒಡವೆ ಮೊದಲಾದ ಸುವಸ್ತುಗಳನ್ನು ಜೋಡಿಸಿ ವಿಷು ಕಣಿ ಮಾಡಲಾಗುತ್ತದೆ.ಈ ಸಂದರ್ಭ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ-ಪುನಸ್ಕಾರ ನಡೆಯುತ್ತದೆ. ಸಾವಿರಾರು ಭಕ್ತರು ಪಾಲ್ಗೊಂಡು ಶ್ರೀ ದೇವರ ದರುಶನ ಪಡೆದು ಅನ್ನಪ್ರಸಾದ ಸ್ವೀಕರಿಸುತ್ತಾರೆ.ಬಹುತೇಕ ಮನೆಗಳಲ್ಲಿ ವಿಷುಕಣಿ ಇಟ್ಟು ಕುಟುಂಬದ ಸದಸ್ಯರೆಲ್ಲರೂ ಜತೆ ಸೇರಿ ಹಬ್ಬ ಆಚರಿಸಿ ಸಿಹಿಯೂಟ ಮಾಡುತ್ತಾರೆ. ಈ ಬಾರಿ ಬೆಳ್ತಂಗಡಿ ತಾಲೂಕು ವಿಷು ಕಣಿ ಆಚರಣಾ ಸಮಿತಿ ವಿನೂತನವಾಗಿ ಹಬ್ಬವನ್ನು ಆಚರಿಸಲು ನಿರ್ದರಿಸಿದೆ. ವಿಶೇಷ ಕೇರಳ ಚೆಂಡೆ ಪ್ರದರ್ಶನ,ಪೂಕಳಂ,ಕೇರಳದ ನುರಿತ ಕಲಾವಿದರಿಂದ ವಿವಿಧ ಮನೋರಂಜನಾ ಕಾರ್ಯಕ್ರಮ, ಕೇರಳ ಸಾಂಪ್ರಾದಾಯಿಕ ಶೈಲಿಯ 32 ಬಗೆಯ ಉಟೋಪಚಾರ ಇದೆಯೆಂದು ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.

Related posts

ರಾಜ್ಯ ಸರಕಾರಿ ನೌಕರರ ಸಂಘದ ಚುನಾವಣೆ: ಅಧ್ಯಕ್ಷರಾಗಿ ಜಯರಾಜ ಜೈನ್, ಖಜಾಂಚಿಯಾಗಿ ನಾರಾಯಣ ಶೆಟ್ಟಿ, ರಾಜ್ಯ ಪರಿಷತ್‌ ಸದಸ್ಯರಾಗಿ ಪ್ರದೀಪ್ ಕುಮಾರ್ ಆಯ್ಕೆ

Suddi Udaya

ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ವತಿಯಿಂದ ವಿದ್ಯಾಭ್ಯಾಸಕ್ಕಾಗಿ ಸಹಾಯಧನ ಹಸ್ತಾಂತರ

Suddi Udaya

ಕಳಿಯ ಗ್ರಾಮ ಪಂಚಾಯತ್ ನ್ಯಾಯ ಸಮಿತಿ ಸಭೆ

Suddi Udaya

ಸ್ಟಾರ್ ಲೈನ್ ಶಾಲೆ: ಎಸ್.ಜೆ.ಎಮ್ ರಾಜ್ಯ ಅಧ್ಯಕ್ಷ ಜೆಪ್ಪು ಉಸ್ತಾದ್ ಭೇಟಿ

Suddi Udaya

ಮುಂಡಾಜೆ ಪ.ಪೂ. ಕಾಲೇಜಿನಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ

Suddi Udaya

ಮದ್ದಡ್ಕ ಮಸೀದಿ ಬಳಿ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಕಾರು : ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya
error: Content is protected !!