ಎಕ್ಸೆಲ್ ಪ.ಪೂ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಪ್ರಪ್ರಥಮ ಇಂಟಗ್ರೇಟೆಡ್ ಪದವಿಪೂರ್ವ ಶಿಕ್ಷಣ

Suddi Udaya

ಗುರುವಾಯನಕೆರೆ: ವಿಜ್ಞಾನ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರಾಜ್ಯದ ಇತಿಹಾಸದಲ್ಲಿ ನೂತನ ಮೈಲಿಗಲ್ಲು ಸ್ಥಾಪಿಸಿದ ವಿದ್ಯಾಸಾಗರ ಕ್ಯಾಂಪಸ್ ನಲ್ಲಿ ರಾರಾಜಿಸುತ್ತಿರುವ ಎಕ್ಸೆಲ್ ಪದವಿಪೂರ್ವ ಕಾಲೇಜಿನಲ್ಲಿ ಪ್ರಸ್ತುತ 2024- 25 ನೆಯ ಶೈಕ್ಷಣಿಕ ವರ್ಷದಲ್ಲಿ ವಾಣಿಜ್ಯ ವಿಭಾಗದಲ್ಲಿ ಕಾರ್ಯಾರಂಭ ಮಾಡಲಿದೆ.

ಇಂಟಗ್ರೇಟೆಡ್ ಕಲಿಕಾ ವ್ಯವಸ್ಥೆಯ ವಾಣಿಜ್ಯ ವಿಭಾಗವನ್ನು ಹೊಂದುತ್ತಿರುವುದು ರಾಜ್ಯದಲ್ಲೇ ಪ್ರಥಮ ಬಾರಿಗೆ ಎಂಬ ಹೆಗ್ಗಳಿಕೆಯನ್ನು ಪಡೆದುಕೊಳ್ಳುತ್ತಿದೆ. ವಾಣಿಜ್ಯ ವಿಭಾಗದಲ್ಲಿ ವಿಷಯವಾರು ಮೂರು ಸಂಯೋಜನೆಗಳನ್ನು ಒಳಗೊಂಡಿರುತ್ತದೆ. EBAC, EBAS, EBABm ಕೋರ್ಸ್ ಗಳನ್ನು ಒಳಗೊಂಡಿದ್ದು, ಅದರಂತೆಯೇ ಎಕನಾಮಿಕ್ಸ್, ಅಕೌಂಟೆನ್ಸಿ ಹಾಗೂ ಬಿಸಿನೆಸ್ ಸ್ಟಡಿ ವಿಷಯಗಳ ಜೊತೆಗೆ ಕಂಪ್ಯೂಟರ್ ಸೈನ್ಸ್, ಸ್ಟಾಟಿಟಿಕ್ಸ್ ಮತ್ತು ಸಾಮಾನ್ಯ ಗಣಿತವೆಂಬ ಮೂರು ವಿಷಯಗಳ ಸಂಯೋಜನೆಯನ್ನು ಒಳಗೊಂಡಿದೆ. ಇದರೊಂದಿಗೆ ವಿದ್ಯಾರ್ಥಿಗಳಿಗೆ ನಿರಂತರವಾಗಿ CA ಫೌಂಡೇಶನ್, CS ಫೌಂಡೇಶನ್ (CSEET), ಹಾಗೂ CLAT ಕೋಚಿಂಗ್ ಗಳನ್ನು ಪಡೆಯುವಂತಹ ಶೈಕ್ಷಣಿಕ ಅವಕಾಶಗಳನ್ನು ಸಂಸ್ಥೆಯು ಒದಗಿಸುತ್ತಿದೆ. ಸಂಸ್ಥೆಯ ಶೈಕ್ಷಣಿಕ ಚಟುವಟಿಕೆಯ ವಿಸ್ತೃತ ಭಾಗವಾಗಿ ನೂತನ ಕಟ್ಟಡವನ್ನು ಹೊಂದಿಕೊಳ್ಳುತ್ತಿದ್ದು , ಮುಖ್ಯವಾಗಿ ವಾಣಿಜ್ಯ ವಿಭಾಗದ ವಿಷಯಗಳ ಬೋಧನೆಗಾಗಿ ದಶಕಗಳ ಬೋಧನಾನುಭವ ಮತ್ತು ವಿವಿಧ ಕೋರ್ಸ್ ಗಳಲ್ಲಿ ತರಬೇತಿ ಮತ್ತು ಅನುಭವ ಹೊಂದಿದ ನುರಿತ ಪ್ರಾಧ್ಯಾಪಕ ವರ್ಗವನ್ನು ಒಳಗೊಂಡಿರುತ್ತದೆ.

ಎಕ್ಸೆಲ್ ವಿದ್ಯಾ ಸಂಸ್ಥೆಗಳ ಸಂಸ್ಥಾಪಕ ಸುಮಂತ್ ಕುಮಾರ್ ಜೈನ್ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಕಾಲೇಜು ಈ ವರೆಗೆ ವಿಜ್ಞಾನ ಕ್ಷೇತ್ರದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದು, ಇದೀಗ ವಾಣಿಜ್ಯ ಕ್ಷೇತ್ರದಲ್ಲೂ ತನ್ನದೇ ಆದ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಂತಿದೆ. ಕೇವಲ ಪಠ್ಯ ಚಟುವಟಿಕೆಗಳನ್ನು ಮಾತ್ರವಲ್ಲದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತೆರೆದ ಅವಕಾಶವನ್ನು ಹೊಂದಿದೆ. ಇದರೊಂದಿಗೆ ಮಕ್ಕಳು ವಾಣಿಜ್ಯ ವಿಭಾಗದಲ್ಲಿ ಪರಿಣತಿ ಹೊಂದುವುದಕ್ಕಾಗಿ ಅನೇಕ ಪ್ರಾಯೋಗಿಕ ತರಗತಿಗಳು ಹಾಗೂ ಅಭ್ಯಾಸ ಕ್ರಮವನ್ನು ಜೋಡಿಸಿಕೊಂಡಿರುತ್ತದೆ.


ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಆರಂಭವಾಗುವ ವಾಣಿಜ್ಯ ವಿಭಾಗದ ನೇತೃತ್ವವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ನವೀನ್ ಕುಮಾರ್ ಮರಿಕೆಯವರೊಂದಿಗೆ , ವಾಣಿಜ್ಯ ವಿಭಾಗದ ಡೀನ್ ಸಂತೋಷ್ ಕೆ.ಕೆ. ಹಾಗೂ ವಿಭಾಗ ಸಂಯೋಜಕರಾದ ಪ್ರಭಾಕರ ದೇವಾಡಿಗರವರು ವಹಿಸಿಕೊಂಡಿರುತ್ತಾರೆ. ವಾಣಿಜ್ಯ ವಿಭಾಗಕ್ಕೆ ಈಗಾಗಲೇ ದಾಖಲಾತಿ ಪ್ರಾರಂಭವಾಗಿದ್ದು ಆಸಕ್ತರು ದೂರವಾಣಿ 98808 99769, 99022 84110 ಅಥವಾ [email protected], excelpucollege.com ಅಥವಾ ನೇರವಾಗಿ ಕಾಲೇಜು ಕಚೇರಿಯನ್ನು ಸಂಪರ್ಕಿಸಬಹುದೆಂದು ತಿಳಿಸಲಾಗಿದೆ.

Leave a Comment

error: Content is protected !!