:
ಬೆಳ್ತಂಗಡಿ : ಪುರುಷರ ಭಕ್ತರ ಸಮಿತಿ ಕರ್ಂಬಲೆಕ್ಕಿ ಸಾವ್ಯ ಇದರ ರಾಶಿ ಪೂಜೆ ಇತ್ತೀಚೆಗೆ ಕರ್ಂಬಲೆಕ್ಕಿ ಎಂಬಲ್ಲಿ ಜರಗಿತು.
ಪ್ರಾಚೀನ ಕಾಲದಿಂದ ತುಳುನಾಡಿನಲ್ಲಿ ಅತೀ ಭಕ್ತಿ ಭಾವದಿಂದ ಸುಗ್ಗಿ ತಿಂಗಳ ಹುಣ್ಣಿಮೆಯ ಸಂದರ್ಭದಲ್ಲಿ ಪುರುಷ ಕಟ್ಟುವುದು ಆಚರಿಸಲ್ಪಡುವುದಾಗಿದ್ದು ಕಳೆದ ನಾಲ್ಕು ದಶಕಗಳಿಂದ ನಡೆಯುತ್ತಿದ್ದು ಮೂರು ಅಥವಾ ಐದು ದಿವಸ ಕದ್ರಿ ದೇವರ ಹೆಸರಿನಲ್ಲಿ ದೇವರು ಸಹಿತ ವಿವಿಧ ವೇಷಗಳೊಂದಿಗೆ ಗ್ರಾಮದ ಮನೆ ಮನೆಗಳಿಗೆ ತೆರಳಿ ಹರಕೆ-ಕಾಣಿಕೆ ಸ್ವೀಕರಿಸಿ ಸುಮಾರು 30ರಿಂದ 75 ಮಂದಿಯ ತಂಡ ದಿಮಿಸೋಲೆ ಹಾಕುತ್ತಾ ಬಹು ವಿಜೃಂಭಣೆ ಕಟ್ಟು ಕಟ್ಟಲೆಯಂತೆ ನಡೆದು ಬಳಿಕ ದಿನ ನಿಗದಿಗೊಳಿಸಿ ರಾಶಿ ಪೂಜೆ ಮಾಡಿ ಪ್ರಸಾದ ಹಂಚುವ ಕಾರ್‍ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಕೆ. ಸದಾಶಿವ ಹೆಗ್ಡೆ , ವಸಂತ ಪಡೀಲ್, ಅಮ್ಮಿ ಪೂಜಾರಿ, ಸಂದೀಪ್ ಬೀಜದಡಿ, ಸುಂದರ ಬಂಗೇರ, ದಿನೇಶ್ ಕೋಟ್ಯಾನ್, ಪ್ರಶಾಂತ್ ಮಲ್ಲರಡ್ಡ, ಶಶಿಧರ ಆಚಾರ್ಯ, ಮತ್ತಿತರರು ರಾಶಿ ಪೂಜಾ ವಿಧಿ ನಡೆಸಿ ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿ ಶ್ರೀದೇವರ ಗಂಧ ಪ್ರಸಾದ ಸ್ವೀಕರಿಸಿದರು.