
ಬಂದಾರು: ಇಲ್ಲಿಯ ಕುರಾಯ ಶ್ರೀ ಸದಾಶಿವ ದೇವರ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವವು ಬ್ರಹ್ಮಶ್ರೀ ನೀಲೇಶ್ವರ ವಾಸುದೇವ ತಂತ್ರಿಯವರ ಹಿರಿತನದಲ್ಲಿ ನೀಲೇಶ್ವರ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಎ.2ರಿಂದ ಆರಂಭಗೊಂಡು ಎ.10ರ ತನಕ ವಿಜೃಂಭಣೆಯಿಂದ ನಡೆಯಲಿದೆ
ಇಂದು (ಎ.8) ಬೆಳಿಗ್ಗೆ ದರ್ಶನ ಬಲಿ ನಂತರ ಬಟ್ಟಲು ಕಾಣಿಕೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಜಾತ್ರೋತ್ಸವ ಸಮಿತಿ ಮತ್ತು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಬು ಗೌಡ ಮಡ್ಯಲಖಂಡ, ಅರ್ಚಕರು, ಸದಾಶಿವ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರು, ಯಕ್ಷಗಾನ ಸಮಿತಿಯ ಅಧ್ಯಕ್ಷರು, ಸದಸ್ಯರು, ಸದಾಶಿವ ಭಜನಾ ಮಂಡಳಿಯ ಅಧ್ಯಕ್ಷರು, ಸದಸ್ಯರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ ಹಾಗೂ ಪ್ರಗತಿಬಂಧು ಒಕ್ಕೂಟ ಮೈರೋಳಡ್ಕ ಬಂದಾರು ಅಧ್ಯಕ್ಷ, ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು.
ಸಂಜೆ ಭಜನೆ, ರಾತ್ರಿ ರಕೇಶ್ವರಿ ದೈವದ ನೇಮೋತ್ಸವ, ರಥೋತ್ಸವ ಮತ್ತು ಶಯನೋತ್ಸವ ನಡೆಯಲಿದೆ .