ಬೆಳ್ತಂಗಡಿ: ವಿಷು ಕಣಿ ಆಚರಣಾ ಸಮಿತಿಯಿಂದ 3 ನೇ ವರ್ಷದ ಕೇರಳ ಸಾಂಪ್ರದಾಯಿಕ ವಿಷು ಕಣಿ ಆಚರಣೆಯು ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಎ.13 ರಂದು ನಡೆಯಿತು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ದೀಪ ಬೆಳಗಿಸುವುದರ ಮೂಲಕ ವಿಷು ಕಣಿ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿ ವಿಷು ಕಣಿ ಹಬ್ಬ ಕೃಷಿ ಪ್ರಧಾನವಾಗಿದ್ದು, ವಿವಿಧ ಕೃಷಿಗಳನ್ನು ತಾಲೂಕಿಗೆ ಪರಿಚಯಿಸಿದ್ದು ಕೇರಳದವರು ಎಂದರು.
ಬರೋಡ ತುಳು ಕೂಟದ ಅಧ್ಯಕ್ಷ, ಪ್ರಸಿದ್ದ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ವಿಷು ಕಣಿಯನ್ನು ಉದ್ಘಾಟಿಸಿ ಶುಭ ಕೋರಿದರು.
ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ, ಉದ್ಯಮಿ ಮೋಹನ್ ಕುಮಾರ್ ರವರು ತೆಂಗಿನ ಗರಿಯನ್ನು ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಶಾಸಕರಾದ ಕೆ.ಪ್ರತಾಪಸಿಂಹ ನಾಯಕ್,ಪ್ರಗತಿ ಪರ ಕೃಷಿಕ ಸಂತೋಷ್ ಕುಮಾರ್ ಕಾಪಿನಡ್ಕ,ಉಜಿರೆ ಗ್ರಾಮ ಪಂಚಾಯತ್ ಅದ್ಯಕ್ಷೆ ಉಷಾ ಕಾರಂತ್,ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಮರೋಡಿ ಗ್ರಾ.ಪಂ ಅಧ್ಯಕ್ಷ ರತ್ನಾಕರ ಬುಣ್ಣನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ವಿಷು ಕಣಿ ಆಚರಣಾ ಸಮಿತಿ ಸಂಚಾಲಕರಾದ ಅನಿಲ್ ಕುಮಾರ್ ಶಿಬಾಜೆ ,ಪ್ರಸಾದ್ ಬಿ.ಎಸ್, ಉದ್ಯಮಿ ಬಾಲಕೃಷ್ಣ, ಪ್ರಮುಖರಾದ ದಿವಿನೇಶ್ ಚಾರ್ಮಾಡಿ, ರಿಜೇಶ್ ಜಿ.ಕೆರೆ ಅಖಿಲ್ ತೋಟತ್ತಾಡಿ, ಪ್ರಕಾಶ್ ನೆಕ್ಕರೆ, ರಂಗನಾಥ ಪುದುವೆಟ್ಟು, ಸುರೇಶ್ ಚಾರ್ಮಾಡಿ, ಪ್ರಸಾದ್ ಕೆ.ವಿ ತೋಟತ್ತಾಡಿ, ಪ್ರಕಾಶ್ ಹೊಸಮಠ ಚಾರ್ಮಾಡಿ, ಸುಧೀರ್ ಚಾರ್ಮಾಡಿ ಸಹಕರಿಸಿದರು.
ಬೆಳ್ತಂಗಡಿ ತಾಲೂಕು ವಿಷು ಕಣಿ ಆಚರಣಾ ಸಮಿತಿ ವಿನೂತನವಾಗಿ ಹಬ್ಬವನ್ನು ಆಚರಿಸಲು ನಿರ್ಧರಿಸಿ ವಿಶೇಷ ಕೇರಳ ಚೆಂಡೆ ಪ್ರದರ್ಶನ, ಪೂಕಳಂ, ಕೇರಳದ ನುರಿತ ಕಲಾವಿದರಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು.