30.3 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಲ್ಮಂಜ : ಬೆರ್ಕೆಯಲ್ಲಿ ಒಂಟಿ ಸಲಗ ದಾಳಿ: ಅಪಾರ ಕೃಷಿ ಹಾನಿ

ಬೆಳ್ತಂಗಡಿ: ಕಲ್ಮಂಜ ಗ್ರಾಮದ ಬೆರ್ಕೆ ಎಂಬಲ್ಲಿ ಎಂ.ಎಸ್. ಪ್ರಕಾಶ್ ಎಂಬವರ ತೋಟಕ್ಕೆ ಎ.6ರಂದು ತಡರಾತ್ರಿ ಒಂಟಿ ಸಲಗ ಪ್ರವೇಶಿಸಿ ಕೃಷಿಹಾನಿ ಉಂಟುಮಾಡಿದೆ.


ಸಲಗವು ಸುಮಾರು 40ಕ್ಕಿಂತ ಅಧಿಕ ಬಾಳೆ ಗಿಡ 5 ಅಡಕೆ ಮರಗಳನ್ನು ಧ್ವಂಸಗೊಳಿಸಿದೆ.
ಕಳೆದ ಸುಮಾರು ಎರಡು ತಿಂಗಳ ಹಿಂದೆ ಇದೇ ತೋಟಕ್ಕೆ ಪ್ರವೇಶಿಸಿದ್ದ ಕಾಡಾನೆ ಆಗ ಈಚಲ ಮರವನ್ನು ಮುರಿದು ಹಾಕಿತ್ತು. ಮನೆಯವರು ಅದನ್ನು ಹಾಗೆ ಬಿಟ್ಟಿದ್ದರು. ಈ ಈಚಲ ಮರವನ್ನು ಆನೆ ಶನಿವಾರ ಸಂಪೂರ್ಣ ಪುಡಿಗಟ್ಟಿದೆ.
ತಿಂಗಳ ಹಿಂದೆ ಕಾಡಾನೆಗಳು ಚಾರ್ಮಾಡಿ, ಮುಂಡಾಜೆ, ಕಡಿರುದ್ಯಾವರ, ಕಲ್ಮಂಜ,ಬೆಳಾಲು, ಗೇರುಕಟ್ಟೆ ಮೊದಲಾದ ಕಡೆ ಸಾಕಷ್ಟು ದಾಂಧಲೆ ನಡೆಸಿ ಉಪ್ಪಿನಂಗಡಿ ಭಾಗದಲ್ಲಿಯು ಪ್ರತ್ಯಕ್ಷವಾಗಿದ್ದು, ಇದೀಗ ಮತ್ತೆ ಕಾಡಾನೆ ಉಪಟಳ ಈ ಭಾಗಗಳಲ್ಲಿ ಕಾಣಿಸಿಕೊಂಡಿದೆ.

Related posts

ಬಾರ್ಯ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣ

Suddi Udaya

ರಾಜ್ಯ ಸರ್ಕಾರದ ವಿದ್ಯುತ್ ಬೆಲೆ ಏರಿಕೆ ವಿರೋಧಿಸಿ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಪ್ರತಿಭಟನೆ

Suddi Udaya

ಬೆಳ್ತಂಗಡಿ ಪ.ಪಂ. ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಗೊಳಗಾದರೆ ಪ.ಪಂ. ಸಹಾಯವಾಣಿ ತಿಳಿಸುವಂತೆ ಮುಖ್ಯಾಧಿಕಾರಿ ಮನವಿ

Suddi Udaya

ತೆಂಕಕಾರಂದೂರು: ಶಾಲಾ ಆವರಣದಲ್ಲಿ ಹೂವಿನ ಕುಂಡಗಳನ್ನು ಪುಡಿಗೊಳಿಸಿದ ಕಿಡಿಗೇಡಿಗಳು

Suddi Udaya

ಬರೆಂಗಾಯದಲ್ಲಿ ಅಡಿಕೆ ಮತ್ತು ಕಾಳುಮೆಣಸು ಖರೀದಿ ಉಪಕೇಂದ್ರ ಆರಂಭ

Suddi Udaya

ಗರ್ಡಾಡಿ ಸೌಭಾಗ್ಯ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ

Suddi Udaya
error: Content is protected !!