April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಹೊಸಂಗಡಿ -ಬಡಕೋಡಿ ಬೂತ್ ಮಟ್ಟದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ

ಹೊಸಂಗಡಿ : ಮಂಗಳೂರು ಲೋಕಸಭಾ ಚುನಾವಣಾ 2024 ಪ್ರಯುಕ್ತ ಬೂತ್ ಮಟ್ಟದ ಪಕ್ಷದ ಕಾರ್ಯಕರ್ತರ ಸಭೆಯನ್ನು ನಾರಾವಿ ಜಿಲ್ಲಾ ಪಂಚಾಯತ್ ನ ಹೊಸಂಗಡಿ ಪ್ರೆಂಡ್ಸ್ ಕ್ಲಬ್ ಸಭಾ ಭವನದಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಸತೀಶ್ ಬಂಗೇರ ಕಾಶಿಪಟ್ನ ರವರ ಅಧ್ಯಕ್ಷತೆಯಲ್ಲಿ ಜರಗಿತು. ನಂತರ ಮಾತಾಡಿದ ಅವರು ಗ್ಯಾರಂಟಿ ಯೋಜನೆಗಳಿಂದ ಬಡವರ ಮನೆ ಬೆಳಕನ್ನು ಕಂಡಿದೆ. ಗ್ಯಾರಂಟಿ ಯೋಜನೆಗಳಿಂದ ಬಡವರು ಹೊರಗೆ ಉಳಿಯಬಾರದು, ವಿಶೇಷವಾಗಿ ಪ್ರತಿ ಮಹಿಳೆಯರಿಗೆ ರೂ. 2000 ಬರಲೇ ಬೇಕು ಒಂದೊಮ್ಮೆ ತಾಂತ್ರಿಕ ದೋಷಗಳಿಂದ ಸಮಸ್ಯೆ ಇದ್ದಲ್ಲಿ ಅದನ್ನು ಸರಿಪಡಿಸುವರೇ ಮಹಿಳೆಯ ವಿವರ ಪಡೆಯಬೇಕೆಂದು ಸೂಚಿಸಿ ಸರ್ವ ಸಮಾಜದ ಪ್ರೀತಿಯ ಯುವಕ ಪದ್ಮರಾಜ್ ರವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದರು.

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಶೇಖರ್ ಕುಕ್ಕೇಡಿ ಚುನಾವಣಾ ಪ್ರಚಾರ ಹಾಗೂ ಸರಕಾರದ 5 ಗ್ಯಾರಂಟಿಗಳ ಬಗ್ಗೆ ಪ್ರತಿ ಮನೆಗೆ ಹೋಗಿ ವಿಚಾರಿಸಿ ಸಮಸ್ಯೆ ಇದ್ದಲ್ಲಿ ಪರಿಹರಿಸುವ ಮಾಹಿತಿಯನ್ನು ಪಡೆಯಬೇಕೆಂದು ಕರೆ ನೀಡಿ ಎಲ್ಲಾ ಸಮುದಾಯಗಳ ಕಣ್ಮಣಿ ಆರ್ ಪದ್ಮರಾಜ್ ಪೂಜಾರಿಯವರನ್ನು ಅತ್ಯಂತ ಹೆಚ್ಚು ಮತಗಳಿಂದ ಗೆಲ್ಲಿಸುವಂತೆ ಕಾರ್ಯಕರ್ತರು ಶ್ರಮಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹೊಸಂಗಡಿ ಪಂಚಾಯತ್ ವ್ಯಾಪ್ತಿಯ ಉಸ್ತುವಾರಿ ಬಾಲಕೃಷ್ಣ ಭಟ್ , ಬ್ಲಾಕ್ ಯುವ ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಸುದರ್ಶನ್ ಶೆಟ್ಟಿ , ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ವಂದನಾ ಭಂಡಾರಿ, ಬೆಳ್ತಂಗಡಿ ತಾಲೂಕು ಭೂನ್ಯಾಯ ಮಂಡಳಿ ಸರಕಾರಿ ನಾಮ ನಿರ್ದೇಶಿತ ಸದಸ್ಯ ಇಸ್ಮಾಯಿಲ್ ಕೆ ಪೆರಿಂಜೆ, ಪ್ರಮುಖರಾದ ಅಬ್ದುಲ್ ರಹಿಮಾನ್ ಕಟ್ಟೆ , ಅಲಿಯಬ್ಬ ಪುಲಬೆ, ಸುದರ್ಶನ್ ಮಂಜಿಲ ,ಖಾಲಿದ್ ಪುಲಬೆ ,ಪಂಚಾಯತ್ ಸದಸ್ಯೆ ಶ್ರೀಮತಿ ಜೆ ಶಾಂತ ,ಮೊಹಮ್ಮದ್ ಶಾಫಿ ಕಿರೋಡಿ ,ದಿನೇಶ್ ಸಾಲಿಯಾನ್ ,ಭೋಜಶೆಟ್ಟಿ ಬಡಕೋಡಿ , ಗುರು ಬಡಕೋಡಿ , ಪ್ರಶಾಂತ್ ನಾಯ್ಕ್ ಬಡಕೋಡಿ ,ಅಕ್ಕು ,ಜನಾರ್ಧನ್ ಕೊಂಜಾಲಗುರಿ ಸೇರಿದಂತೆ ಕಾರ್ಯಕರ್ತರು ಮುಖಂಡರುಗಳು ಉಪಸ್ಥಿತರಿದ್ದರು.


