April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಕಕ್ಕಿಂಜೆ: ಅನುಗ್ರಹ ಪೇಪರ್ ಪ್ಲೇಟ್ ಎಂಟರ್‌ಪ್ರೈಸಸ್ ಶುಭಾರಂಭ

ಕಕ್ಕಿಂಜೆ : ಇಲ್ಲಿಯ ಚಾರ್ಮಾಡಿ ರಸ್ತೆಯಲ್ಲಿ ಸುಜಯ್ ಮಿಯಾರು ರವರ ಮಾಲಕತ್ವದ ಅನುಗ್ರಹ ಪೇಪರ್ ಪ್ಲೇಟ್ ಎಂಟರ್‌ಪ್ರೈಸಸ್ ಇತ್ತೀಚೆಗೆ ಶುಭಾರಂಭಗೊಂಡಿತು.
ಚಾರ್ಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.


ಈ ಸಂದರ್ಭ ಬೆಳ್ತಂಗಡಿ ಎ.ಪಿ.ಎಂ.ಸಿ. ಸಿಬ್ಬಂದಿ ತ್ಯಾಗರಾಜ್ ಪರ್ಪಳ, ಗಂಡಿಬಾಗಿಲು ಉಮಾಪಂಚಲಿಂಗೇಶ್ವರ ಭಜನಾ ಮಂಡಳಿ ಅಧ್ಯಕ್ಷ ಸಂಜೀವ ಗೌಡ ಪುನ್ಕೆದಡಿ, ಕೃಷಿಕರಾದ ರಾಜಪ್ಪ ಗೌಡ, ಕಕ್ಕಿಂಜೆ ಕೆನರಾ ಬ್ಯಾಂಕ್ ಮ್ಯಾನೇಜರ್ ಶ್ರೀಕಾಂತ್, ಮಾಲಕರ ತಾಯಿ ಸುಂದರಿ, ತಂದೆ ಸಿದ್ದಪ್ಪ ಗೌಡ ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.

ನೆರಿಯ ಗ್ರಾ.ಪಂ. ಸದಸ್ಯ ಬಾಬಣ್ಣ ಪರ್ಪಳ ಸ್ವಾಗತಿಸಿದರು.
ತಮ್ಮ ಸಂಸ್ಥೆಯಲ್ಲಿ ಯಾವುದೇ ಸಭೆ ಸಮಾರಂಭಗಳಿಗೆ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಬೇಕಾದ ವಿವಿಧ ಮಾದರಿಯ ಪೇಪರ್ ಪ್ಲೇಟ್ ಲಭ್ಯವಿದೆ ಎಂದು ಮಾಲಕ ಪ್ರೊ. ಸುಜಯ್ ಮಿಯಾರು ತಿಳಿಸಿದರು.

Related posts

ಉಜಿರೆ: ಶ್ರೀ ಧ. ಮಂ. ಆಂ. ಮಾ. ಶಾಲೆಯಲ್ಲಿ ಯೋಗ ಉದ್ಘಾಟನಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಸ.ಪ್ರ. ದರ್ಜೆ ಕಾಲೇಜಿನಲ್ಲಿ “ಉದ್ಯೋಗ ಹುಡುಕಬೇಡಿ – ಸೃಷ್ಟಿಸಿ” ಎಂಬ ವಿಷಯದ ಕುರಿತು ಕಾರ್ಯಾಗಾರ

Suddi Udaya

ನಾರಾವಿ ವೈಶಾಲಿ ಪರಿಸರದಲ್ಲಿ ಮನೆ ಹಾಗೂ ತೋಟಕ್ಕೆ ಸಿಡಿಲು ಬಡಿತ: ಸಿಡಿಲಿನ ರಭಸಕ್ಕೆ ಸುಟ್ಟು ಕರಕಲಾದ ಮನೆಯ ವಸ್ತುಗಳು, ಅಪಾಯದಿಂದ ಪಾರಾದ ತಾಯಿ- ಮಗಳು

Suddi Udaya

ನಾಳ: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ: ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ

Suddi Udaya

ಪೆರ್ಲ ಕ್ಲಸ್ಟರ್ ನ ಪ್ರತಿಭಾ ಕಾರಂಜಿ: ಅರಸಿನಮಕ್ಕಿ ಶ್ರೀ ಗೋಪಾಲಕೃಷ್ಣ ಅ.ಹಿ.ಪ್ರಾ. ಶಾಲೆಗೆ ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ

Suddi Udaya

ಬೆಳ್ತಂಗಡಿ‌ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ: ಸಾಮಾಜಿಕ ನ್ಯಾಯದ ಹರಿಕಾರ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸುರವರ 109ನೇ ಜನ್ಮದಿನಾಚರಣೆ: 36 ಮಂದಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