ಗೇರುಕಟ್ಟೆ ಸಮೀಪದ ಬಟ್ಟೆಮಾರು ಎಂಬಲ್ಲಿ ಬೈಹುಲ್ಲು ಟ್ರಕ್ ಗೆ ಬೆಂಕಿ ಅವಘಡ

Suddi Udaya

Updated on:

ಬೆಳ್ತಂಗಡಿ : ಗೇರುಕಟ್ಚೆ ಕಳಿಯ ಗ್ರಾಮದ ಬಟ್ಟೆಮಾರು ಸಮೀಪದ ಕೊಯ್ಯೂರು-ಪರಪ್ಪು ರಸ್ತೆಯ ರಕ್ತೇಶ್ವರಿಪದವು ಕೂಡು ರಸ್ತೆಯ ಪಕ್ಕದಲ್ಲಿ ಬೈಹುಲ್ಲು ಲಾರಿಗೆ ಬೆಂಕಿ ತಗುಲಿ ಬೈಹುಲ್ಲು ಹೊತ್ತಿ ಉರಿದ ಘಟನೆ ಎ.11 ರಂದು ಮಧ್ಯಾಹ್ನ ನಡೆಯಿತು.
ಬೈಲು ಲಾರಿಯ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಾಗ ರಸ್ತೆ ಪಕ್ಕದ ಯಾಕೂಬು ಮನೆಯವರು ನೋಡಿ ತಕ್ಷಣ ಲಾರಿ ಚಾಲಕ ಮತ್ತು ನಿರ್ವಾಹಕರ ಗಮನಕ್ಕೆ ತಂದರು. ನಂತರ ಸ್ಥಳೀಯ ಯುವಕರ ತಂಡ ಮನೆಗೆ-ಮನೆಗೆ ಧಾವಿಸಿ ನೀರು ತಂದು ಬೆಂಕಿ ನಂದಿಸುಲ್ಲಿ ಮಗ್ನರಾಗಿದ್ದರು. ಕಳಿಯ ಗ್ರಾ. ಪಂ.ಸದಸ್ಯ ಅಬ್ದುಲ್ ಕರೀಂ ತಕ್ಷಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ಸ್ಥಳೀಯ ಗ್ರಾಮಸ್ಥರ ನೆರವಿನಿಂದ ಹಾಗೂ ಗೇರುಕಟ್ಟೆ ವಿನಯ ಪ್ರಸಾದ್ ರವರ ಜೆ.ಸಿ.ಬಿ.ಸಹಾಯದಿಂದ ಮತ್ತು ಪುರಂದರ ನಾಯ್ಕರವರು ಕೊಳವೆ ಬಾವಿ ನೀರನ್ನು ನೀಡುವ ಮೂಲಕ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳೀಯರ ಸಹಕಾರ:
ಅವಘಡ ನಡೆದ ಪಕ್ಕದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಮತ್ತು ಮಕ್ಕಳಿಗೆ ಕುಡಿಯಲು ಶೇಖರಿಸಿಟ್ಟ ನೀರನ್ನು ಕೂಡಾ ಬೆಂಕಿ ನಂದಿಸಲು ನೀಡಿ ಸಹಕರಿಸಿದ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಟ್ಟೆಮಾರು ಜನತಾ ಕಾಲೋನಿಯಲ್ಲಿ ರಂಜಾನ್ ಹಬ್ಬದ ಆಚರಣೆಗೆ ಬಂದು ಸೇರಿದ್ದ ಯುವಕರು, ಸ್ಥಳೀಯರು ಜಾತಿ ಮತ ಭೇಧ ಮರೆತು ಅಕ್ಕ ಪಕ್ಕದ ಮನೆಯವರು ಬೆಂಕಿ ನಂದಿಸುವ ಕೆಲಸಕ್ಕೆ ಕೈ ಜೋಡಿಸುವ ಮೂಲಕ ದೊಡ್ಡ ಅನಾಹುತವನ್ನು ತಪ್ಪಿಸುವಲ್ಲಿ ಯಶಸ್ವಿಯಾದರು.
ಬೆಂಕಿಯ ಜ್ವಾಲೆಗೆ ಲಾರಿಯ ಮೇಲ್ಮೈ ಸುಟ್ಟು ಕರಕಲಾಗಿದೆ.
ನಮ್ಮ ಜೀವ ಮತ್ತು ಲಾರಿಯನ್ನು ಉಳಿಸಿಕೊಳ್ಳಲು ಶ್ರಮ ಪಟ್ಟವರಿಗೆಲ್ಲ ಸಕಲೇಶಪುರದ ಲಾರಿಚಾಲಕ ಮತ್ತು ನಿರ್ವಾಕ ಕಣ್ಣೀರು ಹಾಕಿ ಕೃತಜ್ಞತೆ ಸಲ್ಲಿಸಿದರು.

ಅವಘಡಕ್ಕೆ ಕಾರಣ:
ಬೆಂಕಿ ಅವಘಡ ಸಂಭವಿಸಿದ ರಸ್ತೆಯ ಪಕ್ಕದಲ್ಲಿರುವ ವಿದ್ಯುತ್ ತಂತಿ ಕೇವಲ10 ಅಡಿಗೂ ಕಡಿಮೆ ಅಂತರದಲ್ಲಿ ಎಂದು ದೊಂಟಿ ಮೂಲಕ ಅಳತೆ ಮಾಡಿದ ಯುವಕರು. ತಂತಿ ಜೋತು ಬಿದ್ದಿರುವ ಪರಿಸ್ಥಿತಿಯಿಂದ ತಂತಿಯ ಮೂಲಕ ಬೈಹುಲ್ಲಿಗೆ ಬೆಂಕಿ ತಗುಲಿದೆ ಎಂದು ಸ್ಥಳೀಯರ ಅಭಿಪ್ರಾಯ ಪಟ್ಟಿದ್ದಾರೆ. ಈ ಹಿಂದೆ ಕೂಡ ಜೆ.ಸಿ.ಬಿ.ಗೆ ತಂತಿ ತಗುಲಿ ಘಟನೆ ನಡೆದಿದೆ.
ತಂತಿ ಕಂಬಗಳಿಗೆ ಮತ್ತು ಟ್ರಾನ್ಸ್ ಫಾರ್ಮ್ ಗಿಡ,ಮರ, ಬಳ್ಳಿಗಳು ಅವರಿಸಿದ್ದು ಪವರ್ ಮನ್ ಮತ್ತು ಸಂಬಂಧಿಸಿದ ಇಲಾಖೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Leave a Comment

error: Content is protected !!