
ಬೆಳ್ತಂಗಡಿ: ಮರೋಡಿ ಶ್ರೀ ಉಮಾಮಹೇಶ್ವರ ದೇವರಿಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕವು ಎ.7 ರಿಂದ ಪ್ರಾರಂಭಗೊಂಡು ಎ.12 ರವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.


ಎ.7ರಂದು ವೈಭವಯುತವಾದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ಕೊಕ್ರಬೆಟ್ಟು ಶಾಲೆಯ ವಠಾರದಲ್ಲಿ ಚಾಲನೆ ನೀಡಲಾಯಿತು. ಮರೋಡಿ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ ಮೆರಮಣಿಗೆಗೆ ಚಾಲನೆ ನೀಡಿದರು.

ಹೊರೆಕಾಣಿಕೆ ನೂರಾರು ವಾಹನಗಳ ಮೂಲಕ ಕ್ಷೇತ್ರಕ್ಕೆ ಸಾಗಿ ಬಂತು. ಪೂರ್ಣಕುಂಭಗಳನ್ನು ಹೊತ್ತುಕೊಂಡ ಮಹಿಳೆಯರು ಸ್ವಾಗತ ಕೋರಿದರು. ವಿವಿಧ ಭಜನಾ ತಂಡಗಳ ಕುಣಿತಾ ಭಜನೆ ಎಲ್ಲರ ಗಮನ ಸೆಳೆಯಿತು. ಚೆಂಡೆ, ಕೀಲು ಕುದುರೆ, ವಾದ್ಯ ಘೋಷ, ವಿವಿಧ ವೇಷ ಭೂಷಣಗಳು ಹಸಿರುವಾಣಿ ಹೊರೆಕಾಣಿಕೆ ವೈಭವಕ್ಕೆ ಕಳೆ ತುಂಬಿತು.


ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ಜಯಂತ್ ಕೋಟ್ಯಾನ್, ಕ್ಷೇತ್ರದ ತಂತ್ರಿಗಳು ಬ್ರಹ್ಮಶ್ರೀ ವೇದಮೂರ್ತಿ ಬಾಲಕೃಷ್ಣ ಪಾಂಗಾಣ್ಣಾಯರು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಯಶೋಧರ ಬಂಗೇರ ಮರೋಡಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾರಾಯಣ ಸುವರ್ಣ, ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಪ್ರಸಾದ್, ಕೋಶಾಧಿಕಾರಿ ಅಣ್ಣಪ್ಪ ಹೆಗ್ಡೆ, ಕಾರ್ಯದರ್ಶಿ ಚಂದ್ರಶೇಖರ ಮೂಡಾಯಿನಡೆ, ಜೊತೆಕಾರ್ಯದರ್ಶಿಗಳಾದ ಪದ್ಮಶ್ರೀ ಜೈನ್, ಅಶೋಕ್ ಪೂಜಾರಿ, ಶ್ರೀಮತಿ ಧಮಯಂತಿ, ಉಪಾಧ್ಯಕ್ಷರುಗಳಾದ ರವೀಂದ್ರ ಹೆಗ್ಡೆ, ದಿವಾಕರ ಹೆಗ್ಡೆ, ವಿಜಯ ಕುಮಾರ್ ಬಂಗ, ಶ್ರೀಮತಿ ಸುಫಲಾ, ಲಿಂಗಪ್ಪ ಪೂಜಾರಿ , ರತ್ನಾಕರ ಬುಣ್ಣನ್, ವಿಜಯ ಆರಿಗ, ಎಂ.ಎಸ್ ಪೂಜಾರಿ, ರಾಧಕೃಷ್ಣ ಹೆಗ್ಡೆ, ಸುಜಯ ಹೆಗ್ಡೆ, ಶ್ರೀಧರ ಆಚಾರ್ಯ, ಸುರೇಂದ್ರ ಪೂಜಾರಿ, ಶ್ರೀಧರ ಪೂಜಾರಿ, ನಾರಾಯಣ ಪೂಜಾರಿ ಉಚ್ಚೂರು,ಸುಜಯ್ ಹೆಗ್ಡೆ, ಸುಜಾತ ನಡಾಯಿ,ಅಶೋಕ್ ಕೋಟ್ಯಾನ್,ಗೋವಿಂದ ಕುಮಾರ್,ಬಾಲಕೃಷ್ಣ ಬಂಗೇರ,ನವೀನ್ ಕೋಟ್ಯಾನ್,ಸಂತೋಷ್ ಪೂಜಾರಿ, ರಾಘವ ಬಂಗೇರ, ಯಶೋಧರ ಕೋಟ್ಯಾನ್,ಪ್ರದೀಶ್ ಹೆಚ್,ನವೀನ್ ಕೋಟ್ಯಾನ್,ರಾಜು ಪೂಜಾರಿ, ಅವಿನಾಶ್ ಕೋಟ್ಯಾನ್, ಅಶೋಕ್ ಕೋಟ್ಯಾನ್, ಆನಂದ ಶೆಟ್ಟಿ, ಹರೀಶ್ ಹೆಗ್ಡೆ,ಸಂತೋಷ್ ಮರ್ದೊಟ್ಟು ,ಸುದರ್ಶನ್ ಪೂಜಾರಿ,ಪ್ರಭಾಕರ್ ಪಡೀಲ್,ಭಾರತಿ ಜಯ ಪೂಜಾರಿ,ಜಗದೀಶ್ ಹಾರೊದ್ದೊ,ಸೋಮನಾಥ ಪೂಜಾರಿ, ಶ್ರೀಧರ ಕುಲಾಲ್,ಗೋಪಾಲ್ ಕುಲಾಲ್,ಲಕ್ಷ್ಮಣ ಪೂಜಾರಿ,ಯಶವಂತ ಪೂಜಾರಿ,ಮಹಿಳಾ ಸಮಿತಿ ಸಂಚಾಲಕರು, ಪದಾಧಿಕಾರಿಗಳು, ಹೊರೆಕಾಣಿಕೆ ಸಮಿತಿಯ ಸಂಚಾಲಕ ಉಮೇಶ್ ಸಾಲ್ಯಾನ್, ಸಹಸಂಚಾಲಕ ಸುರೇಶ್ ಅಂಚನ್, ಹೊರೆಕಾಣಿಕೆ ಸಮಿತಿಯ ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು.