ಬೆಳ್ತಂಗಡಿ : ಪರವಾನಿಗೆ ಇಲ್ಲದೆ ಮರ ಕಡಿದು ಸಾಗಾಟ ಮಾಡಲು ಯತ್ನಿಸುತ್ತಿದ್ದಾಗ ಬೆಳ್ತಂಗಡಿ ಅರಣ್ಯ ಇಲಾಖೆ ದಾಳಿ ಮಾಡಿ ಮರ ಮತ್ತು ಕಟ್ಟಿಗೆಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಿಬಿದ್ರೆ ಗ್ರಾಮದ ಮುಕ್ಕುಡ ನಿವಾಸಿ ಸಂತೋಷ್ ಶೆಟ್ಟಿ ಎಂಬವರಿಗೆ ಸೇರಿದ ಜಾಗದಲ್ಲಿ ಯಾವುದೇ ಅನುಮತಿ ಪಡೆಯದೆ ಮರಗಳನ್ನು ಕಡಿದು ಹಾಕಿ ಸಾಗಾಟ ಮಾಡಲು ಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಎ.17 ರಂದು ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್ ನೇತೃತ್ವದ ಸಿಬ್ಬಂದಿಗಳ ತಂಡ ದಾಳಿ ಮಾಡಿದ್ದಾರೆ.
ಈ ವೇಳೆ ಕಡಿದು ಹಾಕಿದ ಹಲಸು, ಮರುವ ,ಮಾವು ಜಾತಿಯ 10 ದಿಮ್ಮಿಗಳು 2.604 ಘ.ಮೀ ಮತ್ತು ಕಟ್ಟಿಗೆ 3.000 ಘ.ಮೀ ಇದರ ಅಂದಾಜು ಮೌಲ್ಯ 50,000 ಅಗಿದ್ದು ಎಲ್ಲವನ್ನು ವಶಪಡಿಸಿಕೊಂಡಿದ್ದಾರೆ ಪರವಾನಿಗೆ ಪಡೆಯದೆ ಮರ ಕಡಿದ ಪ್ರಕರಣದ ಪ್ರಕರಣದಲ್ಲಿ ಚಿಬಿದ್ರೆ ಗ್ರಾಮದ ಮುಕ್ಕುಡ ನಿವಾಸಿ ನಾರಾಯಣ ಶೆಟ್ಟಿ ಮಗ ಸಂತೋಷ್ ಕುಮಾರ್ ಶೆಟ್ಟಿ ಮತ್ತು ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ಮಂಜೋಟ್ಟಿ ನಿವಾಸಿ ಇಬ್ರಾಹಿಂ ಬ್ಯಾರಿ@ ತಮ್ಮೋನು ವಿರುದ್ದ ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್ ಹಾಗೂ DRFO ರವಿಚಂದ್ರ, ಲೋಕೇಶ್ ಮತ್ತು ಸಿಬ್ಬಂದಿ ಭಾಗವಹಿಸಿದರು.