ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಮಾಗಣೆ ಗೌಡ, ಊರ ಗೌಡ ಮತ್ತು ಒತ್ತು ಗೌಡರ ಸಮಾವೇಶ ಮತ್ತು ಸನ್ಮಾನ ಸಮಾರಂಭ ಎ.11ರಂದು ಬೆಳ್ತಂಗಡಿ ಹಳೆಕೋಟೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಪಿ. ಕುಶಾಲಪ್ಪ ಗೌಡ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಸುಳ್ಯ ಸ್ಪೂರ್ತಿ ಬರಹಗಾರರು ಮತ್ತು ನಿವೃತ್ತ ಪ್ರಾಂಶುಪಾಲರು ಡಾ. ಪೂವಪ್ಪ ಗೌಡ ಕಣಿಯೂರು ವಹಿಸಿದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ಗೌಡರ ಯಾನೆ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಲೋಕಯ್ಯ ಗೌಡ, ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಹೆಚ್. ಪದ್ಮ ಗೌಡ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ, ಮಹಿಳಾ ವೇದಿಕೆಯ ಅಧ್ಯಕ್ಷರಾದ ಗೀತಾ ರಾಮಣ್ಣ ಗೌಡ, ಯುವ ವೇದಿಕೆಯ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ, ಸಂಘದ ಉಪಾಧ್ಯಕ್ಷ ದರ್ಣಪ್ಪ ಗೌಡ, ಬಾನಡ್ಕ. ನಾರಾಯಣ ಗೌಡ ದೇವಸ್ಯ, ಸಂಘಟನ ಕಾರ್ಯದರ್ಶಿ ಕೃಷ್ಣಪ್ಪ ಗೌಡ ಸವಣಾಲು, ನಿರ್ದೇಶಕರಾದ ಬಾಲಕೃಷ್ಣ ಗೌಡ ಬಿರ್ಮೊಟ್ಟು, ಮಾದವಗೌಡ, ಹರೀಶ್ ಗೌಡ, ವಿಜಯ್ ಗೌಡ, ದಿನೇಶ್ ಗೌಡ, ವಸಂತ ಗೌಡ, ಡಿ. ಎಮ್ ಗೌಡ, ಉಷಾ ವೆಂಕಟರಮಣ ಗೌಡ, ಭವಾನಿ ಕಾಂತಪ್ಪ ಗೌಡ, ನಿಕಟಪೂರ್ವ ಅಧ್ಯಕ್ಷ ಸೋಮಯ್ಯ ಗೌಡ.
ವಾಣಿ ಕಾಲೇಜು ಪ್ರಾಂಶುಪಾಲ ಯದುಪತಿ ಗೌಡ ಉಪಸ್ಥಿತರಿದ್ದರು.
ಸಂಘದಿಂದ ಮಾಗಣೆ ಗೌಡ, ಊರ ಗೌಡ, ಒತ್ತು ಗೌಡರಿಗೆ ಸನ್ಮಾನ ಮತ್ತು ಸಂಘಕ್ಕೆ ದೇಣಿಗೆ ನೀಡಿದವರನ್ನು ಗೌರವಿಸಲಾಯಿತು.
ನಿರ್ದೇಶಕರಾದ ಗೋಪಾಲಕೃಷ್ಣ ಗುಲ್ಲೋಡಿ ಸ್ವಾಗತಿಸಿ, ಸಂಘದ ಕೋಶಾಧಿಕಾರಿ ಯುವರಾಜ್ ಅನಾರ್ ಕಾರ್ಯಕ್ರಮ ನಿರೂಪಿಸಿದರು.