22.8 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬದ್ಯಾರು-ಶಿರ್ಲಾಲು ಲೋಕನಾಥೇಶ್ವರ ಭಜನಾ ಮಂಡಳಿ ಹಾಗೂ ಶ್ರೀದೇವಿ ಮಹಿಳಾ ಕೇಂದ್ರದ 25ನೇ ವರ್ಷದ ಬೆಳ್ಳಿ ಹಬ್ಬ ಸಂಭ್ರಮ:

ಶಿರ್ಲಾಲು: ಬದುಕಿನುದ್ದಕ್ಕೂ ಪರಿಶುದ್ಧ ಮನಸ್ಸು ಪಡೆಯುವ ಏಕೈಕ ಮಾರ್ಗ ಭಜನೆ. ಭಜನೆಯಿಂದ ದೈವತ್ವ ಮತ್ತು ಉತ್ತಮ ಸಂಸ್ಕಾರ ಜಾಗೃತವಾಗುತ್ತದೆ ಎಂದು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲರು ತಿಳಿಸಿದರು.

ಅವರು ಎ.14 ರಂದು ಶ್ರೀ ಲೋಕನಾಥೇಶ್ವರ ಭಜನಾ ಮಂಡಳಿ ಹಾಗೂ ಶ್ರೀದೇವಿ ಮಹಿಳಾ ಕೇಂದ್ರದ 25ನೇ ವರ್ಷದ ಬೆಳ್ಳಿ ಹಬ್ಬದ ಪ್ರಯುಕ್ತ ಏಕಾಹ ಭಜನಾ ಕಾರ್ಯಕ್ರಮ ಭಜನಾ ಕಮ್ಮಟೋತ್ಸವ ಹಾಗೂ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಪಾಂಗಾಲ್ಪಾಡಿ ಬ್ರಹ್ಮಶ್ರೀ ವೇದಮೂರ್ತಿ ನಡ್ವಂತಾಡಿ ಶ್ರೀಪಾದ ಪಾಂಗಾಣ್ಣಯ ತಂತ್ರಿಯವರು ಆಶೀರ್ವಚನ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಲೋಕನಾಥೇಶ್ವರ ಭಜನಾ ಮಂಡಳಿ ಜಗನ್ನಾಥ ಕುಲಾಲ್ ಬೈರೊಟ್ಟು ವಹಿಸಿ ಬೆಳ್ಳಿಹಬ್ಬ ಸಂಭ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು.

ಸನ್ಮಾನ: ಕಾರ್ಯಕ್ರಮದಲ್ಲಿ ಕಿರುತೆರೆ ನಿರ್ದೇಶಕ ಸುಭಾಶ್ ಅರ್ವ,ಭಜನಾ ತರಬೇತುದಾರ ವಿ.ಹರೀಶ್ ನೆರಿಯರವರನ್ನು ಸನ್ಮಾನಿಸಲಾಯಿತು. ಶ್ರೀ ಲೋಕನಾಥೇಶ್ವರ ಭಜನಾ ಮಂಡಳಿ ಹಾಗೂ ಶ್ರೀ ದೇವಿ ಮಹಿಳಾ ಕೇಂದ್ರದ ಹಲವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಪ್ರಗತಿಪರ ಕೃಷಿಕರಾದ ಎಂ.ಗಂಗಾಧರ ಮಿತ್ತಮಾರ್ , ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಧರ ಪೂಜಾರಿ, ಶಿರ್ಲಾಲು ಸಿಎ ಬ್ಯಾಂಕ್ ನಿವೃತ ಮುಖ್ಯಕಾರ್ಯನಿರ್ವಹಣಾಧಿಕಾರಿ ನಿತ್ಯಾನಂದ ಶೆಟ್ಟಿ ನೊಚ್ಚ, ಬದ್ಯಾರು ಶ್ರೀ ಲೋಕನಾಥೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದ ಸಂಜೀವ ಪೂಜಾರಿ ಕೊಡಂಗೆ,ದೇವಸ್ಥಾನದ ಪ್ರಧಾನ ಆರ್ಚಕ ಸೂರ್ಯನಾರಾಯಣ ರಾವ್,ತಾ.ಪಂ ಮಾಜಿ ಸದಸ್ಯ ಸುಧೀರ್ ಆರ್ ಸುವರ್ಣ,ಆನಂದ ಎಸ್.ಎನ್ ರಥಬೀದಿ ಉಜಿರೆ,ಪ್ರಮೋದ್ ಕುಮಾರ್ ಇಂದ್ರಪ್ರಸ್ಥ,
ದೇವಸ್ಥಾನದ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಶೈಲೇಶ್ ಆರ್.ಜೆ,ಶ್ರೀ ದೇವಿ ಮಹಿಳಾ ಕೇಂದ್ರದ ಅಧ್ಯಕ್ಷೆ ವಿಜಯ,ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಸದಾಶಿವ ಶಿವಗಿರಿ, ದೇವಸ್ಥಾನದ ಉಪಾಧ್ಯಕ್ಷ ಶೇಖರ,ಕೋಶಾಧಿಕಾರಿ ಸುರೇಂದ್ರ ಕುಮಾರ್,ಜೊತೆ ಕಾರ್ಯದರ್ಶಿ ಪ್ರಶಾಂತ್ ಮಡೆಮಾರ್,ಶ್ರೀ ದೇವಿ ಮಹಿಳಾ ಕೇಂದ್ರದ ಪ್ರ‌ಕಾರ್ಯದರ್ಶಿ ಪದ್ಮಾವತಿ ಮಡೆಮಾರ್,ಭಜನಾ ಸಂಚಾಲಕ ಪ್ರಸಾದ್ ನಲ್ಲಾರುಗುತ್ತು,ಸಂಚಾಲಕಿ ಕಮಲಾಕ್ಷಿ ಎಸ್.ಎನ್ ರಾವ್,ಸಂಘಟನಾ ಕಾರ್ಯದರ್ಶಿ ಶ್ರವಣ್ ದೆರೊಟ್ಟು ಉಪಸ್ಥಿತರಿದ್ದರು.

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ತರಬೇತಿ ಕಾರ್ಯಕ್ರಮ

Suddi Udaya

ಶಿಶಿಲ : ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದ ಕೆಎಸ್ ಆರ್ ಟಿಸಿ ಬಸ್ಸು

Suddi Udaya

ಎ.15: ಶ್ರೀ ಲೋಕನಾಥೇಶ್ವರ ಭಜನಾ ಮಂಡಳಿ ಹಾಗೂ ಶ್ರೀ ದೇವಿ ಮಹಿಳಾ ಕೇಂದ್ರದ ಪ್ರಯುಕ್ತ `ಏಕಾಹ ಭಜನಾ ಕಾರ್ಯಕ್ರಮ ಮತ್ತು ಭಜನಾ ಕಮ್ಮಟೋತ್ಸವ

Suddi Udaya

ಎನ್ನೆಸ್ಸೆಸ್ ವತಿಯಿಂದ ರಾಷ್ಟ್ರೀಯ ಏಕತಾ ದಿನಾಚರಣೆ

Suddi Udaya

ಬಿಜೆಪಿ ಮುಖಂಡ ರಾಜೇಶ್ ಕೊಲೆ ಯತ್ನ ಪ್ರಕರಣ: ಆರೋಪಿ ಕುಶಾಲಪ್ಪ ಗೌಡ ಬಂಧನ

Suddi Udaya

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ನೂತನ ಆಡಳಿತ ಮಂಡಳಿ ರಚನೆ

Suddi Udaya
error: Content is protected !!