ಗೇರುಕಟ್ಟೆ ಸಮೀಪದ ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಈದುಲ್ ಫಿತರ್ ಹಬ್ಬದ ಸಾಮೂಹಿಕ ನಮಾಝ್ ಖತೀಬರಾದ ತಾಜುದ್ದೀನ್ ಸಖಾಫಿ ನೇತೃತ್ವದಲ್ಲಿ ನಡೆಯಿತು. ಶಾಂತಿ ಸೌಹಾರ್ಧತೆಯ ಬಗ್ಗೆ ಸಂದೇಶ ಭಾಷಣ ಮಾಡಿದರು.
ಖತೀಬರಾದ ತಾಜುದ್ದೀನ್ ಸಖಾಫಿರವರನ್ನು ಬೀಳ್ಕೊಡುಗೆ:
ಕಳೆದ ಮೂರು ವರ್ಷಗಳಿಂದ ಪರಪ್ಪು ಮಸೀದಿಯಲ್ಲಿ ಖತೀಬರಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದ ತಾಜುದ್ದೀನ್ ಸಖಾಫಿ ಮದರಸ ಮಕ್ಕಳ ವಿದ್ಯಾಭ್ಯಾಸದಲ್ಲಿ ರೇಂಜ್ ಮತ್ತು ಜಿಲ್ಲಾ ಮಟ್ಟದಲ್ಲಿ ಉತ್ತಮ ಫಲಿತಾಂಶ ಬರಲು ಹಾಗೂ ಮದರಸ ಮಕ್ಕಳ ಪ್ರತಿಭೋತ್ಸವದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪಡೆಯಲು ಕೂಡಾ ಕಾರಣಕರ್ತರಾಗಿದ್ದರು.
ಇವರು ಬೇರೆ ಕಡೆ ಉದ್ಯೋಗಕ್ಕಾಗಿ ಹೋಗುವವರಾದ್ದರಿಂದ ಈದುಲ್ ಫಿತರ್ ನ ದಿನದಂದು ಆಡಳಿತ ಸಮಿತಿ ಮತ್ತು ಜಮಾಅತರಿಂದ ಗೌರವಾರ್ಪಣೆಯ ಮೂಲಕ ಬೀಳ್ಕೊಡಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ,ಸಿದ್ದೀಕ್ ಮುಈನಿ, ಅಬ್ಬಾಸ್ ಹಿಶಮಿ,ಇಕ್ಬಾಲ್ ಮರ್ಝಾಕಿ, ಸಿದ್ದೀಕ್ ಸಖಾಫಿ , ಖಾದರ್ ಹಾಜಿ,ಅಬ್ದುಲ್ ಕರೀಮ್, ಖಾದರ್ ಟಿಂಬರ್, ಬಶೀರ್ ಟಿಂಬರ್,ಇಸುಬು ಎಂ.ಕೆ., ಮಹ್ಮದ್ ಎನ್.ಎನ್, ಹಾರಿಶ್ ಎನ್.ಎ, ಅಬ್ಬಾಸ್, ಬಿ.ಎಂ. ಆದಂ ಹಾಜಿ, ಹನೀಫ್ ಬಿ.ಐ., ಆಸಿಫ್.ಎಸ್.ಯು, ಅಬೂಸಾಲಿಹ್ ,ಸಿದ್ದೀಕ್ , ಸೈಫುಲ್ಲಾ, ಹಾಗೂ ಇನ್ನೂ ಅನೇಕ ಮುಖಂಡರು, ಉಸ್ತಾದರುಗಳು ಮೊದಲಾದವರಿದ್ದರು.