ಬಂದಾರು : ಒಂದೇ ವರ್ಷದ ಅಡಿಕೆ ಸಸಿಯಲ್ಲಿ ಮೂಡಿದ ಚೊಚ್ಚಲ ಹಿಂಗಾರ; ಶಾಲಾ ತೋಟದಲ್ಲಿ ಹೀಗೊಂದು ಪ್ರಕೃತಿ ವೈಚಿತ್ರ್ಯ

Suddi Udaya

ಬಂದಾರು : ಸರಕಾರಿ ಶಾಲೆಯ ಅಡಿಕೆ ತೋಟದಲ್ಲಿ ಒಂದೇ ವರ್ಷದ ಅಡಿಕೆ ಸಸಿಯೊಂದರಲ್ಲಿ ಕಾಂಡದ ತುದಿಯ ಗರಿಗಳ ಮಧ್ಯ ಭಾಗದಲ್ಲಿ ಚೊಚ್ಚಲ ಹಿಂಗಾರ ಮೂಡಿದ ಪ್ರಕೃತಿ ವೈಚಿತ್ರ್ಯವೊಂದು ಬಂದಾರು ಬಳಿ ಕಂಡು ಬಂದಿದೆ.

ಹೌದು, ಬೆಳ್ತಂಗಡಿ ತಾಲೂಕು ಬಂದಾರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಒಂದು ವರ್ಷದ ಮಂಗಳ ತಳಿಯ ಅಡಿಕೆ ತೋಟದ ಅಡಿಕೆ ಸಸಿಯೊಂದರಲ್ಲಿ ಗರಿ ಮೂಡುವ ಕಾಂಡದ ತುದಿಯಲ್ಲಿ ಹೊಚ್ಚ ಹೊಸ ಹಿಂಗಾರವೇ ಚಿಗುರಿ ಅರಳಿದೆ. ಇದೀಗ ಕಡಲೆ ಕಾಳಿನ ಗಾತ್ರದಲ್ಲಿ ಎಳೆ ಅಡಿಕೆ ಕಾಯಿಯೂ ಬೆಳೆಯುತ್ತಿದೆ.ನೆಟ್ಟ ಒಂದೇ ವರ್ಷಕ್ಕೆ ಅಡಿಕೆ ಸಸಿಯಲ್ಲಿ ಕಂಡು ಬಂದ ಈ ಪ್ರಕೃತಿ ವೈಚಿತ್ರ್ಯದ ಬಗ್ಗೆ ಕುತೂಹಲ ಮೂಡಿದ್ದು ಹಿಂಗಾರದ ಮುಂದಿನ ಬೆಳವಣಿಗೆ ಬಗ್ಗೆ ಕಾತರದಿಂದ ಕಾಯುವಂತಾಗಿದೆ.

ಅಚುಶ್ರೀ ಬಾಂಗೇರು.

Leave a Comment

error: Content is protected !!