ಹೊಸಂಗಡಿ ಪಂಚಾಯತ್ ಮಾಜಿ ಅಧ್ಯಕ್ಷ ಮತ್ತು ಹಾಲಿ ಸದಸ್ಯ ಹರಿಪ್ರಸಾದ್ ಧನ್ಯವಾದವಿತ್ತರು. ಬಡಕೋಡಿಯ ಶ್ರೀಪತಿ ಉಪಾಧ್ಯಾಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತಾಡಿದರು,

Related posts

ಪ್ರಕೃತಿ ವಿಸ್ಮಯ: ಕಡಿದ ಬಾಳೆಗಿಡದಲ್ಲಿ ಹೂ ಬಿಟ್ಟ ಬಾಳೆ ಗೊನೆ

Suddi Udaya

ಟೀಮ್ ದೇವರಗುಡ್ಡೆ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ಅಂಗನವಾಡಿಗೆ ಚೇರ್ ವಿತರಣೆ

Suddi Udaya

ಕೊಯ್ಯೂರು: ದೆoತ್ಯಾರು ಶ್ರೀ ಮಹಾವಿಷ್ಣುಮೂರ್ತಿ ದೇವಳದ ಶಿಲಾನ್ಯಾಸ ಕಾರ್ಯಕ್ರಮ

Suddi Udaya

ಸಿ.ಎ. ಇಂಟರ್ ಮೀಡಿಯೆಟ್ ತರಬೇತಿ: ದೇಶಕ್ಕೆ 10ನೇ ರ್‍ಯಾಂಕ್ ಗಳಿಸಿದ ಬಜಿರೆಯ ದೀಪಕ್ ಹೆಗ್ಡೆ

Suddi Udaya

ಕಡಿರುದ್ಯಾವರ: ಅಕ್ರಮ ಮರಳುಗಾರಿಕೆ ವಿರುದ್ಧ ದೂರು ನೀಡಿದ ಪ್ರಕರಣ ಮನೆಗೆ ನುಗ್ಗಿ ಕೊಲೆ ಬೆದರಿಕೆ: ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ತಾಲೂಕು ಪ್ರೌಢಶಾಲಾ ಕಬಡ್ಡಿ ಬೆಳಾಲು ಎಸ್ ಡಿ ಎಂ ಶಾಲಾ ತಂಡ ಪ್ರಥಮ

Suddi Udaya
error: Content is protected !!